ಏತಕೆ ನೀ ಚಿಂತಿಸುವೆ ಹೇಡಿ ಜೀವವೇ ಪ
ವೀತಮೋಹರಾಗನಾಗಿ ವಿಧಿಪಿತ
ದಾತತಾನೆಂದು ತಿಳಿಯಲು ಹೃತ್ತಾಪನಾಶನಾ ಅ.ಪ
ಹೊನ್ನು ಹೆಣ್ಣು ಮಣ್ಣು ಮೂರು ನಂಬಬ್ಯಾಡಲೊ
ನಿನ್ನೊಳಿರುವ ಮೂರ್ತಿಯನ್ನು ಅರಿತು ಬಾಳೆಲೊ 1
ವಂದಿಸುತ ಸಜ್ಜನರ ಕಂಡರಾನಂದ ಪೊಂದುತ
ಸಂದೇಹಗಳೆಲ್ಲ ತೊರೆದು ಸತತ ನಲಿಯುತ 2
ಆತ್ಮವತ್ ಸರ್ವಭೂತನೆಂಬೊ ವಚನವು
ಆತ್ಮನಲ್ಲಿ ಸಮರ್ಪಿಸಿದರೆ ಪಡೆವೆ ಸೌಖ್ಯವು 3
ಸಾಮಜೇಂದ್ರ ವರದ ಶ್ರೀ ಗುರುರಾಮವಿಠಲನ
ಪ್ರೇಮದಿಂ ನಿಷ್ಕಾಮನಾಗಿ ಸೇವಿಸುನುದಿನ 4