ನೋಡುವ ಬನ್ನಿ ಪೂಜೆ ಮಾಡುವ ಬನ್ನಿ |
ಪಾಡಿ ನಲಿದಾಡುತಲಿ ಎನ್ನೊಡೆಯಾ ಲಿಂಗಗ ಪ
ದೇಹ ದೇವಾಲಯದಲ್ಲಿ ಹೃದಯ ಜಲ ಹರಿಯಲಿ |
ಊಹಿಸಿ ನೆಲೆಯಾಗಿ ಹೊಳೆವ ಆತ್ಮಲಿಂಗಗ 1
ಜ್ಞಾನದಭಿಷೇಕ ಸಮ್ಯಕ್ ಜ್ಞಾನದಾ ವಸ್ತ್ರ ನೀಡಿ |
ಧ್ಯಾನದೀಪಾ ಸಂಚಿತದ ಧೂಪಾರತಿಯಾ ಲಿಂಗಗ 2
ಭಾವಭಕ್ತಿ ಗಂಧಾಕ್ಷತೆ ಸುಮನ ಪುಪ್ಪದಲಿಂದು
ಅವಗು ಸುವಾಸನೆಯು ಪರಿಮಳ ಲಿಂಗಗ 3
ಘನ ಗುರು ಮಹಿಪತಿ ಸುತ ಪ್ರಭುಲಿಂಗಗ 4