ಒಟ್ಟು 6 ಕಡೆಗಳಲ್ಲಿ , 2 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ಭಕ್ತವರ್ಯನ ಲಕ್ಷಣ ಪಾವನವಿದು ಕಾಣಾ ಪರಮಾತ್ಮನ ರೂಪ ಚರಾಚರದ ಜಗದಲ್ಲಿ 1 ಇದೇ ಪರಿಯಲಿ ಸ್ವರೂಪದಲ್ಲಿ ಜಗವೆಲ್ಲಾ ಕಾಂಬಾ ಆತ್ಮರೂಪ ಭಗವಂತನೆ ಸತ್ಯ ಮಿಕ್ಕವೆಲ್ಲಾ ಮೀಥ್ಯ ಲಕ್ಷ್ಯವೆಲ್ಲಾ ತನ್ನೋಳ ತಿರುಗಿಸಿ ಆನಂದವ ಪಡೆವ ಕಾಣುವನಿವ ಪರಮಾತ್ಮ ಸರ್ವಾತ್ಮ 2 ಸಂಸಾರದಲಿ ವಿಷಯದ ಭೋಗ ಪ್ರಾರಬುಧದಲಿಪಡೆ ಮಾಯೆಮಾತ್ರವಿದು ಎನ್ನುತ ತಿಳಿವಾ 3 ನಿಜಾಸಕ್ತಿ ಪಡೆಯದಲೇ ನಿರುತ ತನ್ನಯ ಹೃದಯಾಂತ ಪರಮಾತ್ಮನ ನೆನೆವ ದೇಹಾದಿಗಳ ಈ ಪರಿಣಾಮಗಳಿಗೇ ಮೋಹಗೊಳಲಾರ ಕಾಮನೆಯಾ ಬೀಜಾಂಕುರವೆಂದೂ ನಾಟದು ಇವನಲ್ಲೀ ಕಾಣುವನಿವ ಪರಮಾತ್ಮ ಸರ್ವಾತ್ಮ ಪ್ರಭೂಶಂಕರನ ರೂಪಾ 4
--------------
ಶಂಕರಭಟ್ಟ ಅಗ್ನಿಹೋತ್ರಿ
ಒಂದು ಪ್ರಕಾರವೆ ಸ್ವಾಮಿ ಮಂದಿಯ ರಕ್ಷಿಸುವುದು ನಿಂದವರ ದೇಹದಲ್ಲಿ ಹಿಂದೆಮುಂದಭಯವನಿತ್ತು ಪ. ಅಪಾರ ಮಹಿಮ ನೀನು ಒಪ್ಪುವ ಹಯಾಸ್ಯನಾಗಿ ಎಪ್ಪತ್ತೆರಡು ಸಾವಿರ ಇಪ್ಪ ನಾಡಿಗಳೊಳಿದ್ದು 1 ಮುಖ ನಾಸ ನೇತ್ರ ಶ್ರೋತ್ರ ತ್ವಕ್ ನಖೇಂದ್ರಿಯ ತದ್ಗೋಳಕ ಸಕಲರೂಪಗಳಲ್ಲಿ ನೀನೆ ಆಧಾರವಾಗಿದ್ದು 2 ಶ್ವಾಸೋಚ್ಛ್ವಾಸ ಚೇಷ್ಟವಿಚÀಕ್ಷಣ ಹಾಸವಿಲಾಸ ಭೂಷಣ ಗ್ರಾಸಾವಾಸಂಗಳಿಗೆ ನಿವಾಸವಾಗಿ ಪ್ರೇರಿಸುವೆ 3 ಅನಂತ ರೂಪಗಳಲ್ಲಿ ನೀನೆ ಆಧಾರವಾಗಿದ್ದು 4 ಪ್ರಾಣೋಪಾನ ರೂಪಿನಿಂದ ವ್ಯಾನೋದಾನರೂಪನಾಗಿ ವ್ಯಾನೋದಾನ ರೂಪಿನಿಂದ ಉದಾನ ಸಮಾನನಾಗಿದ್ದು 5 ಪೂಜಾ ವ್ಯಾಖ್ಯಾನ ಕೀರ್ತನ ಭೋಜನ ಮಜ್ಜನಸುಖ ಭಾಜನೆಗಳಲ್ಲಿದ್ದು ಪೂಜ್ಯನಾಗಿ ಪ್ರೇರಿಸುವ 6 ವಿಶ್ವ ತೇಜಸ್ಸು ಪ್ರಾಜ್ಞಾ ತುರ್ಯಾ ಅವಸ್ಥಾತ್ರಯಂಗಳೆಲ್ಲ ಕೊಡುವೆ ಜಾಗ್ರತ್ಸ್ವಪ್ನ ಸುಷುಪ್ತಿಯಲ್ಲಿ ವಿಶ್ವಪ್ರೇರಕನಾಗಿದ್ದು 7 ಆತ್ಮರೂಪ ಆದ್ಯ ಅನಂತ ಅಂತರಾತ್ಮ ರೂಪನಾಗಿ ಜ್ಞಾ- ನಾತ್ಮ ರೂಪಿನಿಂದ ಪರಮಾತ್ಮರೂಪನಾಗಿ 8 ಅನಿರುದ್ಧ ಸಂಕರ್ಷಣ ಪ್ರದ್ಯುಮ್ನ ಘನ ವಾಸುದೇವ ನೆನೆವರ ಪಾಪ ಪರಿಹರಿಸುವ ನರಹರಿ 9 ನೀನು ನಿನ್ನ ದಾಸರಿಗಾಗಿ ಮನುಷ್ಯಮುಖದಿಂದ ತತ್ವ ತನುಗಳಿಂದ ಕುಡುವ ಅವರವರ ದೇಹ್ಯದೊಳಿದ್ದು 10 ಸರ್ವರೊಳಗೆ ನೀನಿದ್ದು ಅವರವರ ವಿಭಾಗದ ಕರ್ಮ ಪರೀಕ್ಷಿಸಿ ಪ್ರೇರಿಸುವ ವರ ಶ್ರೀಹಯವದನ 11
--------------
ವಾದಿರಾಜ
ನೋಡು ನೋಡು ಜೀವನೆ ನೀ ನಿನ್ನಯ ನಿಜರೂಪವಾ ತಿಳಿದು ನಲಿದು ಜ್ಞಾನಪಥದಿ ಆನಂದವ ಹೊಂದು ನೀ ಪ ಅಮರನಾದ ಆತ್ಮ ನೀನು ಆನಂದದ ನಿಧಿಯೇ ನೀ ಅರಿತು ಇದನು ನಿನ್ನ ಮನದಿ ಶಾಂತರೂಪನಾಗು ನೀ 1 ನಾನೆನ್ನುವ ಅನಿಸಿಕೆಯದು ಅಡಗಲು ತಾನುಳಿಯುವಾ ತೋರಿಕೆಯನು ಮೀರಿದಾ ನಿರ್ವಿಕಲ್ಪ ನೋಡು ನೀ ಶ್ರವಣ ಮನನ ನಿದಿಧ್ಯಾಸ ಸಾಧನೆಗಳ ಮಾಡುತಾ ತಿಳಿವುದಾತ್ಮರೂಪ ನಾನೆ ಎಂದು ನಿನ್ನ ಮನದಲಿ 2 ಮನದೊಳಗೀಪರಿಯಾ ದೃಢತರದಲಿ ನಿಶ್ಚಿತಮಾಡೀ ದೇಹ ಮನಸು ಬುದ್ಧಿಗಳಿವು ನಾನಲ್ಲೆಂದರಿಯುತ ತೋರಿ ಅಡಗುತಿರುವ ಜಗವು ಕನಸೇ ಎಂದರಿತು ನೀ ಪರಮಸತ್ಯ ಆತ್ಮರೂಪ ನಾನಿಹೆನೆಂದರಿತುಕೋ 3 ಪ್ರೇಮರೂಪ ನೀನೆ ಎಂದು ಸಾರಿ ಪೇಳ್ದ ಜ್ಞಾನವ ಆ ಮಹಾತ್ಮಶಂಕರಗುರುರಾಜನ ನುಡಿ ತಿಳಿಯೋ ನೀ 4
--------------
ಶಂಕರಭಟ್ಟ ಅಗ್ನಿಹೋತ್ರಿ
ಬೇಡುವೆ ನಾ ಯಾದವಾ ಬÉೂೀತಿ ಮನದ ಮೋಹವಾ ಓಡಿಸುತಲಿ ಮಾಧವಾ ನಿನ್ನ ಸೇರಿಕೊಂಬುವಾ ನೀಡು ಇನಿತು ಭಾಗ್ಯವಾ ನಾನು ಇದುವೆ ನನ್ನದು ಮಾನವಗಿದು ಪಾಶವು ದೀನಬಂಧು ಇವನು ನೀ ಮಾಣದೆ ಬಿತಿಸೈ ಪ್ರಭೋ ಬೇಡಿಕೊಂಬೆ ಹೇ ವಿಭೋ ನೀನೆ ಪರಮಸದ್ಗುರು ಹೃದಯದಲ್ಲಿ ನೆಲೆಸಿದಾ ಆತ್ಮರೂಪವನು ಸದಾ ಮುದದಿ ತಿಳಿಯುವಂತೆ ನೀ ಸನ್ಮತಿ ದಯಪಾಲಿಸೈ ಸದಮಲಾತ್ಮಶಂಕರಾ ಬೇಡುವೆ ನಿನಗೀಶ್ವರಾ
--------------
ಶಂಕರಭಟ್ಟ ಅಗ್ನಿಹೋತ್ರಿ
ಬೋಧಿಸು ಗುರುವರನೇ ಆತ್ಮರೂಪನೇ ಬಾಧೆಯ ನೀಗುಸು ಬೋಧಾತ್ಮನೇ ಶಾಂತಿಯನೀವಾ ಭ್ರಾಂತಿಯ ಕಳೆವಾ ಏಕಾಂತಪೂರ್ಣ ನಿರಾತಂಕವಾದ ಚಿಂತೆದೂರಮಾಡುವಾ ಅಂತರಾತ್ಮಜ್ಞಾನವಾ ಸಂತೋಷದಿಂದ ತಿಳಿಸೈ ಮಹಾತ್ಮನೆ ಸದ್ಗುರುರಾಯಾ ಕರುಣಿಸು ಜೀಯಾ ಮಾಯಾ ಮಹಾಮೋಹನಿಧಿಯಾ ಜ್ಞಾನಬೋಧ ನೀಡುವಾ ಸ್ವಾನುಭಾವ ತೋರುವಾ
--------------
ಶಂಕರಭಟ್ಟ ಅಗ್ನಿಹೋತ್ರಿ
ವಿಷಯ ಸುಖ ಕ್ಷಣಭಂಗುರ ಕೊನೆಯಲಿಯಿದು ದುಃಖರೂಪ ಪೂರ್ಣಶಾಂತಿ ದೊರಕದು ಈ ಪ ಮೋಹದಿಂದ ಬಯಸುತಿರುವ ಇಹಪರಲೋಕಗಳ ಸುಖವು ನಾಶವಂತ ಕೊನೆಯಲೊಮ್ಮೆ ಕ್ಲೇಶದಾಯಕವು ತಿಳಿಯೈ 1 ಪರಮಸೌಖ್ಯ ಆತ್ಮರೂಪ ಅರಿತುಕೊಂಡು ನಿನ್ನೊಳಗೆ ಮರುಳಾಗದೆ ವಿಷಯಸುಖಕೆ ಗುರುಶಂಕರನಡಿ ಸೇವಿಸು 2
--------------
ಶಂಕರಭಟ್ಟ ಅಗ್ನಿಹೋತ್ರಿ