ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳೈಯ್ಯಾ ಆತ್ಮರಾಮಾ | ಯತಿ ಮುನಿಜನ ಪ್ರೇಮಾ | ಏಳೆಯ್ಯ ಘನಶಾಮಾ | ಎನ್ನಪಾಲಿಸೈ ಗುಣಧಾಮಾ ಪ ಬೋಧ ಸುರ್ಯನು ಬರಲಿ | ಮರವಿನ ಕತ್ತಲೆ ತೆರಳಿ | ಬೆಳಗಾಯಿತು ಮನದಲ್ಲಿ 1 ವಾದತಾರೆಗಳಡಗಿ | ವಿಕಸಿತ ಹೃತ್ಕಮಲಾಗಿ | ಸಾಧನ ಪಕ್ಷಿಗಳೊದಗಿ | ಕಲಕಲಿಸುತಿವೇ ಬಹುವಾಗಿ 2 ವಿವೇಕಾದ ಭರತಾ || ವೈರಾಗ್ಯ ಶತೃಘ್ನ ತಾ | ಸಾವಧ ಲಕ್ಷ್ಮಣ ನಿರುತಾ ಪದಸೇವೆಗೆ ನಿಂತರು ತ್ವರಿತಾ 3 ಶಮದಮವೇ ನಿಸ್ಸೀಮಾ | ವಿಭೀಷಣ ಸುಗ್ರೀವ ನೇಮಾ | ಜಾಂಬವ ಹನುಮಾ4 ಶಾಂತಿ ಸೀತೆಯು ವಲಿದು ನಿಂತಿಹಳೈ ಕೈಮುಗಿದು | ಚಿಂತಿತಾರ್ಥವನೇ ಕೊಡು | ಮಹಿಪತಿ ಸುತಗೊಲಿದು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಗುರು ಆತ್ಮರಾಮ ಸುರಮುನಿ ಸೇವಿತನಾಮ ಸಜ್ಜನ ಹೃದಯ ವಿಶ್ರಾಮ ಶ್ರೀಹರಿ ಸರ್ವೋತ್ತಮ 1 ದೀನೋದ್ದಾರಣ ರಾಮ ಅನಾಥ ಬಂಧು ನಿಸ್ಸೀಮ ಅನಂತ ಗುಣಮಹಿಮ ಶ್ರೀನಾಥ ಕಲ್ಪದ್ರುಮ 2 ಗುರುವರ ಪರಂಧಾಮ ಪತಿತಪಾವನ ನಾಮ ಮಹಿಪತಿ ತಾರಕರಾಮ ಸದ್ಗತಿಸುಖ ವಿಶ್ರಾಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು