ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಇ) ಆತ್ಮನಿವೇದನೆಯ ಕೃತಿಗಳು ಇದನಾದರು ಕೊಡದಿದ್ದರೆ ನಿನ್ನ ಪದಸೇವೆಗೆ ಜನರೊದಗುವರೆ ಪ ದೊರೆತನವಾಗಬೇಕೆನಲಿಲ್ಲ ಬಲು ಸಿರಿತನವನು ವಾಂಛಿಸಲಿಲ್ಲ ಪರಿಭೋಗದ ಸ್ಪøಹೆ ಎನಗಿಲ್ಲ ನಿನ್ನ ಸ್ಮರಣೆಯೊಂದಿತ್ತರೆ ಸಾಕಲ್ಲ 1 ಅನ್ನವಸ್ತ್ರವ ಕೇಳುವದಿಲ್ಲ ಒಳ್ಳೆ ಚಿನ್ನ ಬಣ್ಣವ ಕೊಡು ಎನಲಿಲ್ಲ ಹೆಣ್ಣು ಮಣ್ಣಿನೊಳಗಾಸೆ ಎನಗಿಲ್ಲ ಪರಿ ಪೂರ್ಣ ನೀನೊಲಿದರೆ ಸಾಕಲ್ಲ 2 ಸುರರ ಭೋಗದಿ ಮನವೆನಗಿಲ್ಲ ಪುಲಿ ಗಿರಿದೊರೆ ಬಲ್ಲೆ ನೀನಿದನೆಲ್ಲ 3
--------------
ವೆಂಕಟವರದಾರ್ಯರು
ಆತ್ಮನಿವೇದನೆಯ ಕೀರ್ತನೆಗಳು ಆತನೆಯನ್ನ ತಾತನು ಮೆರೆದಾತನೆಯನ್ನ ತಾತನು ಪ ತಂದಿನ ಅಗಲಿದ ಕಂದ ಕಾನನದೊಳು ಬಂದು ಅಂಗುಟ ಊರಿನಿಂದುತ್ವರಾ ಇಂದಿರೇಶ ಭವಬಂಧ ಮೋಚಕ ಪೊರೆಯಂದೆನೆ ಧೃವನಿಗೆ ಚಿರಪದವಿ ಕೊಟ್ಟಾತನೆಯನ್ನ ತಾತನು 1 ದುರುಳತನಪರಿಹರಿಸ ಬೇಕೆನೆ ಮಾನವ ಪರಮಕರುಣಿ ಮುರಹರನೆ ತಡಿಯದಲೆ ಪೊರೆಯನೆ ತರುಣಿಯ ಮೊರೆ ಕೇಳಿದಂಥಾತನೆ 2 ಶಿರಿಗೋವಿಂದ ವಿಠಲ ವೇದ ವಂದಿತ ಪತಿ ಹರಿಪರನೆನ್ನುತ ಪರಮ ಭಕುತಿಯಿಂದ ಸ್ಮರಿಸುವವರ ಕರಪಿಡಿಯಲೋಸುಗ ತನ್ನ ಕರಚಾಚಿಕೊಂಡು ನಿಂತಾತನೆ 3
--------------
ಅಸ್ಕಿಹಾಳ ಗೋವಿಂದ
ಆತ್ಮನಿವೇದನೆಯ ಕೀರ್ತನೆಗಳು ಕರವ ಸುಖಪೊಂದಲು ಪ ಬಹು ಜನ್ಮದಿ ಅ.ಪ ಹರಿ ತೋಷಕ ಬಿದಿರಿನಕೊಳಲು 1 ಪ್ರಸಾದವ ಕಮಲೋಧ್ಬವ ವಿಭವ ವಂಶೋದ್ಬವ 2 ಸುಧೆ ಸವಿಯಲು ನಿಂದಿರುವಳು 3
--------------
ಕಾರ್ಪರ ನರಹರಿದಾಸರು
ಆತ್ಮನಿವೇದನೆಯ ಹಾಡುಗಳು ಅಗಣಿತ ಗುಣ ಸಮುದ್ರ ನೀನು ಪ ಕಮಲಭವಗೆ ಮಿಕ್ಕವರ ಪಾಡೇನು ಅ.ಪ ಕಮಲ ನಿವಾಸನೆ 1 ಎನ್ನನಾದಿಕರ್ಮ | ಕಳೆಸುವುದು ಮುನ್ನು ನಿನಗೆ ಧರ್ಮ ಭವ ವಾರಿಧಿಯೊಳು ಭಿನ್ನೈಸುವುದೇತಕೆ ನೀನರಿಯಾ 2 ದ್ವಾಸುಪರ್ಣ ಶ್ರುತಿಯ | ಪ್ರಮಾಣದಿ ದಾಸನು ನಾನೈಯ್ಯ ಓ ಸೀತಾಪತಿ ಗುರುರಾಮ ವಿಠಲ ಶ್ವಾಸ ಬಿಡುವದಕೆ ಸ್ವತಂತ್ರವೆನಗಿಲ್ಲ 3
--------------
ಗುರುರಾಮವಿಠಲ
ಆತ್ಮನಿವೇದನೆಯ ಹಾಡುಗಳು ಡಂಭಕದ ಭಕುತಿಯನು ಬಿಡು ಕಂಡ್ಯ ಮನವೆ ಪ ಅಂಬುಜಾಕ್ಷನು ಒಲಿಯ ಅನಂತ ಕಾಲಕ್ಕು ಅ.ಪ. ಬಹಿರ ಅಂಗಡಿ ಹೂಡಿ ಜನರ ವಂಚಿಸಿದರೆಅಹಿಕ ಫಲವಲ್ಲದೆ ಮೋಕ್ಷವುಂಟೆ ?ವಿಹಿತಾ ವಿಹಿತವ ತಿಳಿದು ಸತ್ಕರ್ಮ ಕಿಂಚಿತು ಮಾಡೆದಹಿಸುವುದು ಅಘರಾಶಿ ಅಹಿಶಾಯಿ ಒಲಿವ 1 ವರ ವೈಷ್ಣವರು ಬಂದು ನಿಲಲು ವಂದಿಸದಲೆಹರಿ ಪೂಜೆ ಮಾಳ್ಪೆನೆಂದು ಕುಳಿತುಕೊಂಬೆಅರಿಯದ ಊರೊಳಗೆ ಅಗಸರ ಮಾಳಿಯೇಹಿರಿಯ ಮುತ್ತೈದೆಯು ಎಂದು ಕರೆಸುವಂತೆ 2 ಜಪವ ಮಾಡುವೆನೆಂದು ಮುಸುಕನಿಟ್ಟು ಕುಳಿತುತಪಿಸುವೆ ಒಳಗೆ ನೀ ಧನದಾಸೆಯಿಂದೆಕುಪಿತ ಬುದ್ಧಿಯ ಬಿಟ್ಟು ಮೋಹನ್ನ ವಿಠ್ಠಲನಗುಪಿತ ಮಾರ್ಗದಿ ಭಜಿಸಿ ಸುಪಥವನುಸರಿಸೆ 3
--------------
ಮೋಹನದಾಸರು