ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ಆತ್ಮನಿವೇದನಾ ಕೃತಿಗಳು ಏನು ಹೇಳಲಯ್ಯ ರಂಗ ಎಲ್ಲಿ ಹೋಗಲಯ್ಯ ನನ್ನಮನಸು ಮಂಗವಾಗಿ ದೂರ ತಳ್ಳಿಹುದಯ್ಯ ಪ ಎಲ್ಲೆಯಿಲ್ಲದ ಎನ್ನವನು ನೀ ಎಂತುನಿಂತಿಹೆ ಸುಮ್ಮನೆ ಎಲ್ಲವಾಗಿಕೂಡಿಕೊಂಡಿಹೆನಿನ್ನಚರಣಭರಿಸುಮಾಪತೇ ಕ- ಮಲಾಪತಿ ನೀ ಕರುಣದಿಂದಲಿ ನಡೆಸಲಾರೆಯಾ ನನ್ನನು ಅ.ಪ ನಡೆಯಲಾರದೆ ಕಾಲುಬಿದ್ದಿದೆ ಕೋಪಗೊಳ್ಳದೆ ಬಂದು ನನ್ನಲಿ ನಿಂತು ಸಲಹೈ ದೇವನೇ ಅಪ್ಪಶೆಲ್ವನೆ ನಿನ್ನ ಬಿಟ್ಟರೆ ಕಾದು ಕುಳಿತಿಹರಾರಯ್ಯ 1
--------------
ಸಂಪತ್ತಯ್ಯಂಗಾರ್
(ಆ) ಆತ್ಮನಿವೇದನಾ ಕೃತಿಗಳು ಪರಿ ಪ ನೊಂದಮನವ ನೋಯಿಸದೆ ಹರಸು ಬೇಗ ಶ್ರೀಹರಿ ಅ.ಪ ನನ್ನ ಹೃದಯ ವೀಣೆಯೇಕೊ ಇನ್ನೂ ನಿನಗೆ ಕೆಳಿಸದೆ ಸನ್ನುತ ವೀಣೆ ನುಡಿಸಿ ನುಡಿಸಿ ಸೋತೆ ನಿನ್ನ ಕಾಣದೆ 1 ನೋಡೆ ಇರದ ನಿನ್ನ ರೂಪ ಮನದಲೇಗೊ ನಿಂತಿದೆ ಹಾಡಿ ಹಾಡಿ ಮಧುರಗೀತೆ ಆ ನೆನಪಿನಲ್ಲೆ ದಣಿದಿಹೆ 2 ನೀ ಕರುಣಿಸಿದೆ ವಿಶ್ವರೂಪವನು ಕಂಡಳಾ ಯಶೋದೆ ಬ್ರಹ್ಮಾಂಡವನು 3 ನಂಬಿ ನಿನ್ನನೆ ಭಜಿಸುತಲಿದ್ದ ಭಕ್ತ ಸುಧಾಮನ ರಕ್ಷಿಸಿದಾತನೆ ಸಲಹು ಜಾಜಿಪುರೀಶ ಚೆನ್ನಕೇಶವನೆ 4
--------------
ನಾರಾಯಣಶರ್ಮರು
(ಈ) ಆತ್ಮನಿವೇದನಾ ಕೃತಿಗಳು ಅಕಟಕಟ ಬಹಳ ಬಡತನವಡಸಿದುದೆ ನಿನಗೆ ಅಕಳಂಕ ಚರಿತ ಹರಿಯೆ ಪ ಪ್ರಕಟತನದಿಂ ಗೋದಾನಕ್ಕೆ ಕೈನೀಡುವರೇ ಸುಖಮಯ ಶರೀರ ಚನ್ನರಾಯಾ ಅ.ಪ ಹಿಂದೆ ಯಜ್ಞದಲಿ ಬಲಿಯಿತ್ತ ಭೂದಾನಕ್ಕೆ ದಂದಿಗೆ ಸಾಲದಾಯಿತೆ ಅಂದು ಕರ್ಣನು ಕೊಟ್ಟ ದಾನವನು ನೀ ಪಿಡಿದು ದಂದಿಗೆ ಸಾಲದಾಯಿತೆ ಇಂದು ನಿನ್ನಯ ದಾಸಾನುದಾಸನು ಕೊಟ್ಟ ಗೋದಾನ ದೊಂದೊಂದು ಗೋಗಳಿಗೆಛಂದದಲಿ ನಿಂದು ದಾನವ ಕೊಂಡೆಯಾ ಸ್ವಾಮಿ 1 ಉರದೊಳಗೆ ಅನವರತ ವಾಸವಾಗಿರುತಿಪ್ಪ ಶರಧಿಸುತೆ ಕೈಬಿಟ್ಟಳೇ ಬೆರೆತು ಪೋದುದೇ ಪಾಲ್ಗಡಲು ಮುನಿಸಿಕೊಂಡು ಬರಡಾಯಿತೇ ಕಾಮಧೇನೂ ತಿರುಕ ಹಾರುವನಂತೆ ಪರಿಪರಿಯ ದಾನಕ್ಕೆ ಭರದಿ ಕೈ ಒಡ್ಡುತಿಹರೆ ಪುರುಷೋತ್ತಮನೆಂಬ ಅಭಿಮಾನವಿನಿತಿಲ್ಲದೇ ದೂರಿಗೊಳಗಾಗಬಹುದೆ ಸ್ವಾಮಿ 2 ಇತ್ತ ದಾನದ ಗೋವುಗಳನೆಲ್ಲ ಗುಡಿಯೊಳಗೆ ಮೊತ್ತದಿಂ ಕೂಡಿಕೊಂಡೂ ಒತ್ತಿ ಮುದ್ರೆಯನು ನಾಮವನಿಟ್ಟು ಬಾಲಗಳಿ ಗೆತ್ತಿ ಘಂಟೆಗಳ ಕಟ್ಟೀ ಅರ್ಥಿಯಿಂ ತೋರಿಸಿ ಯೆನ್ನ ಕುಲಕೋಟಿಗಳಿ ಗಿತ್ತೆ ಸುರಪದವನು ಕರ್ತುೃ ವೈಕುಂಠ ವೇಲಾಪುರಾಧೀಶ್ವರನೇ ಭೃತ್ಯನ್ನ ಕಾಯೊ ಸತತ ಸ್ವಾಮಿ 3
--------------
ಬೇಲೂರು ವೈಕುಂಠದಾಸರು
(ಉ) ಆತ್ಮನಿವೇದನಾ ಕೃತಿಗಳು ಅಭಯ ಪ್ರದಾಯಕ ಶ್ರೀರಮೇಶ ಉಭಯವೇದ ಪೂಜಿತ ಪಾದಪದ್ಮ ಪ ಅನುಮಾನಿಸದಿರೊ ಶಿಶುವಾದೆನ್ನೊಳು ಏನತಿ ಕೋಪವೂ ಅಪ್ರಮೇಯದೇವ ಅ.ಪ ಅನ್ನ ವಸ್ತ್ರಗಳನೀವುದೆನಗೆ ಯೆಂದು ಯನ್ನ ತಂದೆ ಜಾಜೀಶನೆಂದು ಬಂದೆನಲ್ಲದೆ 1 ಇನ್ನು ಕಾಯ್ವರಾರಿರುವರಯ್ಯಾ ಮನ್ನಿಸುತ್ತಾ ನೀ ನಿನ್ನಕಂದನಾ ಬಿನ್ನಪವನು ಕೇಳು ಚೆನ್ನಕೇಶವಾ 2
--------------
ಶಾಮಶರ್ಮರು
(ಉ) ಆತ್ಮನಿವೇದನಾ ಕೃತಿಗಳು ಎಂದಿಗೊ ಕಂದನ ಪಾಲಿಸುವದು ಇನ್ನೆಂದಿಗೊ ಪ ಅಂದಿನಿಂದಲಿ ನಿನ್ನ ಸುಂದರ ಸೇವೆಗೆ ಬಂದು ಬೇಡುವೇನೋ ಮುಕುಂದ ಮಾಧವಾ 1 ಸಾಧು ಸಜ್ಜನರೊಳು ಭೇದವಳಿದು ನಿಜ ಪಾದವ ಕಾಣುವ ಬೋಧೆ ಆನಂದ 2 ವಾರವಾರ್ಚಿತ ಹರಿ ದಾಸ ತುಲಸಿರಾಮಾ ದೇಸಿಕ ನಿನ್ನ ನಿಜ ದಾಸನಾಗುವುದು3
--------------
ಚನ್ನಪಟ್ಟಣದ ಅಹೋಬಲದಾಸರು
ಆತ್ಮನಿವೇದನಾ ಸ್ತುತಿಗಳು ಅಗಲಿಸದಿರು ಎನ್ನನು ನಿನ್ನ ಬಿಟ್ಟಗಲಿಸದಿರು ಎನ್ನನು ಪ ಅಗಣಿತ ನಿಗಮಗೋಚರ ನಿನ್ನ ಪಾದವ ಬಿಟ್ಟು ಅ.ಪ ವ್ಯಾಕುಲವನು ಬಿಡಿಸಿ ಅನೇಕ ಸೇವೆಗಳಿತ್ತು ಲೋಕನಾಯಕ ಎನ್ನ ಸಾಕಿಸಲಹಿಕೊ 1 ನಿತ್ಯ ಸಂಸಾರವನು ರಂಗಯ್ಯ ನಾ ಸತ್ಯವೆಂದು ತಿಳಿದು ಸತ್ಯಮೂರುತಿ ನಿಮ್ಮ ಪಾದಪದ್ಮದ ಭಕ್ತಿ ಹತ್ತದೆ ಈ ಮನಸು ವ್ಯರ್ಥವಾಯಿತು ದೇವ 2 ತಂದೆತಾಯಿಯು ನೀನೆ ರಂಗಯ್ಯ ಬಂಧುಬಳಗವು ನೀನೆ ಆ ನಂದದಿಂದಲೆ ರಕ್ಷಿಪ ಜಗತ್ಪತಿ ನೀನೇ ಬಂಧನವನು ಬಿಡಿಸಿ ಮುಕ್ತಾನಂದವ ತೋರಿಸು 3 ವಾಸವ ಮಾಡಿಸಿಲ್ಲಿ ರಂಗಯ್ಯ ಘಾಸಿಯ ಪಡಿಸದೆ ಅನಾ ಯಾಸದ ಮರಣವನಿತ್ತು ಎನಗೆ ವಸುದೇವನೆ ನಿಮ್ಮ ಪಾದವಾಸವ ಮಾಡಿಸು 4 ನಿಂದೆನ್ನ ಹೃದಯದೆ ವಾಸಮಾಡಿ ಆ ನಂದದಿಂದಲೆ ರಕ್ಷಿಸು ವೆಂಕಟರಂಗ 5
--------------
ಯದುಗಿರಿಯಮ್ಮ
ಆತ್ಮನಿವೇದನಾಸ್ತುತಿಗಳು ಸನ್ನುತ ವನಜಭವಾನುತ ಪ ಮುನಿಜನವಂದಿತ ಅನಘ ವಿರಾಜಿತ ಅ.ಪ ಭಕುತಿಯಲ್ಲವೆ ಜೀಯ ಮುಕುತಿಗೊಂಡಿಹನಯ್ಯ ವಿಕಳನಾ ಮುನಿಗೇಯ ಸುಕವಿಪೂಜಿತಕಾಯ 1 ಮರೆಯಬೇಡವೋ ಯನ್ನ ಗರುಡಗಮನ ನಿನ್ನ ಚರಣ ಸೇವಕರನ್ನ ನಿರುತನೆನೆವೆ ಮುನ್ನ 2 ನಡುಗಡಲಿನೊಳಿಹೆ ತಡಬಡಿಸುತಲಿಹೆ ಪಿಡಿಯಲು ತೃಣವಿಲ್ಲ ನುಡಿವರು ಗತಿಯಿಲ್ಲ 3 ತಾಮಸನಯ್ಯ ಬೇಡ ನೀ ಮನಸೋಲಬೇಡ ಪಾಮರ ವರದನೆ | ರಾಮದಾಸಾರ್ಚಿತನೆ4 ಮಾಂಗಿರಿವರವಾಸ ರಂಗನಾಥನೆ ಶ್ರೀಶಾ ಹಿಂಗದೆ ಯನ್ನಂತರಂಗದೆ ನಿಲೊ ಈಶಾ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್