ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿಳಿದವನೇ ಪೂರ್ಣಾ | ತಿಳಿವಿಕೆಯೊಳು ತನ್ನಯ ಖೂನಾ ಪ ತಿಳಿವಿಕೆ ತಿಳಿವದು ಯರಡಿಲ್ಲೆಂದು | ತಿಳಿದೇ ನರ ಬಾಹಂಭ್ರಮ ಜರಿದು 1 ವೇದಾಂತ ಸಾರದ ವಾಜ್ಯನು-ಭವನು | ಸಾಧು ಜನರ ದಯದಲಿ ಪಡೆದನು 2 ಜಲಧಿಯೊಳಗ ಲಹರಿಗಳೇಳ್ವೆಂತೆ | ಸಲೆ ಆತ್ಮನಿಂದಲಿ ಜಗದುದ್ಭವಂತೆ 3 ಪೂರ್ವಾರ್ಧದ ಬಿಸಿಲಿನ ನೆರಳೆಂದು | ದೋರ್ವ ಸಂಸಾರವು ಸ್ಥಿರವಲ್ಲೆಂದು 4 ಗುರುಮಹಿಪತಿ ಚರಣಕ ತಲೆವಾಗಿ | ಬೆರೆದು ಸತ್ವದೊಳಗ ರಜತಮ ನೀಗಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು