ಮಂಗಳಾರತಿಯ ತಂದೆತ್ತಿರೆ ಶುಭಮಂಗಳ ಜಗದಾದಿದೇವಿಗೆ ಪ
ಮಧುಕೈಟಭಾಸುರ ಮರ್ದನ ದೇವಿಗೆಮದನ ಕೋಟಿ ರೂಪ ಮಹಾದೇವಿಗೆಸದಮಲ ಬ್ರಹ್ಮರ ಹೃದಯದ ಆತ್ಮಗೆಮದನಾರಿ ಭೂತೆಗೆ ಆರತಿ ಎತ್ತಿರೆ 1
ಭಾನು ಸಾಸಿರ ಕೋಟಿ ತೇಜ ಮಹಾತ್ಮಳಿಗೆದಾನವಾಂತಕಳಾದ ದಯಾಶೀಲಗೆಮಾನನಿಧಿ ಭಕ್ತರನು ಮರೆಯದೇ ರಕ್ಷಿಪಬಾಣಾರಿ ಜನನಿಗೆ ಆರತಿಯನೆತ್ತಿರೆ 2
ರಕ್ಷಬೀಜಾರಿಗೆ ರಾಕ್ಷಸಧ್ವಂಸಿಗೆಭಕ್ತರ ಸಲಹುವ ಬಗಳಾಂಬೆಗೆಮುಕ್ತಿ ಸದ್ಗುರು ಚಿದಾನಂದವಧೂತಗೆಮುತ್ತಿನಾರತಿಯನೆತ್ತಿರೆ3