ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

--------ಹರಿಯೆನ್ನ ಕೂಡಿಸೊ ಬಿಡದಿನ್ನು ಕೂಡಿಸು ಕೃಪಾನಿಧಿಯೆ ಕೂಡಿಸೆನ್ನ ಧೊರಿಯೆ ಪ ಉದಯದಲಿ ಏಳುತಲಿ ಊರ್ವೀಶ ನಿಮ್ಮಸ್ಮರಣೆ ಹೃದಯದಲಿ ಅನುಗಾಲ ಉಚಿತನಾಗಿ ಪದುಮನಾಭ ನಿಮ್ಮ ಪಾದವನೆ ಪೂಜಿಸುವ ಸದಮಲ ಜ್ಞಾನಿಗಳ ಸಂಗದೊಳಗೆ ಎನ್ನ 1 ನಿತ್ಯನೇಮ ವ್ರತದಲ್ಲಿ ಬೇಕಾಗಿ ಇರುತಲಿ ಅತ್ಯಂತ ಪುರುಷ ಆನಂದದಲ್ಲಿ ಕರ್ತೃ ನೀನಲ್ಲದೆ ಸರ್ವೋತ್ತಮರು ದಾರೆಂದು ನಿತ್ಯ ನೀನೆಂದು ತಿಳಿಯುವ (ತಿಳಿಸುವ ) ಆತ್ಮಕರಸಂಗ 2 ಅನುದಿನವು ನಿಮ್ಮ ಧ್ಯಾನ ಮನದಲ್ಲಿ ಮರೆಯದೆ ದಿನಗಳನು ಕಳೆವಂಥಾ ದ್ವಿಜೋತ್ತಮರಾ ಅನುಸರಿಸಿ ಅವರನನು ಅತಿಮೋದದಿಂದ ಬೆರೆದು ವನಜನಾಭನೆ ನಿಮ್ಮ ಭಜನೆ ಮಾಡುವರ ಸಂಗ 3 ವೇದಶಾಸ್ತ್ರಾದಿಗಳ ಭೇದಗಳನರಿತು ಸತ್ಯ ಬೋಧಗುರು ಕರುಣದಲಿ ಪೂರ್ಣರಾಗಿ ಸಾಧು ಸಜ್ಜನರಾದಂಥ ಸತ್ಪುರುಷರಾ ಸಂಗ 4 ಉಪವಾಸವನೆ ಮಾಡಿ ಉಚಿತ ಕರ್ಮಗಳಿಂದ ತಪಗಳನೆ ಮಾಡುವಂಥ ಧನ್ಯಜನರಾ ಸುಫಲಂಗಳನೆ ಪಡೆದು ಸೂತುತಲಿ ಇರುವರಾ ಅಪರಿಮಿತ ಮಹಿಮ ನಿನ್ನ ಹಾಡಿ ಪಾಡುವರಸಂಗ 5 ಪರಮಾತ್ಮ ನಿನ್ನ ಮಹಿಮೆ ಭಾವದಲಿ ಶೋಧಿಸಿ ಪರಿಪರಿಯಲಿರುವಂಥ ಭಾವಜ್ಞರಾ- ಚರಣೆಯನು ಮಾಡಿ ನಿಮ್ಮ ಸೇವೆಯನು ಮಾಡುವಂಥ ಪರಮ ಭಕ್ತರಾದ ಪುಣ್ಯವಂತರ ಸಂಗ 6 ಗಂಗಾದಿ ಸಕಲ ತೀರ್ಥಂಗಳನು ಆಚರಿಸಿ ಅಂಗಾದಿ ದೋಷವ ಕಳೆದ ಅಧಿಕ ಜನರಾ ಸಂಗಸುಖ ಅಬ್ಧಿಯೊಳು ಸಂತತವು ಬೆರೆವಂಥರಂಗ ' ಹೊನ್ನ ವಿಠ್ಠಲ’ ರಾಯ ಗೋವಿಂದ 7
--------------
ಹೆನ್ನೆರಂಗದಾಸರು
ವಂದಿಸುವೆನು ನಿತ್ಯದೊಳು ವಂದಿಸುವೆನು ಪ ವಂದಿಸುವೆ ಗುರುಮಧ್ವರಾಯನಷ್ಟಾಂಗದೊಳು ನಿಂದಿರ್ದ ವೈಷ್ಣವಮತಚಂದ್ರವಾರಿಧಿಗೆ ಅ.ಪ ಕ್ರೋಧವರ್ಜಿತನಾಗಿ ವೈರಾಗ್ಯವನು ತೊಟ್ಟು ಬಾಧಿಸುವ ಇಂದ್ರಿಯಂಗಳನೆಲ್ಲ ಬಲಿದು ಆಧರಿಸಿ ಕ್ಷಮೆ ದಮೆ ಶಾಂತ ಸದ್ಗುಣದಿಂದ ಮಾಧುರ್ಯದೊಳು ಜನರ ಪ್ರೀತಿಕರನಾದವಗೆ 1 ಭಯವಿವರ್ಜಿತನಾಗಿ ಬಹುಲೋಭವನು ತೊರೆದು ಕ್ಷಯ ಮಾಡಿ ಮೋಹವನು ಹಿಂದುಗಳೆದು ನವವಿಧದ ಜ್ಞಾನವನು ದಶಲಕ್ಷಣಗಳಿಂದ ನಿಯತವತಿ ಕೈಕೊಂಡನಕ್ಷರ ತ್ರಯದೊಳು 2 ಏಳು ಕೋಟಿಯ ಮಹಾ ಮಂತ್ರ ಬಾಹ್ಯದ ಕೋಟೆ ನಾಲಿಗೆ ವಶಮಾಡಿ ನವದ್ವಾರಗಳು ಮೂಲಾಗ್ನಿಯಿಂ ಸುಟ್ಟು ದಶವಾಯುಗಳ ಕದವ ಸಾಲು ನಾದಗಳೆಂಬ ಕಹಳೆವಿಡಿದವಗೆ 3 ದಶವಿಧದ ಘೋಷಗಳ ಬಿಂದು ಪ್ರತಾಪದಿಂ ದಶಮನಾಗಿಯೆ ಮುಂದೆ ಡೆಂಕಣಿಯ ಹಾರಿ ಗಸಣಿಯನು ಬಿಟ್ಟು ಕಳೆಯಿಂದೇಳು ಧಾತುಗಳ ಎಸೆವ ದುರ್ಗಾಂತರಕೆ ತಾಗಲಿಟ್ಟವಗೆ 4 ಒಂದು ಮುಹೂರ್ತದಲಿ ವ್ಯಸನಗಳನು ಹೂಳಿ ಬಂಧಿಸಿಯೆ ಚಂದ್ರಾರ್ಕ ವೀಧಿಗಳ ಪ್ರಣವದೊಳು ಮುಂದೆ ಮೂಲಾಧಾರವೆಂಬ ಅರಮನೆ ಪೊಕ್ಕು ನಿಂದು ನಿಯಮದಿ ಸುಲಿದನದಿಷ್ಠಾನದರಮನೆಯ 5 ಪ್ರತ್ಯಾಹಾರದಿಂ ಮಣಿಹಾರಕದ ಮನೆಯ ಕಿತ್ತು ಕಿಚ್ಚಂ ಹಾಕಿ ಧ್ಯಾನ ಯೋಗದಿ ಬಂದ ಮತ್ತೆ ಸಂಶುದ್ಧ್ದವೆಂಬರಮನೆಯ ಕೋಲಾಹಲದಿ ಉತ್ತಮದ ಅಂಬಿಕಾ ಯೋಗದಿಚ್ಛೆಯೊಳು 6 ಜ್ಞಾನ ಮಂಟಪವೆಂಬ ರಾಜ ಮನೆಯೊಳು ನಿಂತು ಮನದೊಳು ಮೂಲ ಬಂಧದಿ ಆರು ಶಕ್ತಿಗಳ ಹೀನವಾಗಿಹ ಗುಣತ್ರಯವೆಂಬ ಗೊಲ್ಲರನು ವ- ಡ್ಯಾಣ ಬಂಧದಿ ಇರಿವುತಲಿ ಕ್ಷಿಪ್ರದಲಿ 7 ಖೇಚರಿಯ ಯೋಗದಿಂ ಕರಣ ಚತುಷ್ಟಯದ ನೀಚ ಪ್ರಧಾನಿಗಳ ನೆಗಳವನಿಕ್ಕಿ ಕಾಲ ಕರ್ಮದ ಕಣ್ಣುಗಳ ಕಿತ್ತು ಯೋಚನೆಯ ಮಾಡಿದನು ವೀರಾಸನದೊಳು 8 ಮಾಯಾ ಪ್ರಪಂಚವೆಂಬನ್ಯಾಯ ನಾಯಕರ ಕಾಯ ಉಳಿಸದೆ ಸವರಿ ವಾಸ್ತಿಯಿಂದನುಗೈದು- ಪಾಯದಿಂದಾರು ವಿಕಾರಗಳ ಕೈಗಟ್ಟಿ ಬಾಯ ಹೊಯ್ದ ಗುರುವಿಗೆರಗುವೆನು ನಾನು 9 ಇಪ್ಪತ್ತೊಂದು ಸಾವಿರವಾರು ನೂರಾದ ಉತ್ಪವನ ಉಶ್ವಾಸ ನಿಶ್ವಾಸಗಳನೆಲ್ಲ ತಪ್ಪಿಸದೆ ಕುಂಭಕದಿಂದ ಬಂಧಿಸಿಕೊಂಡು ಒಪ್ಪುವನು ಅರೆನೇತ್ರದಿಂದ ಬೆಳಗುವನು 10 ಮುನ್ನೂರ ಅರುವತ್ತು ವ್ಯಾಧಿಗಳ ಲವಳಿಯಿಂ ಬೆನ್ನ ಬೆಳೆಸಿ ಕಪಾಲ ಭೌತಿಯಿಂದಷ್ಟಮದ ವರ್ಣಾಶ್ರಮಂಗಳನು ಏಕವನು ಮಾಡಿಯೆ ನಿರ್ಣಯಿಸಿಕೊಂಡು ತಾ ನೋಡುವವಗೆ 11 ನುತಿಕರ್ಮದಿಂದಷ್ಟ ಆತ್ಮಕರ ಆಸನವ ಜೊತೆಗೂಡಿ ಜಾತ ಮಧ್ಯದ ದೃಷ್ಟಿಯಿಂದ ಅತಿವೇಗದೊಳು ನಡೆವ ಅವಸ್ಥಾತ್ರಯವೆಂಬ ಕೃತಿ ಕುದುರೆಗಳ ಯುಕುತಿಯಲ್ಲಿ ಪಿಡಿದವಗೆ 12 ನಾದದಿಂ ಪಂಚಕ್ಲೇಶ ಪ್ರಭುಗಳನು ಹೊಯ್ದು ಕಾದು ಇರುತಿಹ ಹರಿಗಳಾರು ಬಿಂದುವಿನಿಂ ಸಾಧಿಸುತ ಮಂತ್ರಭ್ರಮಣದಿಂದ ಮಲತ್ರಯದ ಆದಿ ಕರಣಿಕನನ್ನು ಹಿಡಿದವನಿಗೆ13 ದಾತೃತ್ವದಿಂ ಸತ್ಯಲೋಕವನು ತಾ ಕಂಡು ಕಾತರದಿ ಆಕಾರದುರ್ಗವನು ಹತ್ತಿ ಓತಿರುವ ತಿರಿಕೂಟವೆಂಬ ಬಾಗಿಲ ದಾಟಿ ಈ ತೆರದ ಮಹಾದುರ್ಗವನು ಕಂಡವಗೆ 14 ಅಣು ಮಾತ್ರ ಸೂಕ್ಷ್ಮದೊಳು ನೋಡಿ ತಾ ಜ್ಞಾನದೊಳು ಕುಣಿಯೊಳಗೆ ಆ ಪರಂಜ್ಯೋತಿ ಆಗಿರುತಿಪ್ಪ ಗುಣನಿಧಿಯು ವರಾಹತಿಮ್ಮಪ್ಪರಾಯನನು ಕಣು ಮನದಿ ದೃಢವಾಗಿ ನೋಡಿ ಸುಖಿಯಾದವಗೆ 15
--------------
ವರಹತಿಮ್ಮಪ್ಪ
ಹಮ್ಮನಳಿದು ನಮ್ಮ ಮತವ- ನೆಮ್ಮ ಜಯಮುನೀಂದ್ರ ಕೃತಿಯ ರಮ್ಯರಸವ ಸವಿದು ಸವಿದು ನಿಮ್ಮ ದುರ್ಮತಗಳನೆ ಬಿಡಿರೊ ಪ. ಸುಖಮುನಿ ಚತುರ್ಮುಖರು ಕುಮತ ನಿಕರವ ನೋಡಿ ಮನಕೆ ತಂದು ಪಾದ ತೊಳೆಯಲು ಭಕುತಿಭರದಿ ಗಿರೀಶಮುಖ್ಯ ಸುರರು ಶಿರದ ಮೇಲೆ ಲಕುಮಿ ಆತ್ಮಕರಾಗಿ ಧರಿಸಿ ಸುಖಿಸಿದ ಕಥೆ ಸ್ಮøತಿಯೊಳಿರಲು 1 ಯೋಗಿ ಜಯಮುನೀಂದ್ರ ಕೃಪಾ- ಸಾಗರನಾಗಿ ಧರೆಗೆ ಬಂದು ಈ ಗುರುಕೃತಿಗಂಗೆಯ ಬೇಗ ತಾನು ತುತಿಸಿ ಮೈಯ ಯಾಗಗೊಳಿಸಿ ಸಹಸ್ರ ಮುಖದಿ ಭಾಗವತರೆಂಬ ಬುಧರಿಗಿತ್ತ ಭಾಗ್ಯವ ನೀವೆಲ್ಲ ನೋಡಿರೊ 2 ಶ್ರುತಿಮಯವಾದ ಬಹಳ ಬಲು ಯು ಕುತಿಯನೆ ಅಳವಡಿಸಿ ಸು- ಮಂದರ ಹೂಡಿ ಮಥಿಸಿ ಮಧ್ವಮತಾಬ್ಧಿಯ ಯತಿಶಿರೋಮಣಿ ಜಯಮುನಿ ಶ್ರೀ- ಪತಿ ಹಯವದನ್ನ ಬಲದಿ ಶ್ರುತಿಯಮೃತವ ರಚಿಸಿದ ನಮ್ಮ ಕ್ಷಿತಿಸುರರೆ ಕುಡಿದು ನೋಡಿರೋ3
--------------
ವಾದಿರಾಜ