ಸಾಧಿಸಿ ಗುರುಗುಟ್ಟು ಭೇದಿಸಿ ಮನವಿಟ್ಟು ವೇದಕೆ ನಿಲುಕದ
ಹಾದಿಯದೋರುವ ಸದ್ಗುರು ದಯಗೊಟ್ಟು ಧ್ರುವ
ಮಾತಿಲೆ ಆಡುವ ಙÁ್ಞನ ಯಾತಕ ಬಾಹುದೇನ
ಆತ್ಮಕದೋರುವ ನಿಜಖೂನ ಪ್ರತ್ಯೇಕವಾದ ಸ್ಥಾನ 1
ಮಾತೆ ಆಗೇದ ಮುಂದೆ ರೀತ್ಯಡಗೇದ ಹಿಂದೆ
ನೀತಿಯ ತೋರುವ ಗುರುತಂದೆ ಜ್ಯೋತಿಸ್ವರೂಪೊಂದೆ 2
ತಾಯಿತವಾಗೆದ ಗುಟ್ಟು ಧ್ಯಾಯಿಸಿ ರೀತಿ ಇಟ್ಟು
ಆಯಿತು ನಿಜಗುಣ ಬಿಟ್ಟು ಹೋಯಿತು ಜನ ಕೆಟ್ಟು 3
ಗುಟ್ಟು ಕೇಳಿ ಪೂರ್ಣ ಮುಟ್ಟಿ ಮಾಡಿ ಮನ
ಇಟ್ಟುಕೋ ಮಹಿಪತಿಗುರುಬೋಧ ನಿಜಧನ 4