ಭಕ್ತಿಯೆಂಬ ಬೀಜ ಬಿತ್ತಯ್ಯ ಅದರಲ್ಲಿ ಬೆಳೆವ
ಮುಕ್ತಿಯೆಂಬ ಫಲವ ತಿನ್ನಯ್ಯ ಪ
ಭಕ್ತಿಯೆಂಬ ಬೀಜ ಬಿತ್ತಿ ತ್ಯಾಗವೆಂಬ ಕ್ಷೇತ್ರದಲ್ಲಿ
ಶಕ್ತಿ ಮೀರಿ ನೀರ ಸಂಚಿ ಯುಕ್ತಿಯಿಂದ ಸಾಕಿರೋ 1
ಪ್ರೀತಿಯಿಂದ ಮರವ ಸೇರಿ ಧರ್ಮವೆಂಬ ಟೊಂಗೆ ಹತ್ತಿ
ಆತುರದೀ ಜ್ಞಾನವೆಂಬ ಕುಸುಮವನ್ನೇ ಮೂಸಿರೋ 2
ಹರಿಯು ಕೊಡುವ
ಹಣ್ಣ ನೀವು ತೆಗೆದುಕೊಂಡು ತೋಷದಿಂದ ನೋಡಿರೋ 3
ಮುಕ್ತಿಯೆಂಬ ಹಣ್ಣ ನೀವು ಸ್ವಾರ್ಥವೆಂಬ ಸಿಪ್ಪೆ ಬಿಸಟು
ಭಕ್ತರಂತೆ ಕೇಶವಾಯೆಂದು ಭಕ್ತಿಯಿಂದ ತಿನ್ನಿರೋ 4