ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಗನೆ ಕರೆತಾರೇ ಸಖಿಯೇ [ಬೆಗನೆಕರೆತಾರೆ] ಪ ನಾಗಶಯನನವ ಕೂಗದೆ ಬಾರನೆ ಅ.ಪ ಪೂತನಿ ಶಿಶುಗಳ ಫಾತಿಸುತಿಹಳೆಂಬ ಮಾತನವಗೆ ಪೇಳೆ ಭೀತಿಯತೋರಿ ಆತುರದಿಂದವ ಐತರುವನೆ ಸಖಿ ಪ್ರೀತಿಯೊಳೀವೆನೀ ರತುನದ ಹಾರವ 1 ಕರಿ ಧ್ರುವ ಪ್ರಹ್ಲಾದ ತರುಣಿ ಪಾಂಚಾಲಿ ಮೊರೆಯಿಡುವುದ ಹೇಳೆ ಭರದಲಿ ಬರುವ ಉರಗನ ಗರಳದಿ ಕರುತುರು ನೋಯುವ ಪರಿಯ ಬಿತ್ತರಿಸಿ | ಮುರಳೀಧರಗೆ 2 ಸಂಗಡ ಬರದಿರೆ ಭಂಗಿಸುವರು ಗೋ ಪಾಂಗನೆಯರು ಎಂದು ರಂಗಗೆ ಹೇಳೇ ಇಂಗಿತಜ್ಞನು ನಮ್ಮ ಮಾಂಗಿರಿಯರಸನು ಸಂಗಡ ಬರುವನು ಸಂದೇಹವಿಲ್ಲ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಾಮನ ನೋಡಿದೆ ರಘುಕುಲ ತಿಲಕನ ಕಾಯ ಕೌಸಲ್ಯ ತನಯನ ಪ ತಾಮಸ ದೈತ್ಯರ ಲೀಲೆಯಲಿ ಕೊಂದು ಭೂಮಿ ಭಾರವನಿಳುಹಿದ ನಿಸ್ಸೀಮನಅ.ಪ. ತಾಟಕಾದಿಗಳ ಘೋರಾಟವಿಯಲಿ ಪಾಟುಪಡಿಸಿದ ಹಾಟಕಾಂಬರನ ತೋಟಿಗೊದಗಿದ ಮಾರೀಚಾದಿಗಳ ಆಟನಾಡಿಸಿದ ನೀಟುಗಾರ 1 ಹಲವು ಕಾಲದಿ ಶಿಲೆಯಾಗಿರ್ದ ಲಲನೆ ಅಹಲ್ಯೆಯ ಶಾಪವ ಹರಿಸಿ ಕಲುಷವ ಕಳೆಯುತ ಕುಲಸತಿ ಮಾಡಿದ ನಳಿನ ನಯನನ 2 ಹರನ ಧನುವನು ಸ್ಮರನ ಧನುವಿನಂತೆ ತ್ವರದಿ ಮುರಿದು ನಿಂದ ಸುಕುಮಾರನ ಧರಣಿಪ ಜನಕನ ಭಕ್ತಿಗೆ ಒಲಿದು ಧರಣಿಜೆಯ ವರಿಸಿ ಹರುಷವಿತ್ತನ 3 ತಾತನ ಭಾಷೆಯ ಪ್ರೀತಿಯಿಂ ಸಲಿಸೆ ಸೀತೆ ಸಹಿತ ಭ್ರಾತ ಲಕ್ಷ್ಮಣವೆರಸಿ ಆತುರದಿಂದಲಿ ಅರಣ್ಯವನೈದಿ ಕೌತುಕ ತೋರುತ ಚರಿಸಿದವನ4 ಖರದೂಷಣ ತ್ರಿಶಿರಾದಿ ರಕ್ಕಸರ ಅರೆಕ್ಷಣದಲಿ ತರಿದು ಬಿಸುಟವನ ಹಿರಣ್ಯಮೃಗವ ಬೆನ್ನಟ್ಟಿ ಕೆಡಹುತ ವರ ಜಟಾಯು ಶಬರಿಗೆ ಒಲಿದವನ 5 ವಾತಸುತನ ಕಂಡಾತನ ಪದುಳಿಸಿ ತರಣಿ ಸುತಗೆ ಅಭಯವನಿತ್ತ ಜಾತವೇದನೆದುರಲಿ ಸಖ್ಯವ ಮಾಡಿ ಘಾತಕ ವಾಲಿಯ ನಿಗ್ರಹಿಸಿದನ 6 ಕೋತಿ ಕರಡಿಗಳ ಹಿಂಡನು ಕೂಡಿಸಿ ಸೇತುವೆಗಟ್ಟಿಸಿ ಜಲಧಿಯ ದಾಟಿ ಪಾತಕಿ ರಾವಣನÀ ಶಿರಗಳ ಕಡಿದು ಸೀತೆಯ ಸೆರೆಯನು ಬಿಡಿಸಿದಾತನ 7 ಮೊರೆಯನು ಪೊಕ್ಕಾ ವರ ಭೀಷಣನ ಕರುಣದಿ ಕರೆದು ಕರವನು ಪಿಡಿದು ಧರೆಯಿದು ಸ್ಥಿರವಾಗಿರುವ ಪರಿಯಂತ ದೊರೆತನ ಮಾಡೆಂದ್ಹರಸಿದಾತನ 8 ಅಕ್ಕರೆಯಿಂದಲಿ ಅರ್ಚಿಸುವರಿಗೆ ತಕ್ಕಂತೆ ವರಂಗಳ ನೀಡುತಲಿ ಮಿಕ್ಕು ರಾಜಿಸುತಿಹ ಪಂಪಾಪುರದ ಚಕ್ರತೀರ್ಥದಿ ನೆಲೆಸಿಹನ 9 ಕಂತುವೈರಿ ವಿರುಪಾಕ್ಷಗೆ ತಾರಕ ಮಂತ್ರ ನಾಮಕನಾಗಿರುತಿರ್ಪನ ಯಂತ್ರೋದ್ಧಾರನಾಗಿರುವ ಹನುಮನ ಮಂತ್ರಿಯ ಮಾಡಿಕೊಂಡು ರಾಜಿಪನ 10 ದುಷ್ಟ ರಕ್ಕಸ ದಮನವ ಮಾಡಿ ಶಿಷ್ಟ ಜನರುಗಳಿಷ್ಟವ ಸಲಿಸುತ ಶ್ರಿಷ್ಟಿಗೊಡೆಯನೆನಿಸಿ ಮೆರೆಯುತಲಿರುವ ದಿಟ್ಟ ಶ್ರೀ ರಂಗೇಶವಿಠಲನ 11
--------------
ರಂಗೇಶವಿಠಲದಾಸರು
ಹೊತ್ತಾಗಿ ಹೊರಟಿಹೆನು ವೈಕುಂಠಕೆ ಮುಟ್ಟಬೇಕು ನಾನು ಪ ಹೊತ್ತಾಗಿ ಹೊರಟಿಹೆ ಹೊತ್ತುಗಳೆದು ವ್ಯರ್ಥ ವತ್ತರದಿಂ ಪೋಗಿ ಹೊತ್ತೆ ಮುಟ್ಟಬೇಕು ಅ.ಪ ಊರುದೂರಾದಿನ್ನು ಕೇಳದೆ ಅರುಮಾತನಾನು ಊರಜನರ ಮಾತು ಮೀರಿ ಆತುರದಿಂದ ಪಾರವಾರಿಲ್ಲದ ವಾರಿಧಿಯನೀಸಿ 1 ದಾರಿ ಅರಿಯೆ ನಾನು ಬಲ್ಲವರು ತೋರಿರೆ ಮಾರ್ಗವನು ಸಾರಮೋಕ್ಷಕ್ಕಾಧಾರನ ಪಟ್ಟಣ ಸಾರಸೌಖ್ಯ ತಲೆಸೇರಿ ಸಕಲ ಮೀರಿ 2 ಆ ಮಹ ಸುಕೃತಗೂಡಿ ನಾಮಾಮೃತಮಂ ನೇಮದಿ ಸವಿಯುತ ಸ್ವಾಮಿ ಶ್ರೀರಾಮನ ಪ್ರೇಮಯಾನವೇರಿ 3
--------------
ರಾಮದಾಸರು
ರಂಗ ರಥವನೇರಿದನಕ್ಕ- ಮೋಹ- |ನಾಂಗ ನಮ್ಮ ಸೇರದೆ ಪೋಗುವನಕ್ಕ ಪಮಾತುಳಮಥರೆಯೊಳಿಹನಂತೆ - ಅಲ್ಲಿ |ಮಾತಾಪಿತರಿಗೆ ಬಂಧನವಂತೆ, ಇವರು |ನೂತನ ಬಿಲ್ಲಿನ ಅರ್ಥಿಗಳಂತೆ ||ಪೀತಾಂಬರಧರನ ಪೂಜೆ ನೋಡುವೆನೆಂಬ |ಆತುರದಿಂದಿರೆ ಅಕ್ರೂರನೊಡನೆ ಈಗ 1ಬಲರಾಮ ಬಂಧುವಿನೊಡಗೂಡಿ ನಂದ-|ನಡಿಗೆ ಯಶೋದೆಗೆ ವಂದನೆ ಮಾಡಿ-ತಾವು |ಬಿಡಲಾರೆವೆಂದು ಭಾಷೆಯ ನೀಡಿ ||ತಡೆಯೆನೆನುತ ತಾಯಿಗೆ ಭರವಸೆಯಿತ್ತು |ಕಡಲಶಯನನು ಕಾತರದಿಂದಲಿ ಈಗ 2ಮಧುರಾ ಪಟ್ಟಣದ ಮಾನಿನಿಯರು ಅತಿ |ಚದುರೆ ಚೆಂಚಲೆ ಚಾಪಲತೆಯರು-ನಮ್ಮ |ಮದನನಯ್ಯನ ಮೋಹಿಸುತಿಹರು ||ಕಧಿಜನಾಭ ನಮ್ಮ ಪುರಂದರವಿಠಲ |ಪದುಮನಾಭನ ಪಯಣವ ನಿಲ್ಲಿಸಕ್ಕ 3
--------------
ಪುರಂದರದಾಸರು
ರಾಮ ಶ್ರೀರಾಮ ಸೀತಾರಾಮ ಶ್ರೀರಾಮರಾಮನೆ ರವಿಕುಲಸೋಮಶ್ರೀರಾಮಪರಾಮ ರಾಮ ರಘುರಾಮನೆ ದಶರಥರಾಮನೆ ಗುಣಗಣಧಾಮನೆ ಶ್ರೀರಘು ಅ.ಪಕೌಸಲ್ಯಾದೇವಿಯ ಕಂದನೆ ರಾಮಕೌಶಿಕಯಜÕವ ಕಾಯ್ದ ಶ್ರೀರಾಮಹಿಂಸಿಸಿದ ತಾಟಕಿಯನು ಕೊಂದರಾಮಧ್ವಂಸಮಾಡಿದೆ ಶಿವಧನು ಮುರಿದುರಾಮಸಂಶಯವಿಲ್ಲದೆ ಸೀತೆಕರವಪಿಡಿದುತನ್ನಂಶದ ಪರಶುರಾಮನಿಗೊಲಿದನೆ ಶ್ರೀ 1ದಶರಥರಾಮ ನೀನರಸನಾಗೆನಲುಅಸುರಾವೇಶದಿ ಕೈಕೆ ವರವ ಯಾಚಿಸಲುಎಸೆವ ಸಿಂಹಾಸನ ತೊರೆದು ಪೊರಮಾಡಲುಶಶಿಮುಖಿಸೀತಾಲಕ್ಷ್ಮಣರ ಕೂಡಿ ಬರಲುಭರತಗೆ ಪಾದುಕೆ ಕೊಡುತಲಿ ಕಳುಹಿಸಿಗುಹನ ಮನ್ನಿಸಿ ವನರಾಜ್ಯದೊಳ್ ಮೆರೆದೆ 2ವನದೊಳುಮಾಯಾಮೃಗವ ಕಂಡು ಸತಿಯುಮನದಿ ಚಿಂತಿಸಿರಾಮ ತೆರಳೆ ರಕ್ಕಸನುವನಜಾಕ್ಷಿ ಸೀತೆಯ ಕಳವಿನಿಂ ತರಲುವನವನಚರಿಸಿ ಪುಡುಕೆ ಕಂಡು ಕಪಿವರನುಶರಧಿಲಂಘಿಸಿ ಸೀತೆಯನು ಕಂಡು ಹನುಮನುಕುರುಹು ಪಡೆದು ಲಂಕೆ ದಹಿಸುತ ಬರಲು 3ಸೇತುಬಂಧನ ಮಾಡಿ ಕಪಿಗಳ ಕೂಡಿನೀತಿ ಪೇಳಿದ ವಿಭೀಷಣಗಭಯ ನೀಡಿಭೂತ ರಾವಣನ ದಶಶಿರವ ಚಂಡಾಡಿಸೀತಾಸಹಿತ ರಾಮ ಪುಷ್ಪಕವನೇರಿಆತುರದಿಂದಿಹ ಭರತನಿಗ್ವಾರ್ತೆಯಪ್ರೀತಿಲಿ ಕಳುಹಿದ ಶ್ರಿ ರಘುರಾಮ 4ಬಂದ ಶ್ರೀರಾಮಚಂದ್ರ ಬಹುಪ್ರೀತಿಯಿಂದಛಂದದಿಂ ಭರತನ ಮನ್ನಿಸಿ ಮುದದಿಂದಕುಂದಣಮಯದ ಸಿಂಹಾಸನ ಚಂದ-ದಿಂದಲೇರುತ ರಾಮ ನಸುನಗೆಯಿಂದಇಂದಿರಾಸೀತಾ ಸಹಿತ ಅಯೋಧ್ಯದಿಬಂದು ಪೊರೆವ ಕಮಲನಾಭ ವಿಠ್ಠಲನು 5
--------------
ನಿಡಗುರುಕಿ ಜೀವೂಬಾಯಿ
ವನಿತೆ ನೀ ತೋರಿಸೆ ಹನುಮನ ಬೇಗ |ತನು-ಮನ-ಧನವನು ನಿನಗೀವೆನೀಗ ಪಆತುರದಿಂದಲಿ ಉದಧಿಹಾರಿದವನ |ಪ್ರೀತಿಯಲಿ ರಾಮನ ಮುದ್ರೆಯಿತ್ತವನ ||ಘಾತಕರನ್ನು ಮುರಿದಟ್ಟಿದವನ -ಸತಿ|ಸೀತೆಯಪತಿರಘುನಾಥಗರ್ಪಿಸಿದನ1ಪಾಂಡುನಂದನನಿಗೆ ಅನುಜನಾಗಿಹನ |ಪುಂಢರೀಕಾಕ್ಷನ ಚರಣಸೇವಿಪನ ||ಪುಂಡ ಕೌರವ ಶಿರವ ಚೆಂಡನಾಡಿದವನ 2ಎರಡು ಮೂರಾರೊಂದು ಕುಮತ ಖಂಡಿಸಿದನ |ಭರದಿ ಮಧ್ವಮತ ಉದ್ಧರಿಸಿದನ ||ಧರೆಯೊಳಧಿಕ ಶ್ರೀಹರಿಯ ಭಜಕನ |ವರದ ಶ್ರೀಪುರಂದರವಿಠಲರಾಯನ3
--------------
ಪುರಂದರದಾಸರು