ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯೋಗಿಯಾಗೆಲೆ ಇಲ್ಲ ತ್ಯಾಗಿಯಾಗೆಲೆ ಪ ಹಾಗೂ ಹೀಗೂ ಆಗದೆ ಭವ ರೋಗಿಯೆನಿಸದರೆಲೆ ಗೂಗಿ ಅ.ಪ ಮಾತುಮಾತಿಗೆ ನೀತಿವಚನ ಆತುರಕ್ಕಾಗಿ ಕೂಗಿ ಕೂಗಿ ಪಾತಕದೊಳಗೆ ಬಿದ್ದು ಯಮನ ಯಾತನಕಿಳಿಯಬೇಡ ಭವಿ 1 ಕಾವಿಕಪನಿಲಾಂಛನ್ಹೊದ್ದು ಸೇವೆಗೊಂಡು ಭಾವಗೆಟ್ಟು ಸಾವುಹುಟ್ಟು ಬಲೆಗೆ ಬಿದ್ದು ನೋಯಬೇಡೆಲೆ ನೀಚಮತಿ2 ನಿತ್ಯ ನಿತ್ಯವೆನಿಪ ಪರ ಮಾರ್ಥತತ್ತ್ವಗುರ್ತುಯಿಲ್ಲದೆ ಕತ್ತೆಯಂತೆ ಒದರಿ ವ್ಯರ್ಥ ಮೃತ್ಯುಹೊಂದ ಬೇಡ ಮೂರ್ಖ 3 ಸೋಗುಹಾಕಿ ಸಾಧುಯೆನಿಸಿ ಕಾಗೆಯಂದದಿ ತೀರ್ಥಮುಳುಗಿ ಜಾಗರ ಮಾಡಿ ಪೋಗದಿರಲೆ ನರಕಕಧಮ 4 ಭೂಮಿ ಪ್ರೇಮ ತಾಮಸ ನೀಗಿ ಕಾಮ ಕ್ರೋಧ ಲೋಭ ಜೈಸಿ ಭೂಮಿತ್ರಯಂಗಳೊಡೆಯ ಶ್ರೀ ರಾಮನಾಮ ಭಜಿಸಿ ಮುಕ್ತನಾಗೆಲೊ 5
--------------
ರಾಮದಾಸರು