ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಮುದ್ದುಮೋಹನದಾಸರು ಮುದದಿ ಪಾಲಿಸೊ | ಮುದ್ದು ಮೋಹನರಾಯಾ | ಮದ್ಗುರುವರ ಪ್ರೀಯಾ ಪ ಮಧ್ವೇಶನ ಪದ ಪದುಮ ಪೂಜಿಪ ಮಧುಪಾ ಪರಿಹರಿಸೆಲೊ ತಾಪಾ ಅ.ಪ. ಜನುಮ ಪೊತ್ತೆ ನೀ ದೊಡ್ಡ ಬಳ್ಳಾಪುರದೀ | ಅನುನಯದಲಿ ಓದೀ |ಗುಣವಂತೆಯು ಕನ್ಯೆಯ ತಾ ಸ್ವೀಕರಿಸೀ | ಕನ್ಯಾಸೆರೆ ಬಿಡಿಸೀ |ವನಜನಾಭನನು ಕಾಣಲು ಮನಮಾಡೀ | ಶ್ರೀ ವರರನು ಬೇಡೀ |ಗಾನ ಲೋಲ ಮುದ್ದು ಮೋಹನ ವಿಠ್ಠಲನಾ ಘನನಾಮ ಪೊತ್ತೆ ನಿನ್ನಾ 1 ಅಂಗಜಗಳು ಕದಲರ್ಧಾಂಗಿಯನಾಳೀ | ಯಾತ್ರೆಗೆ ಮನತಾಳೀ |ಗಂಗೆಯಾತ್ರೆ ಮೂರೊಂದು ಬಾರಿ ಮಾಡೀ | ಉಡುಪಿಗೆ ಬಲುಬಾರೀ | ತುಂಗ ಮಹಿಮ ನಮ್ಮ ವೆಂಕಟ ನಿಲಯನ್ನಾ | ತುಂಗೆ ತೀರಗನನ್ನಾ |ಭಂಗವಿಲ್ಲದಾನೇಕ ಬಾರಿ ನೋಡೀ | ಮಂಗಳಾಂಗನ ಪಾಡೀ 2 ಸಿರಿ ವಿಜಯ ವಿಟ್ಠಲನ ನಿಜಪುರದಲ್ಲೀ | ಸಂಸ್ಥಾಪಿಸುತಲ್ಲೀ |ಪರಮ ಶಿಷ್ಯರಿಗುಪದೇಶಗಳನ್ನಾ | ವಿರಚಿಸಿದಿಯೊ ಘನ್ನಾ |ಪರಿಸರ ಮತ ಸರ್ವೋತ್ತಮವೆಂದೂ | ಸಾರಿದೆ ದಯಾಸಿಂಧೂ 3 ಸಿರಿ ತಂದೆ ಮುದ್ದು ಮೋಹನರಾ | ಉದ್ಧರಿಸಿದ ಧೀರಾ |ಮಧ್ವ ಮತಾಗಮ ಸದ್ವನದಿ ವಿಹಾರ | ಬುಧಜನರಘ ಹರಾ |ವಿದ್ವದಾರ್ಯ ಮುದ್ದು ಮೋಹನ ರಾಯ | ಮುದ ಬೇಡುವೆ ಜೀಯ 4 ಕೃತನಿತ್ಯಾಹ್ನಿಕನಾಗಿ ತೆವಳಿ ಬಂದೂ | ಚಕ್ರದಿ ಕುಳಿತಂದೂ |ವತ್ಸರ ವಿಳಂಬಿ ವದ್ಯ ಕಾರ್ತೀಕದೀ | ಚತುರ್ದಶಿ ನಡುದಿನದಿ|ಅತುಳ ಮಹಿಮ ಗುರುಗೋವಿಂದ ವಿಠಲನ್ನ | ಹೃದಯಾಬ್ಜದಿ ಪವನಾ | ಆತುಮಾಂತರದಿ ಕಾಣುತಲವನಾ | ಕಿತ್ತೊಗೆದೆಯೊ ತನುವಾ 5
--------------
ಗುರುಗೋವಿಂದವಿಠಲರು