ಜ್ಞಾನಪ್ರದ ನರಸಿಂಹ ವಿಠಲ ನೀ ಸಲಹೊ ಪ
ಧೇನು ವತ್ಸದ ಧ್ವನಿಗೆ ತಾನೇವೆ ಬರುವಂತೆ ಅ.ಪ.
ಕರ್ಮ ಪೂರ್ವಾರ್ಜಿತವ ನಿರ್ಮಲವ ಗೊಳಿಸುತ್ತಭರ್ಮ ಗರ್ಭನ ಜನಕ ಪೇರ್ಮೆಯಲಿ ಇವನಧರ್ಮ ಮಾರ್ಗದಿ ನಡೆಸು ಸುಜ್ಞಾನ ಮತಿಯಿತ್ತುಕರ್ಮನಾಮಕ ಹರಿಯೆ ಶರಣಜನ ಧೊರೆಯೆ 1
ಹರಿಯು ಸರ್ವೋತ್ತಮನು ಶಿರಿಯು ಆತನರಾಣಿಗುರು ವಾಯು ಸುರರೆಲ್ಲ ಹರಿಭೃತ್ಯರೆಂಬವರಮತಿಯನಿತ್ತವಗೆ ಸಂಸ್ಕøತಿಯ ಕ್ಲೇಶಗಳಪರಿಹರಿಸಿ ಪಾಲಿಪುದು ಪರಮ ಕರುಣಿಕಾ 2
ಪತಿ ಇರುವೆ ಮೂಕ ಪುರುಷರ ನೀನು ವಾಕ್ಪತಿಯ ಮಾಳ್ಪೆನಾಕೇಳ್ಪುದರಿದೇನೊ ಪಂಚ ಮುಖ ಭವವಂದ್ಯತೋಕನಿವ ಶರಣಗಿಹ ವ್ಯಾಕುಲವ ಕಳೆಯೋ 3
ಮಗುವಿನೊಚನವ ಕೇಳಿ ಜಿಗಿವೆ ಕಂಬದಲಿಂದನಗೆ ಮೊಗನೆ ತರಳೆಯಾ ಹಗರಣವ ಕಳೆದೇಖಗವರಧ್ವಜ ನಿನ್ನ ಬಗೆಬಗೆಯ ಲೀಲೆಗಳಮಿಗಿಲಾಗಿ ತೋರಿವಗೆ ನಗಧರನೆ ಹರಿಯೇ 4
ನಿತ್ಯತವ ಸ್ಮøತಿಯಿತ್ತು ಭೃತ್ಯನತಿ ಕಷ್ಟಗಳಕಿತ್ತೊಗೆದು ಮಧ್ವಮತ ತತ್ವ ತಿಳಿಸುತ್ತಾಗುಪ್ತ ಮಹಿಮನೆ ಗುರುಗೋವಿಂದ ವಿಠ್ಠಲನೆಭಕ್ತನುದ್ಧರಿಸೆಂದು ಪ್ರಾರ್ಥಿಸುವೆ ನಿನ್ನಾ 5