ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬುಗುರಿ ಆಡೋ ತಮ್ಮ ಬುಗುರಿ ಆಡೊ ಪ ಬಗೆ ಬಗೆ ಜನುಮದಿ ತಿರುಗಿ ತಿರುಗಿ ಬಂದೊದಗತನದನುಭವ ಪರಿಕಿಸಿ ನೋಡೊ ಅ.ಪ. ತನುವೆಂಬುದೆ ಕೊರಡಿನ ತುಂಡುದಿನದ ಕರ್ಮವೆ ಕೊನೇರು ದುಂಡುಮನವೆಂಬುವ ಮೊಳೆಯನು ಚುಚ್ಚಿಕೊಂಡುಘನ ಹರುಷದಿ ಕರದಲಿ ಕೊಂಡು 1 ಭವವೆಂಬುದೆ ನಿನ್ನ ಜಾಳಿಗೆ ನೋಡೋತವಕದಿ ಬಿಡದಲೆ ಬಿಗಿಗಿಸುತ್ತ್ಯಾಡೋಸವಿಯನುಂಡು ನೀ ಹರಿಯನು ಬೇಡೊಜವದಲಿ ಝಾಡಿಸಿ ಭರದಿ ಬೀಸಾಡೊ 2 ಧರೆಯ ಗದುಗಿನ ವೀರನಾರಾಯಣನಚರಣದಿ ಮೊಳೆಯೂರಿ ತಿರುಗುತಲಾಡೊಕರಣಗಳಳೆದು ಏಕ ಚಿತ್ತದಿಸ್ಮರಿಸುತ ನಿಂತು ನಿದ್ದೆಮಾಡೊ 3
--------------
ವೀರನಾರಾಯಣ
ಯಾಕೆ ನೀನು ಹೀಗೆ ಮಾಡುವಿ ವೀರ ಹನುಮ ಯಾಕೆ ನೀನು ಹೀಗೆ ಮಾಡುವಿ ಪ. ಯಾಕೆ ನೀನು ಹೀಗೆ ಮಾಡುವಿ ಜೋಕೆಯಿಂದ ಸಲಹೊ ಎಂಬ ವಾಕು ಕೇಳದೇನೋ ನಿನಗೆ ಬಿಂಕ ಅ.ಪ. ಸತ್ಯವಂತನೆಂಬ ವಾಕು ಎತ್ತ ಪೋಯಿತೀಗ ಬಿರುದು ಒತ್ತಿ ಒತ್ತಿ ಕೇಳಿದರೂ ಉತ್ತರವÀ ಕಾಣೆನಲ್ಲೊ 1 ಒಡೆಯ ರಾಮಭಂಟನೆನಿಸಿ ಒಡವೆ ವಸ್ತು ಇಟ್ಟುಕೊಂಡು ಬಡಿವಾರದಲಿ ನಿಂತರೀಗ ಬಡವರೆಮ್ಮ ಗತಿಯದೇನೊ 2 ವೀರ ಉಡುಪು ಧರಿಸಿಕೊಂಡು ವೀರ ಭೀಮನೆನಿಸಿಕೊಂಡು ಮೋರೆ ಎತ್ತಿ ನೋಡದಿರಲು ದಾರಿಯಾವುದೆಮಗೆ ಪೇಳು 3 ಮುನಿಯ ರೂಪ ತಾಳಿ ಮತ್ತೆ ಮೌನಧರಿಸಿ ನಿಂತರೀಗ ಮಾನತನದಿ ತುತಿಸುವೆಮಗೆ ಏನು ಮುಂದೆ ಗತಿಯು ಇನ್ನು 4 ಬೇಡಲಿಲ್ಲೊ ನಿನ್ನ ಒಡವೆ ಬೇಡಲಿಲ್ಲೊ ನಿನ್ನ ಭಾಗ್ಯ ಆಡೊ ಒಂದು ಮಾತು ಎನಲು ಮಾಡಿರುವೆ ಮನವ ಕಲ್ಲು 5 ಏನು ಸೇವೆ ಮಾಡಲೀಗ ಏನು ನಿನ್ನ ಸ್ತುತಿಸಲೀಗ ಏನು ಧ್ಯಾನ ಮಾಡಲೀಗ ಏನು ತಿಳಿಯದಲ್ಲೊ ಎನಗೆ 6 ಶುದ್ಧವಾದ ನಿನ್ನ ಒಂದು ಮುದ್ದು ಮಾತು ಕೇಳೆನೆಂದು ಒದ್ದಾಡುವೆನೊ ಮನದಿ ಬಹಳ ಇದ್ದಿಯಾಕೊ ಸುಮ್ಮನಿನ್ನು 7 ಮನದಿ ಎನಗೆ ದೃಢವು ಇಲ್ಲ ಹನುಮ ನಿನಗೆ ದಯವು ಇಲ್ಲ ಮುನಿಸು ಮಾಡೆ ನೀನು ಸಲ್ಲ ಘನವೆ ನಿನಗೆ ಪೇಳೊ ಸೊಲ್ಲ 8 ನಿನ್ನ ಹೊರತು ಪೊರೆವರಿಲ್ಲ ಮನ್ನಿಸಿನ್ನು ಕಾಳಿನಲ್ಲ ನಿನ್ನ ಕೀರ್ತಿ ಜಗದಿ ಬಹಳ ಉನ್ನತದಲಿ ಮೆರೆಸೊ ಮಲ್ಲ 9 ಅನ್ನಕೊಡಿಸಿ ಇಟ್ಟುಕೊಂಡು ಮನ್ನಿಸುವೆನೆಂಬೋ ಇಂಥ ಭಿನ್ನನಾದ ನುಡಿಗೆ ನಾನು ಇನ್ನು ಒಪ್ಪಲಾರೆ ಕಂಡ್ಯ 10 ಕದರುಮಂಡಲಿಗಿ ಹನುಮ ಹೆದರಲಾರೆ ನಿನಗೆ ಇನ್ನು ಒದಗಿ ಪಾಲಿಸೆಂದು ಬೇಡೆ ಹೃದಯ ಕರಗದಲ್ಲೊ ನಿನಗೆ 11 ನಿರುತ ನಿನ್ನ ದಾಸಳೆನಿಸಿ ಚರಿಸುವಂಥ ಎನಗೆ ಒಲಿದು ಅರುಹದಿರಲು ಒಂದು ವಾಕು ಬಿರುದು ಉಳಿವುದೇನೊ ಇನ್ನು 12 ಇಷ್ಟ ಸಲಿಸದಿರೆ ಗೋಪಾಲ ಕೃಷ್ಣವಿಠ್ಠಲಗ್ಹೇಳಿ ನಾನು ಕಟ್ಟಿ ಹಾಕಿಸುವೆನೊ ಎನ್ನ ಮೂರ್ತಿ 13 ಗುರುಗಳಾಜ್ಞೆಯಿಂದ ನಾನು ಹರುಷದಿಂದ ಬಳಿಗೆ ಬರಲು ಗರುವದಿಂದ ನಿನ್ನ ನೇತ್ರ ತೆರದು ನೋಡದಿರುವರೇನೊ 14 ತಂದೆ ನೀನೆ ಸಲಹೊ ಎಂದು ಬಂದು ನಿನ್ನ ಅಡಿಗೆ ಎರಗೆ ಒಂದು ಮಾತನಾಡದಂಥ ಕುಂದು ಏನು ಪೇಳೊ ಇನ್ನು15 ಬೇಡ ಬೇಡ ಛಲವು ಇನ್ನು ಪಾಡಿಪೊಗಳುವಂತೆ ದಯವ ಮಾಡು ಎನ್ನ ಮೊರೆಯ ಕೇಳಿ 16
--------------
ಅಂಬಾಬಾಯಿ
ವಿಠಲನ ನಾಮ ಮರೆತು ಪೋದೆನಲ್ಲ ಲಟಪಟ ನಾ ಸಟೆಯಾಡುವೆನಲ್ಲಪ ಶೇಷಗಿರಿಯ ಮೇಲೆ ಸವುತೆಯ ಬಿತ್ತಿದೇವಗಿರಿಯ ಮೇಲೆ ಅವತಾರವಿಕ್ಕಿಹಾಳೂರಿನೊಳಗೊಬ್ಬ ಕುಂಬಾರ ಸತ್ತಗೋಕರ್ಣದೊಳಗೊಬ್ಬ ಪರದೇಶಿ ಅತ್ತ 1 ಆ ಸಮಯದಿ ಮೂರು ರಾಯರ ಕಂಡೆಕುಪ್ಪುಸ ತೊಟ್ಟ ಕೋಳಿಯ ಕಂಡೆಬೆಳ್ಳಕ್ಕಿ ಬೆರಣಿಯ ಮಾಳ್ಪುದ ಕಂಡೆನರೆಸೂಳೆ ಗೆಯ್ವುದ ಕಣ್ಣಾರೆ ಕಂಡೆ 2 ನುಸಿಯೊಂದು ರೊಟ್ಟಿಯ ಸುಡುವುದ ಕಂಡೆಆಡೊಂದು ಮದ್ದಳೆ ಬಡಿವುದ ಕಂಡೆಕಪ್ಪೆ ತತ್ಥೈ ಎಂದು ಕುಣಿವುದ ಕಂಡೆಬಾಡದಾದಿಕೇಶವನ ಕಣ್ಣಾರೆ ಕಂಡೆ3
--------------
ಕನಕದಾಸ
ಹಿಂಗದೆ ಮನದಣಿಯ ರಂಗನ ಭಜಿಸೊ ಪ ರಂಗನ ಭಜಿಸೊ ಕೃಷ್ಣನ ಭಜಿಸೊ ಅ ಯಾತಕೆ ಸುಮ್ಮನಿರುವೆಪಾತಕ ಹೆಚ್ಚಿ ಮೆರೆವೆನೀತಿಯ ತಪ್ಪಿ ನೀನಿರುವೆಭೂತಳ ಭೋಗ ಸ್ಥಿರವೆ 1 ಗೆಜ್ಜೆಯ ಕಟ್ಟಿ ಆಡೊಲಜ್ಜೆಯ ಬಿಟ್ಟು ಪಾಡೊಮುಜ್ಜಗನ ಕೊಂಡಾಡೊಸಜ್ಜನರ ಜೊತೆಗೂಡೊ2 ಪನ್ನಗರಾಜ ಶಯನನಪನ್ನಗಭೂಷಣ ನುತನಉನ್ನಂತ ಗುಣದವನಚೆನ್ನಾದಿ ಕೇಶವನ3
--------------
ಕನಕದಾಸ
ಲಟಪಟ ನಾ ಸಟೆಯಾಡುವೆನಲ್ಲ |ವಿಠಲನ ನಾಮ ಮರೆತು ಪೋದೆನಲ್ಲ ಪ.ಶೇಷಗಿರಿಯ ಮೇಲೆ ಸವುತೆಯ ಬಿತ್ತಿ |ದೇವಗಿರಿಯ ಮೇಲೆ ಅವತಾರವಿಕ್ಕಿ ||ಹಾಳೂರಿಗೊಬ್ಬ ಕುಂಬಾರ ಸತ್ತ |ಗೋಕರ್ಣದೊಳಗೊಬ್ಬ ಪರದೇಶಿ ಅತ್ತ 1ನಾ ಸಮಯದಿ ಮೂರು ರಾಯರ ಕಂಡೆಕುಪ್ಪುಸ ತೊಟ್ಟ ಕೋಳಿಯ ಕಂಡೆ ||ಬೆಳ್ಳಕ್ಕಿ ಬೆರಣಿಯ ಮಾಳ್ಪುದ ಕಂಡೆ |ನರಸೂಳೆಗೆಯ್ವುದ ಕಣ್ಣಾರೆ ಕಂಡೆ 2ನುಸಿಯೊಂದು ರೊಟ್ಟಿಯ ಸುಡುವುದ ಕಂಡೆಆಡೊಂದು ಮದ್ದಳೆ ಬಡಿವುದ ಕಂಡೆ ||ಕಪ್ಪೆ ತತ್ಥೈಯೆಂದು ಕುಣಿವುದ ಕಂಡೆ |ಪುರಂದರವಿಠಲನ ಕಣ್ಣಾರೆ ಕಂಡೆ * 3
--------------
ಪುರಂದರದಾಸರು