ಪಾರ್ವತಿ ದೇವಿ
ಉಮಾ - ನಿನಗೆ ಸರಿಯಾರೇಕಮ್ಮಗೋಲ್ವೈರಿಯ ಪ್ರೇಮ ಪಾತ್ರಳಾದ ಪ
ಆಡೂವ ನುಡಿಗಳ - ಜೋಡಿಸಿ ಹರಿಯಲಿಮಾಡೀಸು ಸತ್ಸಾಧನಾ ||ಬೇಡಿಕೊಂಬೆನು ದೇವಿ - ರೂಢಿಗೊಡೆಯನ ತಡಮಾಡದೆ ತುತಿಪಂಥ - ಜೋಡಿಸು ಮನಾ 1
ಸುರಪಾದಿ ದೇವತೆ ಕರಗಳ ಜೋಡಿಸಿಶರಣೆಂದು ಪೇಳುವರೇ ||ಹರ್ಯಕ್ಷ ಯಕ್ಷನ ಈಕ್ಷಿಸಿ ಬರುತಿರೆಹರಿ ಪೇಳೆ ಸುರಪಗೆ ಬೋಧಿಸಿದೆ 2
ಸತಿ - ವ್ಯತ್ಯಸ್ತ ಮನವನುಸತ್ಯಾತ್ಮನಲಿ ನಿಲಿಸೇ ||ಅರ್ಥೀಲಿ ಹರಿಯ - ಅತ್ಯರ್ಥ ಪ್ರಸಾದಕ್ಕೆಪಾತ್ರನೆಂದೆನಿಸಿ - ಪಾಲಿಸೇ 3
ಪ್ರಾಣಂಗೆ ಪ್ರಾಣನ - ಗಾನ ಮಾಡಲು ಗುಣಶ್ರೇಣಿಗಳ ಜೋಡಿಸೇ ||ಗಾನ ವಿನೋದಿ - ಪ್ರ - ದಾನ ಪುರೂಷನಮಾಣದೆನಗೆ ತೋರಿಸೇ 4
ಹಿಮಗಿರಿಸುತೆತವ - ವಿಮಲಪದಾಬ್ಜಕೆನಮಿಸುವೆ ನೀ ಪಾಲಿಸೇ ||ಅಮಿತಾರ್ಕ ನಿಭ ಗುರು ಗೋವಿಂದ ವಿಠಲನಕಮನೀಯ ಪದ ಕಾಣಿಸೇ 5