ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಡಿಬಾರೊ ರಂಗನಾಥ ಪ್ರಿಯಾ ಪ ನೋಡೀ ಕೂಡೀ ಆಡೀ ಪಾಡುವೆ ಅ.ಪ ಮಾಡಬಾರದೆಲ್ಲ ಮಾಡಿ ಬಂದೆ ಬಂದೆ [ಓಡಿಬಂದು] ನಿಂದೆ ಕಂದಾ ತಂದೆಯೆ 1 ಏತಕೆನ್ನ ಮೇಲೆ ಇಷ್ಟು ಕೋಪ ಕೋಪಾ [ಆರ್ತರ] ಪಾಲಿಸ ಭೂಪಾ ಶ್ರೀಶನೆ2 ಗುರುವು ತುಲಸಿರಾಮ ದಾಸಪ್ರೇಮಾ ಪ್ರೇಮಾ [ವರ] ಕಾಮೀ ನಾಮ ಶ್ಯಾಮನೆ 3
--------------
ಚನ್ನಪಟ್ಟಣದ ಅಹೋಬಲದಾಸರು
ನಿಂತು ಫುಗಡಿ ಹಾಕ ಭ್ರಾಂತತನವ್ಯಾಕ ಸಂತ ಜನನಿಯರು ನೋಡಿ ತಲೆಯ ದೂಗಬೇಕ ಪ ಆಶೆಯಲಿ ತಾನು ಕುಳಿತು ಹಾಕುದೇನು | ಘಾಸಿಯಾಗುವ ಆರುಮಂದಿಯಾ ಕೂಡಿದರೇ ನೀನು 1 ಗರುವ ತನ ಬಿಟ್ಟು ತಿರುಗಣೆಯಾ ನುಟ್ಟು | ಆರಹು ಶರಗಿನಿಂದ ಬಿಗಿದು ಹಾಕ ಮಲಕ ಗಂಟು 2 ಲಜ್ಜೆ ವಳಿದು ನೋಡೇ ಹರಿಯಸ್ತುತಿ ಮಾಡಿ | ಘಜ್ಜಿಗೆ ಬಂಡಮ್ಯಾಲ ಯಚ್ಚರ ಮೈಯ್ಯ ಮರೆಯಿಬ್ಯಾಡೇ 3 ಎರಡು ಸವೆ ನಿನೆಹಾ ಜ್ಞಾನ ಸಖೀ ಕೈಯ್ಯಾ | ಜರಿಯದಂತೆ ಹಿಡಿದು ತಿರುಗು ನಡವಿಧ ಪರಿಯಾ 4 ಫುಗಡಿ ಇದೇ ಆಡೀ ಪ್ರೇಮಭಾವ ಕೂಡೀ | ಮುಗುತಿ ಕೊಡುವ ತಂದೆ ಮಹಿಪತಿ ಸ್ವಾಮಿ ದಯಮಾಡಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಿಪುದು ನಯನಗಳ ನಾಲಿಗೆಯ ನೀನು ಶ್ರೀಲೋಲ ಸಾರ್ವಭೌಮನೇ ಪ ನೀಲಮೇಘಶ್ಯಾಮ ಬೇಲಾಪುರಾಧೀಶ ಶೀಲ ಅಚ್ಚುತದಾಸಗೆ ಸ್ವಾಮಿ ಅ.ಪ ಪರಮಪದನಾಥ ಇಂದಿರೆಯರಸ ಸಕಲ ನಿ ರ್ಜರರು ಪೂಜಿಸುವಂಘ್ರಿಯಾ [ವರ]ನೇಮದಿಂ ಪಾಡೀ ಆಡೀ ದುರಿತಭವ ಶರಧಿಯಾ ಪಿರಿದು ದಾಟುವೆನೆಂದು ಭರದೊಳೈದಿದವಗಾ ಶ್ಚರ್ಯದಾಪತ್ತಡಸಿತ್ತೇ ಸ್ವಾಮಿ 1 ಹಿಂದೆ ಮಾಡಿದ ಕರ್ಮವೆಂಬದಕೆ ಜನನವಾದು ದಿಂದು ಊನನಲ್ಲಾ ಪೊಂದಲೀ ನಗರವನು ಪೋಗಲಾಕ್ಷಣದಿ ವಾಗ್ಬಂಧವತ್ವವೆರೆಡು ಮುಂದಕಡಿಯಿಡಲು ಇಂದಿನದೊಲಚ್ಚುತನ ದಾಸ ನಂದವಳಿದುಬ್ಬಸದೊಳು ಇಂದು ನೀ ಸಲಹಿದಡೆ ಪೂರ್ವಾರ್ಜಿತ ಕರ್ಮ ವೃಂದಗಳು ನಿಂದಿರುವವೆ ಸ್ವಾಮಿ 2 ಮನುಜ ಮಾಡಿದ ಪಾತಕಗಳನು ಎಣಿಸುವಡೆ ಘಣಿರಾಜಗಳವಡುವುದೇ ಗುಣ ತರಂಗಿಣಿಯೆ ದುರ್ಗುಣಗಳೆಣಿಸಲು ಶ ರಣಜನರೊಳೇಂಪುರುಳಿರುವುದೇ ಚಿನುಮಯನೆ ಭಕ್ತವತ್ಸಲನೆ ಅಚ್ಚುತz ಸನವಗುಣಗಳನೀ ಮರೆದು ಗುಣನಿಧಿಯೆ ಚೈತನ್ಯವಿತ್ತುಳುಹೆ ಬೇಗ ನಾ ಧನ್ಯನೆಲೊ ವೈಕುಂಠರಮಣಾ 3
--------------
ಬೇಲೂರು ವೈಕುಂಠದಾಸರು