ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದುಮ್ಮ ದುಮ್ಮೆನ್ನಿ ದುಮ್ಮ ಸಾಲವೆನ್ನಿ ಪ ನರಜನ್ಮ ಫಾಲ್ಗುಣ ಪೌರ್ಣಿಮೆ ಬಂದಿದೆ | ಮರಿಯ ಬ್ಯಾಡಿ ತನು ಧನ ಮನದೀ | ಹರಿದಾಸ ರಾಹವರೆಲ್ಲರು ಹೋಳಿಯ | ಪರಮಾನಂದದ ಲ್ಯಾಡುವ ಬನ್ನಿರಣ್ಣಾ 1 ಜ್ಞಾನಾಗ್ನಿಯ ಪ್ರಜ್ವಲದಿಂದಾ | ಹಮ್ಮೆಂಬ ಕಾಮನ ಹೋಳಿಯದಹಿಸಿ | ಒಮ್ಮನದಿ ನಲಿದಾಡಿರಣ್ಣಾ 2 ಹರಿನಾಮ ಕುಂಕುಮ ಸಾರಿ ಚಲ್ಯಾಡುತ | ಧರಿಸುತ ಹೃದಯ ಶಿರಸದಲಿ | ಕರದಲಿ ವಿಚಾರ ಬೆತ್ತ ಹೊಯ್ದಾಡುತ | ಹರುಷದಿಂದಲಿ ಕುಣಿದಾಡಿರಣ್ಣಾ 3 ಪರಿ ಪರಿ ಸಾಧನ ದೋರಿಸುತಾ | ಕರುಣದಿ ಆಡಿಸುತಿಲ್ಲಿ ನಿಂದಿರಲು | ದುರಿತಭಯಕ ಅಂಜ ಬ್ಯಾಡಿರಣ್ಣಾ 4 ಸಂಚಿತ ಬೂದಿಯ ಚಲ್ಲಿ ಪರಮಾ | ರ್ಥದ ಗಂಗಿಯೊಳು ಮಿಂದು ಶುಚಿಯಾಗಿ | ಪದುಮಾಶ್ರಯದಿಂದ ಗತಿಪಡಿರಣ್ಣಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದ್ವೈತ ಅದ್ವೈತೆಂದು ಹೊಡದಾಡದಿರೊ ಪ್ರಾಣಿ ಚೇತಿಸಿ ಬ್ಯಾರಿಹ ವಸ್ತುಗಾಣಿ ಧ್ರುವ ಅದ್ವೈತ ಅ- ದ್ವೈತ ಎನಲಿಕ್ಕೆ ಅದೆನೆ ತಾಂ ದ್ವೈತ 1 ಹಿಂದು ಮುಂದಾಗಿ ಆಡಿಸುತಿಹ್ಯ ನಿಜಖೂನ ಎಂದಿಗಾದರು ತಿಳಿಯಗುಡದು ಪೂರ್ಣ 2 ಅತಿಸೂಕ್ಷ್ಮ ತಿಳುವಾದರಲ್ಲೆ ಬಿದ್ದದ ಮಲಕು ನೇತಿ ನೇತೆಂದು ಸಾರುತಿದೆ ಶ್ರುತಿ ಇದಕೆ ತಿಳಿಕೊ 3 ದ್ವೈತ ಎಂದವನೆ ತಾಂ ಪರಮ ವೈಷ್ಣವನಲ್ಲ, ಅ ದ್ವೈತನೆಂದವನೆ ತಾಮ ಪರಮ ಸ್ಮಾರ್ತನಲ್ಲ 4 ಸ್ಮಾರ್ತ ವೈಷ್ಣವ ಮತ ಗುರು ಮಧ್ವಮುನಿಬಲ್ಲ ಅರ್ತು ಸ್ಥಾಪಿಸುವದು ಮನುಜಗಲ್ಲ 5 ಮೂರುವರಿ ಮೊಳದ ದೇಹದ ಶುದ್ಧಿ ನಿನಗಿಲ್ಲ ದೋರುವರೆ ತರ್ಕಸ್ಯಾಡುವ ಸೊಲ್ಲ 6 ದ್ವೈತ ಅದ್ವೈತಕ ಬ್ಯಾರಿಹ ಗುರುಗುಟ್ಟು ಚಿತ್ತ ಶುದ್ದಾಗಿ ಮಹಿಪತಿಯ ಮುಟ್ಟು 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬೇಕಿಲ್ಲ ಬೇಕಿಲ್ಲ ಇಹಲೋಕಾಡಂಬರವು ಸಾಕೀ ನಿನ್ನನು ಧ್ಯಾನಿಪ ಪರಲೋಕ ಜ್ಞಾನವನು ಪ. ಶ್ರೀಪ ಕರುಣಿಸಿ ನಿನ್ನ ಸ್ವಂತ ಜನರನ್ನೂ ಕಾಪಾಡೊ ದೊರೆಯೆ ಅ.ಪ. ನಿನ್ನ ಭಕ್ತರ ಸಂಗವನ್ನು ಕೃಪೆದೋರಿ ಸಲಹೊ ಚನ್ನ ಕೇಶÀವರಾಯ ಇನ್ನು ಕೃಪೆ ಮಾಡೊ 1 ಯನ್ನಪರಾಧಗಳನ್ನು ಎಣಿಸುವರೆ ದೇವ ಸನ್ನುತ ಚರಿತ ಭಕ್ತ ಸನ್ಮಾನಯುತ ನಿನ್ನ ಮಹಿಮೆಗಳನ್ನು ವರ್ಣಿಸಲಳವೆ ಮುನ್ನ ಶೇಷಾನಿಂದ ಸೇವ್ಯವಾಗಿರಲೂ ಯನ್ನಿಂದಾಡಿಶಿ ನೀನು ಸನ್ಮಾನಕೊಂಡು ನಿನ್ನಾ ಭಕ್ತಳೆಂದು ಸ್ತುತಿಗೊಂಡು ನಲಿನಲಿದೆ 2 ಯೆನ್ನಿಂದೇನಹುದೋ ಮನ್ಮನದೊಡೆಯ ಚನ್ನ ಶೇಷಾದ್ರಿನಿವಾಸ ಘನ್ನ ಶ್ರೀ ಶ್ರೀನಿವಾಸ ನೀನೇ ಆಡಿಸುತ ನೀನೇ ಮಾಡಿಸುತ ದಾಸಿ ನೀನಾಗಿರೆ ನಾನೇನ ಬಲ್ಲೆನೊ 3
--------------
ಸರಸ್ವತಿ ಬಾಯಿ
ಮುದ್ದು ತಾರೋ ರಂಗಾ ಮುದ್ದು ತಾರೋ ಕೃಷ್ಣಾ ಸಿದ್ಧ ವೇದಾ ಗಮಾ ಭೇದ್ಯ ಮೋಹನ್ನಾ ಪ ಕಾಣಲಿಕ್ಕೆ ಹಸಿವೆ ತೃಷೆಗಳೇ ಮರೆವದು ಏಣಾಂಕ ಬಿಂಬ ಮೊದಾ ಬಾಯಿಂದಾ 1 ಕರ್ಪುರವಾ ಕರಡಿಗಿಯಂತೆ ಹೊಳೆವುತಾ ವಪ್ಪುತಿಹ ಚಲ್ವ ಪುಟ್ಟ ಬಾಯಿಂದಾ2 ಅಮ್ಮ ತಾರಮ್ಮ ನಾನುಂಡೆನೆಂದು ಕೈಯ ಬೀಸಿ ಝಮ್ಮನೇ ತೊಡಲು ನುಡಿ ಬಾಯಿಂದಾ 3 ತಪ್ಪ ಹೆಜ್ಜೆಯನಿಟ್ಟು ಘಲಘಲನೆ ನಡೆವುತ ಧಪ್ಪನೆ ಬೀಳುತ್ತಾ ಬಿರಿವ ಬಾಯಿಂದಾ4 ಹಣೆಯ ಅರಳೆಲೆ ಮಾಗಾಯಿಗಳಲ್ಲಾ ಆಡಿಸುತಾ ಕುಣಿದು ಬೆಣ್ಣೆಯ ಬೇಡುವ ಬಾಯಿಂದಾ5 ಕೋರಳಿಗೆ ಅಂಟಹಾಕಿ ಕೈಗಳಿಂದಾ ಬಿಗಿದಪ್ಪಿ ಗುರು ಮಹಿಪತಿ ನಂದನ ಜೀವನ್ನಾ 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು