ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೀರ್ತನೆಗಳು ಅಪರಾಧಿ ನಾನಲ್ಲ ಅಪವಾದಯನಗಿಲ್ಲಾ ಪ. ಕಪಟನಾಟಕ ಕೃಷ್ಣ ಯನಗೆ ನೀನಪರಾಧಿ ಅ.ಪ. ನೀನು ಆಡಿಸಲು ಜೀವಗಳನುದಿನದ ಬೊಂಬೆ ಆನೆ ಬಲ್ಲೆನೆ ಬ್ಯಾರೆ ಪಥವನೊಂದಾ ನೀನಿಟ್ಟ ಸೂತ್ರದಂತಿರಲು ಕೈಕಾಲುಗಳು ನೀನು ಮುಗ್ಗಿಸಲು ಮುಗ್ಗುವ ಜೀವ ನಾನಾದೆ 1 ಒಂಬತ್ತು ಬಾಗಿಲುವುಳ್ಳ ಪಟ್ಟಣದೊಳಗೆ ತುಂಬಿದಿಪ್ಪತ್ನಾಲ್ಕು ಮೊನೆಯಾಳ್ಗಳ ನಂಬಿಸಿ ಕಾವಲು ನೀನು ಎನ್ನೊಳಗಿದ್ದು ಕಂಬುದಾ (?) ಯೇರಿ ಕೊಲಿಸುವುದು ನಿನಗನ್ಯಾಯ 2 ಅಂತರಾತ್ಮಕ ನೀನು ಒಳಗಿದ್ದಾ ಬರಿ ತಂತ್ರಿಯೆಂದೆನ್ನ ಕೊಲ್ಲಿಸುವರೇನೊ ಹೇಳೋ ಕಂತುವಿನ ಜನಕ ಲಕ್ಷ್ಮೀರಮಣ ಕಾಯಬೇ- ಕೆಂತೆಂದೆನ್ನ ಅಚಲಾನಂದವಿಠಲ ಪುರಂದರ ವಿಠಲ ಅಂಕಿತದಲ್ಲೂ ಇದೆ.
--------------
ಅಚಲಾನಂದದಾಸ
ನಾರಾಯಣ ಕೃಷ್ಣನಂದ ಮುಕುಂದಾ ಪ ನಿನ್ನೆತ್ತಿ ಆಡಿಸಲು ನಂದ ಯಶೋದೆಯಲ್ಲಾ ನಿನ್ನೆಂತು ಸೇವಿಸುವೆ ಪೇಳು ಇಂದಿರೆರಮಣಾ1 ನಿನ್ನ ಸಹಪಾರಿ ಸುಧಾಮನಾನಲ್ಲಾ ನಿನ್ನೆಂತು ಸೇವಿಸಲೊ ಯದುಕುಲೋತ್ತಮನೇ2 ಅಗರು ಚಂದನ ಪರಿಮಳದ್ರವ್ಯಗಳನೆ ತಂದು ಅರ್ಪಿಸಲು ಕುಬುಜೆಯಲ್ಲಾ ಆದರದಿ ಪಾಲ ನೀಡೆ ವಿದುರನಲ್ಲಾ ಅನಂತ ಗುಣಪೂರ್ಣನೇ ಶ್ರೀ ಹರಿ3 ಗೋವುಪಾಲನು ತಂದು | ನಿನಗ ಭಿಷೇಕ ಮಾಡುವೆನೆ ವಿಧ ವಿಧ ಪುಷ್ಪಗಳ ತಂದು ಅರ್ಚಿಸಲು ಪೊಕ್ಕಳೊಳು ಪುಷ್ಪವನೆಪಡೆದಿರುವೆ ಹರಿಯೆ 4 ಕರಿರಾಜ ನಿನ್ನ ಕರೆಯೆ ಕರುಣದಿಂದ ಬಂದೆ ಪ್ರಹ್ಲಾದಗೋಲಿದು ಕಂಬದಲಿ ನಿಂತೇ ದ್ರೌಪದೀ ದೇವಿಗಕ್ಷಯಾಂಬರ ವಿತ್ತೆ ಅಂತೆ ಎನ್ನಪಾಲಿಸೊ ಲಕ್ಷ್ಮೀಕಾಂತನೇ 5 ಪರಿಪಯಲಿಭಕ್ತರ ಪಾಲಿಸಿದೆಯೊ ದೇವಾ ಪರಮ ದಯಾಳುವೆಂದೆನಿಸಿಕೊಂಡೇ ಪರಮ ಪುರುಷನು ನೀನು ಪಾಮರನು ನಾನಹುದೊ ದಾರಿ ಕಾಣದೆ ಇರುವೆ ದಯೆತೋರು ಮುರಾರಿ6 ಭಕ್ತವತ್ಸಲ ನೀನೆ ಭಯನಿವಾರಣ ನೀನೇ ಭಾಗವತಜನಪ್ರಿಯ ನೀನೆ ಸರ್ವರಕ್ಷಕ ನೀನೆ ಶ್ರೀ ವೇಂಕಟವಿಠಲಾ 7
--------------
ರಾಧಾಬಾಯಿ
ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ |ಕಪಟನಾಟಕ ಸೂತ್ರಧಾರಿ ನೀನೆಪನೀನು ಆಡಿಸಲು ಜಡವೊನಕೆ ಅಭಿನಯಬೊಂಬೆಏನು ಬಲ್ಲದು ಬೇರೆ ಕೃತಿಯನೊಂದ ||ನೀನಿಟ್ಟ ಸೂತ್ರದಿಂದಲುಗೆ ಕೈಕಾಲುಗಳು |ನೀನೆ ಮಗ್ಗಿಸಲು ಮಗ್ಗುವ ದೇಹ ತಾನಾಗೆ 1ಒಂದೆಂಟು ಬಾಗಿಲುಗಳುಳ್ಳ ಪಟ್ಟಣಕೆ ತನ-ಗೆಂದು ಇಪ್ಪತ್ತಾರು ಮನೆಯಾಳ್ಗಳ ||ತಂದು ಕಾವಲುನಿಲಿಸಿ ಎನ್ನ ನೀನೊಳಗಿಟ್ಟುಮುಂದೆ ಭವಭವದಿ ದಣಿಪುದು ನಿನ್ನದನ್ಯಾಯ 2ಯಂತ್ರವಾಹಕನೀನೆ ಒಳಗೆ ಇದ್ದೂ ಎನ್ನ-ಸ್ವತಂತ್ರನೆಂದೆನಿಸಿ ಕೊಲಿಸುವರೆ ಹೇಳೊ ||ಕಂತುಪಿತ ಲಕ್ಷ್ಮೀಶ ಎಂತಾದಡಂತಹುದನಂತ ಮೂರುತಿ ನಮ್ಮಪುರಂದರವಿಠಲ3
--------------
ಪುರಂದರದಾಸರು