ಬಲ್ಲೆನೇಳೊ ನಲ್ಲ ನಿನ್ನ ಬೆಲ್ಲಮಾತುಗಳನ್ನಾ ಪ
ಅಲ್ಲ ಆಡಿದುದ್ದ ಆದೋದಮ್ಯಾ
ಲೆಲ್ಲಿದು ಬರಿ ಸೊಲ್ಲದು ಬಿಡು ಅ.ಪ
ಭಾಷೆನಿತ್ತೆ ಬರಸೆಂದೂ ಮೋಸಗಯ್ವಯ್ಯೋ ರಂಗಾ
ಆಶೆಯಂ ತೀರಿಸೆನ್ನಯ ನಿಜ ಭೂಸುರಗಣ ಭಾಸುರಮಣಿ 1
ಸುರತಕೇಳಿ ಸುಖದೊಳೆನ್ನಂ ಮರೆತು ಪೋದೆಯೊರಾಮಾ
ಅರಿತೆನೇಳೊ ಚರಿತವನ್ನಾ ನಿರುತದಿ ಬರೆ ಗುರುತದು ಸರಿ 2
ಸುರಗಿರೀವರ ತುಲಶಿರಾಮ ನೀ ಸರಗೂರಿನ ಗುರುಕಾರನೆ 3