ವಾರಿಧಿನಿಲಯನೆಂಥಾತ
ತೀರದ ಮಹಿಮಗಾರನೀತ ಪ
ಸಾರಿ ನಂಬಿ ಭಜಿಸಿ ಸತತ
ಘೋರ ದುರ್ಭವಳಿರೋ ನಿರುತಅ.ಪ
ದೇವದೇವ ದಿವ್ಯಚರಿತ
ದೇವಿದೇವಕಿ ಗರ್ಭಸಂಜಾತ
ಗೋವುಗಳನು ಕಾಯಿದಾತ
ಗೋವಳರೊಡನೆ ಆಡಿದಾತ
ಮಾವನಮರ್ದಿಸಿ ಭುವಿಗೀತ
ಕೇವಲಸೌಖ್ಯ ನೀಡಿದಾತ 1
ಗೋವರ್ಧನಗಿರಿ ಎತ್ತಿದಾತ
ಗೋವಳರನ್ನು ಸಲಹಿದಾತ
ಮಾಯಾಪೂತನಿಯಸುವನೀತ
ಮಾಯದಿಂದ ಹೀರಿದಾತ
ತಾಯಿ ಯಶೋದಾದೇವಿಗೀತ
ವಿಶ್ವ ತೋರಿದಾತ 2
ಅಸಮಾಯದಾಟವಾಡುತ
ಶಿಶುವಾಗಿ ತೋರಿದಾತ
ಕುಶಲಗೋಪಿಕಾಸ್ತ್ರೀಯರನೀತ
ವಸನ ಕಳೆದು ನಿಲಿಸಿದಾತ
ವಸುಧೆ ಭಾರವನಿಳುಹಿದಾತ
ನೊಸಲಗಣ್ಣನ ಸಲಹಿದಾತ 3
ಬಾಲೆಗೋಪಿಯರಿಗೊಲಿದಾತ
ಪಾಲಮೊಸರು ಬೆಣ್ಣೆ ಮೆಲಿದಾತ
ಕೊಳಲನೂದುತ ನಲಿದಾಡಿದಾತ
ಬಾಲನಾಗಿ ಲೀಲೆ ತೋರಿದಾತ
ಕಾಳರಕ್ಕಸರ ಕುಲಭೀತ
ಕಾಳಿಯನ್ನು ಮೆಟ್ಟಿ ಸೀಳಿದಾತ 4
ಹಿಡಿ ಅವಲಕ್ಕಿಗೆ ಒಲಿದಾತ
ಮಾನವ ಕಾಯ್ದಾತ
ದೃಢ ಭಕ್ತರೋಳ್ವಾಸವಾದಾತ
ಇಡೀ ಭುವನಗಳ್ಹೊತ್ತಾಳುವಾತ
ಅಜ ಸುರಾದಿವಂದಿತ
ಒಡೆಯ ಶ್ರೀ ರಾಮಯ್ಯ ಮಮದಾತ 5