ಆವ ಕುಲವೊ ರಂಗ ಅರಿಯಬಾರದು ಪ.
ಆವ ಕುಲವೆಂದರಿಯಬಾರದು ಗೋವುಕಾವ ಗೊಲ್ಲನಂತೆಪಾರಿಜಾತದ ವೃಕ್ಷÀವ ಸತ್ಯಭಾಮೆಗೆ ತಂದಿತ್ತನಂತೆ ಅ.ಪ.
ಗೋಕುಲದಲ್ಲಿ ಪುಟ್ಟಿದನಂತೆ ಗೋವಳರೊಡನೆ ಆಡಿದನಂತೆತಾ ಕೊಳಲನೂದಿ ಮೃಗಪಕ್ಷ್ಷಿಗಳ ಮರುಳುಮಾಡಿದ ದೇವನಂತೆ 1
ಕಾಲಲ್ಲಿ ಶಕಟನ ಒದ್ದನಂತೆ ಗೂಳಿಯ ಕೊಂಬ ಕಿತ್ತನಂತೆಕಾಳಿಂಗನ ಹೆಡೆಯ ತುಳಿದು ಬಾಲೇರಿಗೊಲಿದ ದೇವನಂತೆ2
ಗೊಲ್ಲತೇರ ಮನೆಗಳಲ್ಲಿ ಕಳ್ಳತನವ ಮಾಡಿದನಂತೆಮೆಲ್ಲನೆ ಪೂತನಿ ಅಸುವ ಹೀರಿ ಬಲ್ಲಿದ ಕಂಸನ ಕೊಂದನಂತೆ 3
ಸರ್ಪ ತನ್ನ ಹಾಸಿಗೆಯಂತೆ ಪಕ್ಷಿ ತನ್ನ ವಾಹನವಂತೆÀರ್ಪಭೂಷಣ ಮೊಮ್ಮಗನಂತೆ ಮುದ್ದುಮುಖದ ದೇವನಂತೆ4
ತರಳತನದಿ ಒರಳನೆಳೆದು ಮರನ ಕೆಡಹಿ ಮತ್ತವರ ಸಲಹಿದುರುಳ ರಕ್ಕಸರನು ಕೊಂದ ಚೆಲುವ ಹಯವದನನಂತೆ 5