ಲೋಕನೀತಿ (ಆ)
ಇರುವುದೆಲ್ಲ ಮನೆಯೊಳಗಿದ್ದರೆ ಆಡಿಗೆಗೆ
ಯಾತಕ್ಕೆ ತಡವಾಗೋದು | ಪ
ತರಬೇಕೇಂದು ನೂರು ತಡವೆ ನಾ ನುಡಿದರು
ಅರಿಯದವರ ಪರಿತಿರುಗುತ್ತಲಿರುವದು ಅ.ಪ
ಮನೆ ಮನೆಯಲಿವಂದು ಮಾನಾರ್ಧಮಾನಗಳು
ಮೆಣಸಿನಪುಡಿ ಉಪ್ಪು ಅಕ್ಕಿ ಸಾಲ
ದಿನ ದಿನ ಮಧ್ಯಾಹ್ನ ತಿರುಗಿದ ಮೇಲೆ
ಮನೆಗೆ ಬಂದು ಹಸಿವೆನುತ ಪೇಳುವದು 1
ಎಣ್ಣೆವಗ್ಗರಣೆಯಲ್ಲದೆ ಕಾಣೆನಭಿಗಾರ
ಮುನ್ನೆ ಪಿತ್ಥ ಹೆಚ್ಚಿ ತಲೆ ನೋಯ್ವುದು
ನಿನ್ನೆಮೊನ್ನೆ ಹೇಳಿದುದಕೆ ಹೊಡೆಸಿಕೊಂಡೆ
ದೊಣ್ಣೆಪೆಟ್ಟಿನಿಂದ ಬೆನ್ನು ಬಾತಿರುವದು 2
ವರುಷಕ್ಕಾಗುವ ಮಟ್ಟಿಗೆಲ್ಲಾ ಪದಾರ್ಥ ಶೇ-
ಖರವ ಮಾಡುವುದು ಈ ಮನೆಯೊಳಿಲ್ಲಾ
ಹಿರಿಯರಿಂದ ಬಂದ ಸಂಪ್ರದಾಯವಿದೇನೊ
ಇಂಥಾಮನೆಯ ಸೇರಿ ಈ ಸುಖ ಪಡುವೆ 3
ಮದುವೆಯಲ್ಲಿದ್ದದ್ದು ಪ್ರಸ್ತದೊಳಗೆಯಿಲ್ಲ
ಬದಲು ಸೀರೆಯು ನಾನುಟ್ಟರಿಯೆ
ವಿಧಿಲಿಖಿತವು ತಪ್ಪುವುದೆಯೆಂದಿಗಾದರು
ವದರಿ ಕೊಂಡರೆಯೇನು ಇದರೊಳು ಫಲವುಂಟು 4
ಜ್ಞಾನ ಶೂನ್ಯರು ಮನೆಯೊಳಿಹರೆಲ್ಲರು
ಈ ನರಜನ್ಮವು ಇಷ್ಟಕ್ಕೆಸಾಕೆಂದು
ಧೇನಿಸಿ ಗುರುರಾಮವಿಠಲನ ಬೇಡುವೆ 5