ಜೋ ಸಚ್ಚಿದಾನಂದನೆ
ಜೋ ಜೋ ದೇವಕಿಕಂದನೆ ಜೋಜೋ ಬ್ರಹ್ಮಾದಿವಂದ್ಯನೆ ಧ್ರುವ
ಹುಟ್ಟಿ ಬಂದು ನಿಜದೋರಿದೆ ಖೂನ
ಮುಟ್ಟಿ ಬೀರುವ ಸುಚಿನ್ನಸಾಧನ
ಇಟ್ಟ ಕಾವಲಿ ಹಾಕಿದೆ ಮೌನ
ಮೆಟ್ಟಿಮರ್ದಿಸಿ ಬಂದೆ ಮಾವನ 1
ಮಾಡಬಂದೆ ನೀ ಧರ್ಮಸ್ಥಾಪನಿಯ
ನೋಡಬಂದೆನಿಷ್ಟ ಜನರಾರ್ಚನಿಯ
ಆಡಬಂದೆ ನಂದಯಶೋದೆ ಮನಿಯ
ನೀಡಬಂದೆ ನಿಜಸುಖಸಾಧನಿಯ 2
ಶಿಷ್ಟಜನರಿಗಾಗಿ ಸಹಾಕಾರಿ
ಸೃಷ್ಟಿಯೊಳು ತೋರಬಂದೆ ಶ್ರೀಹರಿ
ದುಷ್ಟ ಜನರ ಮರ್ದಿಸುವಾವತಾರಿ
ಕಂಸಾರಿ 3
ದೇವಾದಿಗಳ ಮಗುಟಮಣಿಯೆ
ಭಾವಿಸಲಳವಲ್ಲ ಸದ್ಗುಣಿಯೆ
ಕಾವ ದೈವ ನೀನೆ ಕೃಷ್ಣ ಕರುಣೆಯೆ
ದೇವಕಿ ಗರ್ಭನಿಧಾನದ ಖಣಿಯೆ 4
ಬಲವಾಗಿ ಎನಗಬಂದೆ ಸರ್ವೇಶ
ಒಲಿದು ಭಾನುಕೋಟಿತೇಜಪ್ರಕಾಶ
ಫಲವ ನೀಡಿ ತೋರಬಂದೆ ಸಂತೋಷ
ಸಲಹಬಂದೆ ಮಹಿಪತಿ ಪ್ರಾಣೇಶ 5
ಮನೋಹರ ಮಾಡುವ ನೀನೆ ಸಹಕಾರಿ
ಅನುದಿನ ಲೆವಕಲ ನೀನೆ ಮುರಾರಿ 6
ಅನೆ ಕಾಯಲಿಪರಿ ನೀನೆ ಉದಾರಿ
ಅನಾಥರಿಗೊಲುವ ನೀನೆ ಶ್ರೀಹರಿ 7
ಪತಿತ ಪಾವನ ಪೂರ್ಣ ನೀನೆ ನಿಶ್ಚಯ
ಹಿತದಾಯಕ ನೀನಹುದೊ ಮಹಿಪತಿಯ 8