ಕೊಲ್ಹಾಪುರದ - ವಾಸಿನೀ | ಹೇ ಮಹಾಲಕ್ಷ್ಮಿಸೊಲ್ಲ ಲಾಲಿಸೇ ಮಾನಿನೀ ಪ
ಬಲ್ಲವರಲ್ಲಿಗೆ ನಿಲ್ಲದೆ ತೆರಳಿಸೆಖುಲ್ಲರ ದಲ್ಲಣ | ನಲ್ಲರಿಸೆ ಮನ ಅ.ಪ.
ಭೃಗುಮುನಿಯೂ ತಾ ಬರುತಾ | ವಕ್ಷಘಾತವಾಗಲು ತವ ತಾಣ - ತಾಡಿತ |ಅಗಡ ಮುನೀಗೆ ಪ್ರೀತಾ | ನಾಗುತಲಕುಮಿಗೆ ಅವನು - ಆದ್ರುತದೃಗಜಲಜಿಗಿಸುತ | ಹಗರಣಗೆಯ್ಯುತಜಗಳವ ನಟಿಸುತ | ನಗಧರನಲಿ ನೀನುಜಗದೊಡೆಯನ ಮನ | ಬಗೆಯನು ತಿಳಿಯುತಸೃಗಾಲ ಪುರಕಾಗಿ ಆಗಮ ನಿನ್ನದೂ 1
ಇಂಥಹ ನಿಮ್ಮ ಆಟವೂ | ಭಕ್ತರ ಮುಕ್ತಿಪಂಥವೆನಿಪ - ಮಾರ್ಗವೂಸಂತರ ಅಂತರಂಗವೂ | ನಿರ್ಮಲಿನ ಮುಕ್ತಿಕಾಂತೆಯೊಡನೆ ಆಟವೂ |ಅಂತರಂಗದಲಿಪ್ಪ ಗ್ರಂಥಿಸು ಭೇದನಸಂಚಿತಗಳು ನಾಶ | ಮುಂಜೆನ ನಿರ್ಲೇಪಅಂತರಂಗದಿ ಹರಿ | ಕಾಂತಿಯ ದರ್ಶನಎಂತು ನಾ ಪೇಳಲಿ | ಪಂಥಕೀರ್ತಾಳೀ 2
ಕುಂಡಲ ಕಪೋಲೆ | ಕಿರೀಟ ಮೌಳೇತಿಲಾಲಜ ಕರೆ ಕೋಮಲೇ ||ಕೇಳಿಲಿ ಯಮುನಾ ಕೂಲೇ | ಹರಿಯೊಡನೆ ಲೀಲೇತೂಳಿದಾನಂದ ಸುಜಾಲೇ ||ಕಾಲಕೂಟ ಸಮ | ಕೀಳು ವಿಷಯದಲಿಬೀಳುವುದೆನ ಮನ | ಲಾಲಿಸು ಹೇ ತಾಯೇಶೀಲನೆನ ಹರಿ ಗುರು | ಗೋವಿಂದ ವಿಠಲನ ||ಲೀಲೆಯ ತೋರು | ವಿಶಾಲ ಹೃದಯಳೇ 3