ಕೂಡಿ ಬನ್ನಿರಯ್ಯ ನೀವು ಬಂದು ನೋಡಿರಯ್ಯ
ಓಡಿ ಬಂದು ಹಿಂದೆ ಮುಖಕೆ ಮಸಿಯ ಬಳಿದನಯ್ಯಾ ಪ
ಆಟವಾಯಿತವಗೆ ನೋಡಿ ಪಾಪವಾಯಿತೆನಗೆ ಇಲ್ಲಿ
ಬಿಟ್ಟರೆಮಗೆ ನೀವು ಸಾಕ್ಷಿ ಪೇಳ್ವರಾರು ಹೇಳಿರಯ್ಯ ಅ.ಪ
ಇದ್ದುದನ್ನು ಹೇಳಿ ನೀವು ಮರೆಯಬೇಡಿರಯ್ಯ
ಪೇಳ್ದೆನಯ್ಯ ತಪ್ಪು ನಾನು ಕೆನ್ನೆ ಬಡಿಯಿರಯ್ಯ 1
ಮಸಿಯ ಕೊಟ್ಟು ಮುಂದೆ ಅವನು ಮುಗುಳಿನಕ್ಕಿ ಹೋದ
ಹುಸಿಯಲಾರದೆನ್ನ ಮುಖಕೆ ಹಚ್ಚಿಕೊಂಡೆನಯ್ಯ 2
ಅಣ್ಣನ ಬೈಯ್ಯಬೇಡಿರಯ್ಯ ತಪ್ಪು ನನ್ನದಯ್ಯ
ಕಣ್ಣು ಕಪ್ಪು ಹಚ್ಚಿ ತನ್ನ ನೋಡು ಎಂದ ಅವನು 3
ಮುಚ್ಚಿ ಕೊಟ್ಟನಯ್ಯ ಕಣ್ಣು ಬಿಚ್ಚಿ ಕೊಳ್ಳಲಿಲ್ಲ ನಾನು
ಪೆಚ್ಚು ಹೋದೆ ಶೆಲ್ವ ಶರಣು ತಿಳಿಸಿ ಸಲಹಿರಯ್ಯ ನೀವು 4