ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಊಟವನು ಮಾಡು ಬಾ ಉದಧಿಶಯನಾ | ಆಟವನು ಸಾಕುಮಾಡಿ ಅತಿ ವೇಗದಿಂದಲಿ ಪ ಪರಿ | ತೋಯ ಸಂಡಿಗೆ ಪಳದೆ ಹುಳಿ ಸಾರು || ಪಾಯಸ ನೊರೆಹಾಲು ಸಕ್ಕರೆಗೂಡಿಸಿ | ತಾಯಿ ದೇವಕಿಯು ಎಡೆಯ ಮಾಡಿದಳು ತಂದು 1 ಯಾಲಕ್ಕಿ ಹಾಕಿದ ಹೋಳಿಗೆಯು ಪರಿಮಳ | ಸಲೆ ಶಾಲ್ಯೋದನ ಕರಿದ ಭಕ್ಷ್ಯಾ || ಮೇಲಾದ ಇಂಗು ಜೀರಿಗೆ ಮೆಣಸಿನ ಹುಗ್ಗಿ | ಶ್ರೀ ಲಕುಮಿದೇವಿ ಎಡೆ ಮಾಡಿದಳು ತಂದು 2 ಕಸಕಸಿ ಎಳ್ಳು ಲಡ್ಡಿಗೆಯು ಅಪ್ಪಾಲು ಅರೆ-| ರಸ ದೋಸೆ ಬೆಣ್ಣೆ ಸೂಸಲುಕಡಬು || ಹಸನಾಗಿ ಕರಿದ ಹಪ್ಪಳ ಸಂಡಿಗೆ ನಿನ್ನ ಸೊಸೆ ಸರಸ್ವತಿ ಎಡೆ ಮಾಡಿದಳು ತಂದು 3 ಕಾದಾಕಳ ತುಪ್ಪ ಅಳಗಳಗ ತಿಳಿತುಪ್ಪ | ಮಾಧುರ್ಯವಾಗಿದ್ದ ಜೇನು ಘೃತವು || ಕಾದಾರಿದ ಪಾಲು ಕಟ್ಟುಸುರು ಕೆನೆಮೊಸರು | ಭೂದೇವಿ ನಲಿನಲಿದು ಎಡೆ ಮಾಡಿದಳೊ ತಂದು4 ಸರಳಿಗೆ ಗೌಲಿ ಬಟಿವೆ ಪರಡಿ ಸಜ್ಜಿಗೆ | ಸರಸವಾಗಿದ್ದ ಚಿತ್ರಾನ್ನಂಗಳು || ಪರಿ ಫಲ ಪಕ್ವಾನ್ನ ಸೋಪಚಾರದಿ | ಗಿರಿಜಾದಿಗಳು ತಾವು ಎಡೆ ಮಾಡಿದರೊ ತಂದು5 ಖಾರುಳ್ಳ ಪಚ್ಚಡಿ ಹಚ್ಚಗೆ ಹಸಿರು ವರ್ಣದ | ವಾರುಣದಿ ಉಪ್ಪಿನಕಾಯಿ ಕೂಟಾ || ನೀರು ಮಜ್ಜಿಗೆ ನಿಂಬೆÀಹಣ್ಣನೆ ಹಿಂಡಿ | ಭಾರತೀದೇವಿ ಎಡೆಮಾಡಿದಳೊ ತಂದು 6 ಉಂಡ ತರುವಾಯದಲಿ ಹರಿಯೇ ಪೀಠದಿ ಕುಳಿತು | ಕೊಂಡು ಬಂದ ಗಂಧ ತಾಂಬೂಲವ || ಸಿರಿ ವಿಜಯವಿಠ್ಠಲ | ಕೊಂಡನಾದ ಪುರಂದರಗೆ ಒಲಿದು ಒಲಿದು 7
--------------
ವಿಜಯದಾಸ
ಗುರುಸ್ತುತಿ ಪ್ರೇಮದಿಂದೊಂದಿಸುವೆ ಗುರುವೃಂದಕೇ ಕಾಮಧೇನುವಿನಂತೆ ಕೊಡಲೆಮಗಭೀಷ್ಟವನು ಪ ಸತಿಯ ಬೇಡುವನಲ್ಲ ಸುತರ ಬೇಡುವನಲ್ಲ ಅತಿಶಯದ ಭಾಗ್ಯವನು ಕೇಳ್ವನಲ್ಲ ರತಿಪತಿ ಆಟವನು ಖಂಡಿಸಿ ಬೇಗದಲಿ ಮತಿ ತಪ್ಪಲೆನಗೆ ದುರ್ವಿಷಯದೊಳಗೆಂದು 1 ಶಕ್ತಿ ಬೇಡುವನಲ್ಲ ಯುಕ್ತಿ ಬೇಡುವನಲ್ಲ ಭುಕ್ತಿ ಎನಗಿಲ್ಲೆಂದು ಕೇಳ್ವನಲ್ಲ ಮುಕ್ತಿದಾಯಕ ನಮ್ಮ ವಿಟ್ಠಲನ ಚರಣದಲಿ ಭಕ್ತಿ ದೃಢವಾಗೆನಗಿತ್ತು ರಕ್ಷಿಸಲೆಂದು 2 ಮಾನ ಬೇಡುವನಲ್ಲ ದಾನ ಬೇಡುವನಲ್ಲ ಹೀನತನ ಬ್ಯಾಡೆಂದು ಕೇಳ್ವನಲ್ಲ ಮಾನನಿಧೀಶ ನಮ್ಮ ಶ್ರೀ ನರಹರಿಯ ಚರಣವನು ಕಾಣಿಸುವ ಜ್ಞಾನವನು ದಾನಮಾಡಲಿ ಎಂದು3
--------------
ಪ್ರದ್ಯುಮ್ನತೀರ್ಥರು
ಪ್ರೇಮದಿಂದೊಂದಿಸುವೆ ಗುರುವೃಂದಕೆ ಪ ಕಾಮಧೇನುವಿನಂತೆ ಕೊಡಲೆಮಗಭೀಷ್ಟವನು ಅ.ಪ. ಸತಿಯ ಬೇಡುವನಲ್ಲಾ ಸುತರ ಬೇಡುವನಲ್ಲಾಅತಿಶಯದ ಭಾಗ್ಯವನು ಕೇಳ್ವನಲ್ಲಾರತಿಪತಿ ಆಟವನು ಖಂಡಿದಿ ಬೇಗದಲಿಮತಿ ತಪ್ಪಲೆನಗೆ ದುರ್ವಿಷಯದೊಳಗೆಂದ 1 ಶಕ್ತಿ ಬೇಡುವನಲ್ಲ ಯುಕ್ತಿಬೇಡುವನಲ್ಲಾಭಕ್ತಿವಿನಲ್ಲೆಂದು ಕೇಳ್ವನಲ್ಲಮುಕ್ತಿದಾಯಕ ನಮ್ಮ ವಿಠಲನ ಚರಣದಲಿಭಕ್ತಿ ದೃಢವಾಗೆಮಗೆ ಇತ್ತು ರಕ್ಷಿಸಲೆಂದು 2 ಮಾನ ಬೇಡುವನಲ್ಲ ದಾನ ಬೇಡುವನಲ್ಲಾಹೀನತನ ಬ್ಯಾಡೆಂದು ಕೇಳ್ವನಲ್ಲಾಮಾನನಿಧಿ ನಮ್ಮ ಶ್ರೀ ನರಹರಿಯ ಚರಣವನುಕಾಣಿಸುವ ಜ್ಞಾನವನು ದಾನ ಮಾಡೆಮಗೆಂದು 3
--------------
ತಂದೆ ಶ್ರೀನರಹರಿ