ಏನೆ ನಾರಿ ಕನಸುತೋರಿ ಹಾರಿತಲ್ಲೆ ಪ
ಫೋರ ಪಾತಕವ ಕೊಂದೂ ಒಳ್ಳೆ
ತಾರೆಬೆಳಕಿನ ಚಂದಾ ಅ.ಪ
ಇಂದಿರಾಪತಿ ತಾ ಮಂದಹಾಸದೊಳು
ಕುಂದರದನೆಯ ಕೂಡಿ ನನ್ನ
ನಿಂದೆ ತಂದ ಸರಿಮಾಡಿ ಕಳ್ಳ
ಬಂದು ಪೋದ ಕರತಂದು ತೋರೆಮತ್ತೆ
ನಿಂದು ಭಜನೆಯ ಮಾಡಿ 1
ಬಾರೊ ಧೀರ ಅಂದ್ರೆ ನೀರ ಆಟದೊಳು
ತೋರಿ ಮಾಡಿದನು ಮೋಸಾ ಭವ
ದೂರನಾದ ವೆಂಕಟೇಶಾ ರಂಗ
ದಾರಿಕಾಣೆ ಕಂಡು ತೋರೋ ನಿನ್ನ ಪಾದ
ಗುರುವು ತುಲಸಿ ರಾಮದಾಸ 2