ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಾಣೆ ಬ್ಯಾಡ ಬ್ಯಾಡವೋ ರಂಗ ನಿನಗಿದುಚೆನ್ನಗಿತ್ತೇರ ಮನೆ ಗೋವಿಂದ ಪ. ಗೋಪೇರ ಮನೆಗಳ ಪೊಕ್ಕು ಬಹುಪರಿ-ತಾಪವ ಮಾಡುವರೇ ಕಂದ ಗೋವಿಂದಕಾಪಟ್ಯಸತಿಯರ ಮಾತ ನೀನಾಲಿಸಿಕೋಪಿಸಬೇಡವಮ್ಮಾ ಗೋಪೆಮ್ಮ 1 ಎನ್ನಪ್ಪ ಕಂದನೆ ಚಿಣ್ಣ ಗೋಪೇರು ಬಂದುನಿನ್ನ ದೂರುತಲೈದಾರೋ ಗೋವಿಂದಕನ್ನೇರು ಕೊಬ್ಬಿಂದ ಅನ್ಯಾಯ ನುಡಿತಾರೆÀಇನ್ನೇನು ಮಾಡಲಮ್ಮ ಗೋಪೆಮ್ಮ 2 ದಧಿ ದುಗ್ಧ ಭಾಂಡ ಒಡೆದು ಗೋಪಿಯರನ್ನುಸದರ ಮಾಡುವರೇ ಕಂದ ಗೋವಿಂದಉದಯದಿ ಗುದ್ದ್ಯಾಡಿ ಮಾರ್ಜಾಲಂಗಳು ಬೀಳೆದÀಧಿಭಾಂಡ ಜಾರಿತಮ್ಮ ಗೋಪೆಮ್ಮ 3 ಬಸವನ ಆಟದಿ ಶಿಶುಗಳೆಲ್ಲರ ಕೂಡಿಮಸಿಮಣ್ಣು ಮೈಯ್ಯಾದವೊ ಗೊವಿಂದಬಿಸಜಾಕ್ಷಿಯರು ತಮ್ಮ ಮನೆಕೆಲಸದ ಕೈಯ್ಯಮಸಿಮಣ್ಣು ಒರೆಸಿದರೆ ಗೋಪೆಮ್ಮ 4 ಒರಗಿದ್ದ ಹಸುಗಳೆಬ್ಬಿಸಿ ಕರುಗಳ ಬಿಟ್ಟುದುರುಳತನವ ಮಾಡೋರೆ ಗೋವಿಂದನೆರೆದಿದ್ದ ಶಿಶುಗಳಾಡುವ ಗುಲ್ಲ ತಾವ್ ಕೇಳಿತುರುಶಿಶು ಬೆದರಿತಮ್ಮಾ ಗೋಪೆಮ್ಮ 5 ಅಣ್ಣ ಬಲರಾಮ ನಿನ್ನ ಬನ್ನಣೆ ಸುದ್ದಿಯಚೆನ್ನಾಗಿ ಪೇಳಿದನೊ ಗೋವಿಂದಉನ್ನಂತ ದಾಯಾದಿಯ ಮಾತುಗಳ ನೀನುಮನ್ನಿಸ ಬೇಡವಮ್ಮ ಗೋಪೆಮ್ಮ 6 ಬಾಯೆನ್ನ ರನ್ನವೆ ಬಾಯೆನ್ನ ಚಿನ್ನವೆಬಾಯೆನ್ನ ಮೋಹದ ಗಿಣಿಯೆ ಗೋವಿಂದಬಾಯೆಂದು ಯಶೋದೆ ಕರೆದಳು ಬಿಗಿದಪ್ಪಿಬಾಯೆನ್ನ ಹಯವದನ ಗೋವಿಂದ7
--------------
ವಾದಿರಾಜ
ಕೀಳು ಮನವೆ ಏನುಕೆಟ್ಟೆಲೋ ಹಾಳು ಮಾಡಿದಿ ದಿನಗಳ ಪ ನೀಲಮೇಘಶ್ಯಾಮ ಹರಿಪಾದ ಶೀಲಭಕ್ತಿಲಿ ಸ್ಮರಿಸದೆ ಅ.ಪ ಬಾಲತನದ ಸುಶೀಲ ದಿನಗಳ ಜಾಳುಗೈದೆಲೋ ಆಟದಿ ನಾಳೆ ಕಾಲನು ಸೀಳಿ ಕೊಲುವಾಗ ತಾಳಿ ಬಾಳುವುದೆಂತೆಲೊ 1 ಪ್ರಾಯದಿನಗಳ ಕಾಯಜನ ಮಹ ಮಾಯದಾಟದಿ ನೀಗಿದ್ಯೊ ಮಾಯಮೃತಿಯ ಬಾಯೊಳು ಸಿಲ್ಕಿ ನೋಯುವಾಗ ಕಾಯ್ವರಾರೆಲೊ 2 ಇಷ್ಟಕ್ಕಾದರೂ ಕೆಟ್ಟಗುಣಗಳ ಬಿಟ್ಟು ಶ್ರೀರಾಮಪಾದವ ನಿಷ್ಠೆಯಿಂ ಮನಮುಟ್ಟಿ ಭಜಿಸಲೆ ದುಷ್ಟಭವದಿಂ ಗೆಲಿಸುವ 3
--------------
ರಾಮದಾಸರು
ತಿಳಿಯದಾಯಿತು ವಯಸು ಕಳೆದು ಹೋಯಿತು ಪ ಕಳವಳಿಸುತ ಕಡೆಗಾಣದೆ ಬಳಲಿ ತೊಳಲಿ ಪಾಪ ಹೆಚ್ಚಿ ಅ.ಪ ಸತಿಸುತರೆಂಬ ಬಲೆಗೆ ಸಿಲುಕಿ ಅತಿಶಯ ಮೋಹದಲಿ ಮುಳುಗಿ ಪಥಿಕರಾಡುವಂತೆ ನಡೆದು ಪತಿತನಾಗಿ ನಿಜದ ಮರ್ಮಾ 1 ಕೆಲದಿನ ಆಟದಿ ಲಲನೆಯರ ಕೂಟದಿ ಹಲವು ವಿದ್ಯೆಯ ಕಲಿತು ಪರರ ಒಲಿಸಿ ಸ್ತ್ರೋತ್ರಮಾಡಿ ಬೇಡಿ ಫಲವ ಕಾಣಲಿಲ್ಲ ಕೊನೆಗೆ ಹಲುಬಿ ಹಲುಬಿ ಬಾಯಿನೊಂದು 2 ನೀತಿ ಹೇಳುತಾ ಪರರ ನಿಂದೆಗೆಯ್ಯುತಾ ಗುರುಮುಖದಲಿ ಪರಮತತ್ವ 3 ಮತ್ತನಾಗುತ ದುರಾಸಕ್ತನೆನಿಸುತ ನಿತ್ಯಕರ್ಮವನ್ನು ತೊರೆದು ಸತ್ಯಶಮದಮಗಳ ಮರೆದು ಚಿತ್ತದಲಿ ನಿರ್ಮಲನಾಗದೆ ಚಿಂತಿಸುತಲಿ ನಿಜದ ನೆಲೆಯ 4 ಗುರುರಾಮವಿಠಲನ ಶ್ರೀಚರಣಕಮಲ ಸ್ಮರಣೆಗೈದು ಹೊರಗು ಒಳಗು ಒಂದೆ ವಿಧದಿ ಚರಿಸಿ ಸೌಖ್ಯಪಡೆವ ಬಗೆಯ 5
--------------
ಗುರುರಾಮವಿಠಲ
ಶ್ರೀನಿವಾಸ-ಶ್ರೀನಿವಾಸ-ದೀನರಕ್ಷಕ ದಾನಿ ನೀನೆಂದು ನಂಬಿದೆ ಪ ಜ್ಞಾನಗಮ್ಯನೆ ವಾಙ್ಮನೋಮಯ ಮಾನಿ ಮಾನಸರಾಜಹಂಸ ಅ.ಪ ಲೋಕಭರಿತ ಶ್ರೀಕಳತ್ರ-ತ್ರಿಕಕುದ್ಧಾಮದಧಿನಾಥ ಶ್ರೀಕಮಲಭವಾದಿವಂದಿತ ಮುಕುತಾಮುಕುತಜನ ಸಂಸೇವಿತ ಅಖಿಳಾಗಮಕೆ ಅತೀತ-ಶ್ರೀಕರಪಲ್ಲವಪೂಜಿತ ಅಖಿಳಾಜಾಂಡದಿ ವ್ಯಾಪ್ತ-ಭಕುತರಗತಿಯಪ್ರದಾತ1 ನಿಗಮವಿತ್ತೆ ನಗವಪೊತ್ತೆ ಬಗೆದು ಬೇರ ನರ- ಮೃಗಾಂಗನೇ ತ್ಯಾಗಿಯೊಳು ಪೋಗಿ ನೃಪರ ನೀಗಿಸಿ ವನವನವಾ ಚರಿಸಿದೆ ಬಗೆಬಗೆ ಆಟದಿ ಬಾಲ್ಯದಿ ಹಗೆಗಳ ಮಡುಹಿದೆ ಕಾರ್ಯದಿ ಆಗಮಕರ್ಥಮೋಹಿಸಿ-ಜಗದೊಳುತುರಗವನೇರ್ದೆ 2 ಅಂತರಾತ್ಮಪರಮಾತ್ಮ ಅನಂತಾನಂತರೂಪಾತ್ಮ ಪ್ರಾಂತಕಾಣದೇ ನಿರಂತರದಿ ನಿಂತು ಸಿರಿ ನಿತ್ಯಮುಕ್ತಳಾದಳೋ ಕಂತುಪಿತ ಎನ್ನಂತರದಿ ನಿಂತಿಹೆ ನಿರಂತರದಿ ಕಾಂತ ಶ್ರೀ ವೆಂಕಟೇಶನೆ-ಅಂತರ್ಬಹಿರದಿ ನಿಂತಿಹ ಪ್ರಭೊ 3 ಅಪ್ರಮೇಯ ಸ್ವಪ್ರಕಾಶ ಅಪ್ರಾಕೃತಗುಣಗಣಾರ್ಣವ ಸ್ವಪ್ರಯೋಜನರಹಿತ ಸತತ ತ್ವತ್ಪ್ರಸಾದದಿಂದ ಜಗವು ಕ್ಷಿಪ್ರದಿ ನೃಪಸಂಸ್ತುತಿಸೆ ವಿಪ್ರನಮನ ಸಂತೈಸಿದೆ ಅಪ್ರತಿಹತಮಹಿಮನು ಸುಪ್ರೀತನು ಜನರ್ಗೆ 4 ಪರಮ ಪುರುಷ ಪೂರ್ಣಾನಂದ ಪರಮಕರುಣಶರಧಿಯೆ ಉರಗಾದ್ರಿವಾಸ ವಿಠ್ಠಲ ಕರಾವಲಂಬನವಿತ್ತು ಸಲಹೆಲೋ ಪರಿಪರಿ ಎನ್ನಪರಾಧ ನೋಳ್ಪರೆ ಭೋ ಜಗದೊಡೆಯ ಕರುಣವು ತೋರದೆ ನೀನಿರೆ ನರಪಶು ನಾನೆಂತು ಬಾಳ್ವೆನೋ5
--------------
ಉರಗಾದ್ರಿವಾಸವಿಠಲದಾಸರು
ಹರೇ ಹರೇ ಕೃಷ್ಣ ಹರೇ ಕೃಷ ಹರೇ ಹರೇ ಹರೇ ಪ ಕೌಸಲ್ಯ ವರವಂಶೋದ್ಭವ ಸುರ ಸಂಸೇವಿತ ಪದರಾಮ ಹರೇ ವಂಶೋದ್ಭವ ಶ್ರೀ ಕೃಷ್ಣಹರೇ 1 ಮುನಿಮಖರಕ್ಷಕ ದನುಜರಶಿಕ್ಷಕÀ ಘಣಿಧರ ಸನ್ನುತರಾಮಹರೇ ಘನವರ್ಣಾಂಗ ಸುಮನಸರೊಡೆಯ ಶ್ರೀ - ವನಜಾಸನ ಪಿತ ಕೃಷ್ಣ ಹರೇ 2 ಶಿಲೆಯ ಪಾದರಜದಲಿ ಸ್ತ್ರೀ ಮಾಡಿದ ಸುಲಲಿತ ಗುಣನಿಧಿ ರಾಮ ಹರೇ ಬಲುವಕ್ರಾಗಿದ್ದ ಬಲೆಯ ಕ್ಷಣದಲಿ ಚಲುವೆಯ ಮಾಡಿದ ಕೃಷ್ಣ ಹರೇ 3 ಹರಧನುಭಂಗಿಸಿ ಹರುಷದಿಜಾನಕಿ ಕರವಪಿಡಿದ ಶ್ರೀರಾಮ ಹರೇ ಸಿರಿ ರುಕ್ಮಿಣಿಯನು ತ್ವರದಲಿ ವರಿಸಿದ ಶರಣರ ಪಾಲಕ ಕೃಷ್ಣ ಹರೇ 4 ಜನಕ ಪೇಳೆ ಲಕ್ಷ್ಮಣ ಸೀತಾ ಸಹ ವನಕೆ ತೆರಳಿದ ರಾಮ ಹರೇ ವನಕೆ ಪೋಗಿ ತನ್ನಣುಗರೊಡನೆ ಗೋ - ವನು ಪಾಲಿಪ ಶ್ರೀ ಕೃಷ್ಣ ಹರೇ5 ತಾಟಕೆ ಖರಮಧು ಕೈಟಭಾರಿಪಾ ಪಾಟವಿ ಸುರಮಖ ರಾಮಹರೇ ಆಟದಿ ಫಣಿಮೇಲ್ ನಾಟ್ಯವನಾಡಿದ ಖೇಟವಾಹ ಶ್ರೀ ಕೃಷ್ಣ ಹರೇ 6 ಚದುರೆ ಶಬರಿಯಿತ್ತ ಬದರಿಯ ಫಲವನು ಮುದದಿ ಸೇವಿಸಿದ ರಾಮ ಹರೇ ವಿದುರನ ಕ್ಷೀರಕೆ ವದಗಿ ಪೋದ ಶ್ರೀ ಪದುಮನಾಭ ಜಯ ಕೃಷ್ಣ ಹರೇ 7 ಸೇವಿತ ಹನುಮ ಸುಗ್ರೀವನ ಸಖಜಗ - ತ್ಪಾವನ ಪರತರ ರಾಮಹರೇ ದೇವ ದೇವ ಶ್ರೀ ಕೃಷ್ಣ ಹರೇ 8 ಗಿರಿಗಳಿಂದ ವರಶರಧಿ ಬಂಧಿಸಿದ ಪರಮ ಸಮರ್ಥ ಶ್ರೀರಾಮ ಹರೇ ಗಿರಿಯ ತನ್ನ ಕಿರಿ ಬೆರಳಿಲೆತ್ತಿ ಗೋ - ಪರನ ಕಾಯ್ದ ಶ್ರೀ ಕೃಷ್ಣ ಹರೇ 9 ಖಂಡಿಸಿದಶಶಿರ ಚಂಡಾಡಿದ ಕೋ - ದಂಡಪಾಣಿ ಶ್ರೀ ರಾಮ ಹರೇ ಪಾಂಡುತನಯರಿಂ ಚಂಡಕೌರವರ ದಿಂಡುಗೆಡಹಿಸಿದ ಕೃಷ್ಣ ಹರೇ 10 ತವಕದಯೋಧ್ಯಾ ಪುರಕೈದಿದ ತ - ನ್ಯುವತಿಯೊಡನೆ ಶ್ರೀ ರಾಮ ಹರೇ ರವಿಸುತ ತನಯಗೆ ಪಟ್ಟವಗಟ್ಟಿದ ಭವತಾರಕ ಶ್ರೀ ಕೃಷ್ಣ ಹರೇ 11 ಭರತನು ಪ್ರಾರ್ಥಿಸಲರಸತ್ವವ ಸ್ವೀ - ಕರಿಸಿದತ್ವರದಲಿ ರಾಮ ಹರೇ ವರಧರ್ಮಾದ್ಯರ ಧರಿಯೊಳು ಮೆರೆಸಿದ ಪರಮಕೃಪಾಕರ ಕೃಷ್ಣ ಹರೇ 12 ಧರೆಯೊಳಜ್ಞಜನರನು ಮೋಹಿಪುದಕೆ ಹರನ ಪೂಜಿಸಿದರಾಮ ಹರೇ ಹರನ ಪ್ರಾರ್ಥಿಸಿವರವನು ಪಡೆದಾ ಚರಿತೆಯಗಾಧವು ಕೃಷ್ಣ ಹರೇ 13 ಅತುಳಮಹಿಮ ಸದ್ಯತಿಗಳ ಹೃದಯದಿ ಸತತ ವಿರಾಜಿಪÀರಾಮಹರೇ ಸಿತವಾಹನ ಸಾರಥಿಯೆನಿಸಿದ ಸುರತತಿ ಪೂಜಿತ ಪದ ಕೃಷ್ಣ ಹರೇ 14 ರಾಮ ರಾಮ ಯಂದ್ನೇಮದಿ ಭಜಿಪರ ಕಾಮಿತ ಫಲದ ಶ್ರೀ ರಾಮಹರೇ ಪ್ರೇಮದಿ ಭಕ್ತರ ಪಾಲಿಪ ಶ್ರೀ ವರ - ದೇಶವಿಠಲ ಶ್ರೀ ಕೃಷ್ಣ ಹರೇ 15
--------------
ವರದೇಶವಿಠಲ