ಶ್ರೀಹರಿ ಸ್ತುತಿ
ಆವಕಡೆಯಿಂದ ಬಂದೆ ವಾಜಿವದನನೆಭಾವಿಸುವ ವಾದಿರಾಜಮುನಿಯ ಕಾಣುತ ಪ.
ನೇವರಿಸಿ ಮೈಯ ತಡವಿ ನೇಹದಿಂದಲಿ ಮೇಲುನೈವೇದ್ಯವನ್ನು ಇತ್ತು ಭಜಿಸುವೆ ಅ.ಪ.
ಭಕುತಿಕಡಲೆ ಜ್ಞಾನವೈರಾಗ್ಯಬೆಲ್ಲದಮುಕುತಿ ಆನಂದಸುಖದ ಕ್ಷೀರಲಡ್ಡಿಗೆಯುಕುತಿ ಧ್ಯಾನಕೊಟ್ಟು ನೀನು ಎಲ್ಲಮಾತಲಿಶಕುತಿ ಸಂತೋಷ ಮಹಿಮೆ ತೋರಬಂದೆಯ 1
ಹೆತ್ತತುಪ್ಪ ಸಕ್ಕರೆಯ ಮಡ್ಡಿಮುದ್ದೆಯತುತ್ತುಮಾಡಿ ಕೊಡಲು ಅದನು ಮೆಲುತ ಮೆಚ್ಚುತಅತ್ಯಂತ ಸಂತೋಷ ನೀನು ಆಟತೋರುತಭೃತ್ಯ ವಾದಿರಾಜಮುನಿಯ ಸಲಹಬಂದೆಯ 2
ಫಲವ ಕೊಟ್ಟು ರಕ್ಷಿಸಿದಿ ವಾಜಿವದನನೆನಿಲುವೋ ಜ್ಞಾನಭಕ್ತಿಯನ್ನು ನೀಡಬಂದೆಯಸುಲಭ ಸುಮುಖ ಸುಪ್ರಸನ್ನ ಹಯವದನನೆಚೆಲುವ ಚಿನ್ಮಯಮೂರ್ತಿ ನಮ್ಮ ಸಲಹ ಬಂದೆಯ 3