ಅವನೆವೆ ದಾನವನು ನೋಡಿರೋ |
ಅವನವೇ ದಾನವನು ಪ
ದಾವನು ಸಾಕುವ ದೇವರ ಮರೆದು |
ಅವಿವೇಕತನದಲಿ ಜೀವಿಸುತಿಹಾ ಅ.ಪ
ವಿಷಯದ ಸಂಭ್ರಮದಾ ಸ್ಥಿರಪಟ್ಟಾ |
ವಸುಧಿಲಿ ಬಗದಾವಾ |
ಆಶನ ವ್ಯಸನದೊಳು ಪಶುವಿನ ಪರಿಯಲಿ |
ನಿಶಿದಿನ ಗಳೆವುತ ದೆಶೆಗೆಟ್ಟು ಹೋದಾ 1
ಸಾಧು ಸಂಗಕ ದೂರಾ ಶ್ರವಣದ |
ಹಾದಿಗೆಂದಿಗೆ ಬಾರಾ |
ಸಾಧಿಸಿ ಕುವಿದ್ಯಾವಾದಾ ಆಟಗಳನು |
ಸಾದರ ನೋಡುತಾ ತಾ ದಿನಗಳೆವಾ 2
ಗುರು ಮಹಿಪತಿ ಬೋಧಾ ನಂದನು |
ಸಾರಿದನಾ ಹಿತವಾದಾ |
ಹರಿನಾಮಾವೆಂದಿಗೆ ಸ್ಮರಿಸು ಮುಖದೊಳು |
ನರದೇಹವೆಂಬುದು ಬಾರದು ನೋಡಿ 3