ಹರಿಕೃಷ್ಣ ವಿಠಲಾ | ಕರುಣಿಸಿವಳೀಗೆ ಪ
ಕರುಣಾನಿಧಿ ಎಂದೆನುತ | ಮರೆಹೊಕ್ಕೆ ದೇವಾ ಅ.ಪ.
ಜ್ಞಾನವರ್ಜಿತಳಾಗಿ | ಆಜ್ಞೆಳೆಂದೆನಿಸಿಹಳುಮಾನನಿಧಿ ನೀನಾಗಿ | ಜ್ಞಾನ ಸಾಧನವಾಸಾನುಕೂಲಿಸೆ ಕಾಯೊ | ಮೌನಿಜನ ಸದ್ವಂದ್ವನೀನೆಗತಿ ಎಂದೆನುತಾ | ತನುವನರ್ಪಿಪಳೊ 1
ಕತೃ ನೀನೆಂಬಂಥಾಉತ್ತಮದ ಮತಿಯಿತ್ತು | ಬೃತ್ಯಳನು ಪೊರೆಯೋ 2
ಕ್ಲೇಶಮೋದಗಳು ಸಮ | ಭಾಸವಾಗಲಿ ದೇವವಾಸವಾದ್ಯಮರನುತ | ವಾಸುದೇವಾ ಖ್ಯಏಸೇಸು ಜನ್ಮಗಳ | ರಾಶಿ ಪುಣ್ಯದ ಫಲದಿದಾಸ ದೀಕ್ಷೆಗೆ ಮನವ | ಆಶಿಸಿಹಳಯ್ಯಾ 3
ರಾಜೀವ ನಯನ ಹರಿಓಜಸ್ಸುಗಳ ಕೊಟ್ಟು ಕಾಪಾಡೊ ಇವಳಾ 4
ಸರ್ವಜ್ಞ ಸರ್ವೇಶ | ಸರ್ವಕಾರಣ ಮೂರ್ತಿಊರ್ವಿಯಾಳಿವಳೊಬ್ಬ | ದರ್ವಿಯಂತಿಹಳೋಸರ್ವದಾ ತವಸ್ಮರಣೆ | ಕೃಪೆಗೈದು ಪೊರೆ ಇವಳಾಗುರ್ವಂತರಾತ್ಮ ಗುರು | ಗೋವಿಂದ ವಿಠಲಾ 5