ಗುರು ಹೊಂದಿದವನೀಗ ಎಂದಿಗೂ ಕೆಡನುಮರಳಿ ಹುಟ್ಟಿದರೇನು ಗುರುವು ಕಾಯುವನು ಪ
ಗುರು ಹೇಳಿದಂತಿರದೆ ಗುರು ಆಜ್ಞೆಯಂತಿರದೆಬರಿಯ ಪ್ರಾಪಂಚದ ನಡೆಯನೆ ನಡೆದುಮರೆತೆಯಾದರೇನು ಗುರು ಕರುಣ ತಾನದುವೆನರಕಕ್ಕೆ ಕಳುಹದೋ ಯಮನ ಸೇರಿಸದೋ 1
ತನ್ನ ಅವಗುಣದಿ ಜನ್ಮಗಳ ಸೇರಿದರೇನುಅನ್ಯಕೆ ಎಳಸದದು ಸೋಂಕಿನಲಿ ಮನವುಚೆನ್ನಾಗಿಯೇ ಗುರುದ್ವಾರವನು ಕಾದಿಹನುಭಿನ್ನಿಸದೆ ಪರತತ್ವ ಬೋಧೆ ಹೇಳುವನು 2
ಭ್ರಷ್ಟತ್ವದಿಂ ತನ್ನ ಪಾಪವನು ಉಣುತಲಿಹುಟ್ಟುತಿಹ ಹಂದಿ ಪಶುವಾಗಿ ತಾನುಘಟ್ಯಾಗಿ ನರಜನ್ಮ ಧರಿಸುತ್ತ ಕಡೆಯಲಿಶಿಷ್ಟ ಚಿದಾನಂದ ಬಗಳೆಯನು ಕೂಡುವನು 3