ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಇ) ಲೋಕನೀತಿ ಮಾಧವ ಎನಬಾರದೆ ಜೀವ ಕಾಲ ಪ ಆಚಿಂತೆ ಈ ಚಿಂತೆ ಎಲ್ಲಾ ಚಿಂತೆಯನು ಕಿಂಚಿತ್ತು ಹೊತ್ತು ಬಂತೆಯಾದೆ ನಾನು ಅ.ಪ ಪತಿಯ ಚಿಂತೆ ಪರಸತಿಯ ಚಿಂತೆ ಅತಿಯಾದ ಮೋಹದ ಮಕ್ಕಳ ಚಿಂತೆ ಪ್ರತಿದಿನ ತುತ್ತಿನ ಚೀಲದ ಚಿಂತೆ ಮತ್ತೇನು ಅದಕಾಗಿ ಆಸ್ತಿಯ ಚಿಂತೆ 1 ಆಸ್ತಿಮಾಡಿದರೆ ಕಾಯುವ ಚಿಂತೆ ಜಾಸ್ತಿ ಸೇರಿದರೆ ಕನಲುವ ಚಿಂತೆ ಸುಸ್ತಿ ಬಡ್ಡಿಯಲಿ ಬೇಯುವ ಚಿಂತೆ ಸುಸ್ತಾಗಿ ಸೊರಗುವ ನೋವಿನ ಚಿಂತೆ 2 ಬದುಕಿದರೂ ಚಿಂತೆ ಬಾಳಿದರೂ ಚಿಂತೆ ಬದುಕ ಸಹಿಸದ ಮೂಢರಿಂದ ಚಿಂತೆ ಮುದದಿ ಕಾಯುವ ಮಾಧವನ ಚಿಂತೆ ಬಾಧಿಸದಲ್ಲೋ ಕೊಂಚವು ತಂದೆ 3 ಆ ಚಿಂತೆ ಈ ಚಿಂತೆ ಯಾಚಿಂತೆಯೊಳಗಿಂದ ಆಚೆಗೆ ಎಳೆತಂದು ಮತಿಯನು ನೀಡೋ ಅಚಿಂತ್ಯ ನಿನ್ನನೆ ಚಿಂತಿಸುವಂತೆನ್ನ ನಿಶ್ಚಿಂತನಾಗಿಸೊ ಜಾಜಿಪುರೀಶ 4
--------------
ನಾರಾಯಣಶರ್ಮರು