ಮುಕುತಿಗೆ ಹೊಣಿಯಿದಕೋ ಭಕುತಿ ಪ
ಹರಿಭಕುತಿಯ ಗುರು ಮೂರ್ತಿಲಿ ತಂದು |
ಬೆರೆವದು ತನುಮನವಚನದಲೀ 1
ಆಚಾರ್ಯಮಾಂವಿಧಿ ಎಂದುದ್ದವಗೇ |
ಸೂಚಿಸಿ ಹೇಳಿದ ಯದುವರನೀಗ2
ಸರ್ವಂ ವಾಸುದೇವೆನುತಿರಲಿಕ್ಕೆ |
ಗುರ್ವಿನೊಳಗ ಅನುಮಾನವು ಬೇಕ3
ಬಲ್ಲವ ಬಲ್ಲವನೀ ಮಾತಿನ ಖೂನಾ |
ಎಲ್ಲರಿಗಿದು ಅಗಮ್ಯದ ಸ್ಥಾನಾ4
ತಂದೆ ಮಹೀಪತಿ ಪ್ರಭು ದಯದಿಂದಾ |
ಕಂದಗೆಚ್ಚರಿಸಿದ ಸುಖಸ್ವಾನಂದ5