ಏಕೆ ಎನ್ನೊಳು ಮೂಕನಾದ್ಯೊತ್ರಿ
ಲೋಕ ಜೀವಾಳುಪ
ಪಿತ ಮಾತೃದ್ರೋಹಿಯೆಂದು ಅತಿಥಿಗಳನಾದರನುಯೆಂದು
ಅತಿ ಪಾತಕಿಯಿವನುಯೆಂದಹಿತದಿ ಮುಖವೆತ್ತದಿರುವ್ಯೋ 1
ವಾಚಹೀನ ನೀಚನೆಂದು ಸಾಚಮನವಿಗಳ್ನಿಂದಕನೆಂದು
ಆಚರಿಪನನಾಚಾರವೆಂದು ನೀಚಾರಿ ದಯಸೂಚಿಸದಿರುವ್ಯೋ 2
ಭಕ್ತರನ್ನು ಕ್ಷಮಿಸಿ ಪೊರೆದು ಭಕ್ತವತ್ಸಲನೆಂಬ ಬಿರುದು
ಹೊತ್ತದ್ದೆಲ್ಲಡಗಿಸಿದ್ಯೋ ಮುಕ್ತಿದಾತೆನ್ನಯ್ಯ ರಾಮ 3