ಆತ್ಮವೇ ಜೀವಾತ್ಮನುಆತ್ಮ ಬೇರೆ ಜೀವಾತ್ಮ ಬೇರೆಯಲ್ಲ ಪ
ಅರಸು ಎಂಬವ ಹೋಗಿ ಚಾಕರನಾಗಿರೆಅರಸು ಬೇರೆ ಚಾಕರ ಬೇರೆ ತಿಳಿ1
ಬ್ರಹ್ಮಚಾರಿಯು ಹೋಗಿ ಯತಿಯಾಗಿ ಕುಳಿತರೆಬ್ರಹ್ಮಚಾರಿಯು ಬೇರೆ ಯತಿ ಬೇರೆ ತಿಳಿ2
ಸಾಧಕನು ಹೋಗಿ ಸಾಧ್ಯನು ಆಗಿರೆಸಾಧಕನು ಬೇರೆ ಸಾಧ್ಯನು ಬೇರೆ ತಿಳಿ 3
ಆತ್ಮನೆಂಬುವ ಹೋಗಿ ಜೀವನೇ ಆಗಿರೆಆತ್ಮನು ಬೇರೆ ಜೀವನು ಬೇರೆ ತಿಳಿ 4
ಒಬ್ಬ ಉಪಾಧಿಯಿಂದಲಿ ನಾನು ಎರಡಿರೆಒಬ್ಬ ಚಿದಾನಂದ ತಾನೆ ಸತ್ಯ ಸತ್ಯ 5