ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚನ್ನಕೇಶವ ಪನ್ನಗಶಯನ ಪ ಚನ್ನಪಾದಪೂಜೆಯನ್ನು ಕರುಣಿಸಯ್ಯ ಅ.ಪ ಸಾಕಲಾರದೆ ನೂಕುತಿರುವೆಯಾ ವಿ ವೇತಕವೇ ಇದು ಸಾಕು ಸುತನ ಸಲಹು 1 ದೂರನುಯೋಚಿಸು ದಾರಿಯಬಿಡದೆ ಸಾರಿಸ್ಮರಿಸುವ ಪಾರುಗಾಣಿಸಯ್ಯ 2 ಶ್ರೀದೇವಿಯ ಸಾಧುವೇನೊ ಕೇಳು ಆಧಾರಿಯೇ ಭೇದ ಸರಿಯೆ ಹೇಳು 3 ತಪ್ಪುಮಾಡದೆ ಇಪ್ಪರಾರೊ ಹರಿ ಅಪ್ಪುತೆಮ್ಮ ಬಂದು ಒಪ್ಪಿ ಪೊರೆಯೊ ಬಂಧು4 ಅಮ್ಮನಾನುಡಿ ಆಲಿಸಂತೆ ನಡಿ ನೆಮ್ಮದಿಯೊಳಡಿಯಿಟ್ಟು ಯೆನ್ನ ಕೈಪಿಡಿ5 ಸುಮನಸಗುಣಾ ಕಮಲಾಕ್ಷದಾ ಅಮರವಾಣಿಪೇಳು ಅಮಿತಸುಖದ ಬಾಳು 6 ಆಗಲೈಮಗು ಭೋಗ ಭಾಗ್ಯಹೊಗು ಯೋಗಿ 7 ನಂಬಿನಡೆವೆ ಸಂಭ್ರಮದ ಕಣಿ ಅಂಬುಜೋದರಾನಂದಸಾಗರಾ ನಾಂ8 ಜಯ ಜಯ ಜಯ ಮಂಗಳಮಯ ಭಯನಿವಾರಣ ಭಕ್ತ ಸಂರಕ್ಷಣಾ 9 ಇದ ಪಾಡುವಾ ಮುದ ಪಡೆಯುವಾ ಅಧಿನಾಥನೆಡೆ ಸುಧೆಸವಿಯಾವಾ 10 ವಿಧಿಪಿತನ ಸೇವೆ ನಿಧಿಯೆಂದರಿತು ಬುಧಮಂಡಲಿಯೊಳಧಿಕರಿಸುವಾಂ 11 ಜಾಜೀಶ್ವರಾ ಶ್ಯಾಮಸುಂದರಾ ರಾಜರಾಜಪೂಜ್ಯ ಸ್ವಾರಾಜ್ಯ ಸಾಮ್ರಾಜ್ಯ ಚನ್ನಕೇಶವಾ 12
--------------
ಶಾಮಶರ್ಮರು
ನಾರಾಯಣ ಕೃಷ್ಣ ಬೆಳಗಾಯಿತೇಳಯ್ಯ ಮೂರು ಲೋಕಂಗಳಿಗೆ ಮಂಗಳವ ಬೀರಯ್ಯ ಪ ಹರಿಹರಿ ಶ್ರೀನಿಲಯ ಪರವಾಸುದೇವ ಅ.ಪ ಬಂದಿರುವರೈ ಬ್ರಹ್ಮ ರುದ್ರೇಂದ್ರರು ತಂದೆ ತಂದಿರುವರೈ ಮಹನಿಧಿ ಕನಡಿ ಧೇನುಗಳ ನಿಂದು ಗಾನವಮಾಡುತಿರುವರಾನಂದದಿ ಗಂಧರ್ವರಪ್ಸರೆಯರಿಂದು ಕುಣಿದಾಡಿ ಕೂಡಿ 1 ದಾಸರೊಡೆ ತುಂಬುರರು ನಾರದರು ಜಯಜಯ ಶ್ರೀಶನೇ ಕೇಶವ ಗಜವರದ ಎಂದು ಆಶ್ರಯಿಸಿ ಚರಣಕ್ಕೆ ಶರಣೆಂದು ಮಣಿಯವರು ದೋಷನಾಶನ ಲೋಕಕಲ್ಯಾಣ ತ್ರಾಣ 2 ಪತಿವ್ರತಾ ಸ್ತ್ರೀಯರುಗಳತಿಶಯ ಮಡಿಯುಟ್ಟು ಹಿತವಾದ ಹುಗ್ಗಿ ಸಜ್ಜಿಗೆಯ ಗೈದು ಪತಿತಪಾವನ ನಿನಗೆ ದಧ್ಯನ್ನ ನೀಡುವರೊ ಕ್ಷಿತಿನಾಥ ನೀನವನು ತೋಷದಿಂ ಭುಜಿಸೊ 3 ರೋಗರುಜಿನಗಳಳಿದು ಆಯುವೃದ್ಧಿಯದಾಗಿ ಭಾಗವತ ಸಕುಟುಂಬ ಸಂತೋಷಗೂಡಿ ಭಾಗವತ ಭಾರತ ರಾಮಾಯಣಗಳ ಹಾಡಿ ಆಗಲೈ ಆಗಮಾರ್ಚನೆ ಆಲಯಗಳೊಳಗೆ 4 ಕಮಲಲೋಚನ ಕೆಟ್ಟ ಸ್ವಪ್ನ ಫಲವಳಿಸಿ ಯಮಕಂಟವಂ ಕಳೆದು ಭ್ರಮೆಗಳನು ನೀಗಿ ಸುಮನಸರ ಕೂಡಿ ಶ್ರೀಹರಿಯ ಗುಣಗಾನ ಮಾಡಿ ಅಮಿತ ಅಮೃತವುಣಿಸೈ 5 ಕ್ಷುಧ್ರಪಾಕೀ-ಚೀನ ಕೊಬ್ಬಿ ಛದ್ರಿಸುತು ಭದ್ರತೆಯನಾಡೊಳಗಸ್ಥಿರತೆಗೈಯುತ್ತ ಆದ್ರಿಅಂಬುಧಿ ಮಧ್ಯೆ ಭಾರತಿಯ ನಲಿಸುತ್ತ ಮುದ್ರೆಯುಂ ಧ್ವಜವನುಂ ನಿನ್ನವಾಗಿರಿಸೈ 6 ಕಾಲಕಾಲಗಳಲ್ಲಿ ಮಳೆಬಿಡದೆ ಸುರಿದು ಶಾಲಿಸಂತರ ಧಾನ್ಯ ಎಲ್ಲೆಲ್ಲು ಬೆಳೆದು ಮಹಿಷಿ ಶ್ರೀಲೋಲ ಕರುಣಿಸೈ ಕನಕವೃಷ್ಟಿಯನು 7 ಎದುರು ನೋಡುತ ನದಿಯು ಹರಿವುದು ಸಾಗರಕೆ ಮುದದಿಂದ ತಾವರೆಯು ಸೂರ್ಯನನ್ನು ವಿಧಿವಶದಿ ಪಾಪಿಗಳು ಯಮಲೋಕವನ್ನು ಸುಧೆಸವಿಯೆ ಭಕ್ತರು ಪರಮಪದವನ್ನು 8 ಮಕ್ಕಳಿಲ್ಲದ ಜನರು ಮಕ್ಕಳನು ಹಡೆದು ಲಕ್ಷ್ಮಿಯೊಲವನು ಹಾಡಿ ಜನರೆಲ್ಲ ದುಡಿದು ಭಕ್ತರಾಗುತ ಸರ್ವ ವಣಿಗೆಗಳು ನಡೆದು ಮುಕ್ತರಪ್ಪಂತೆಲ್ಲರ ಮಾಡು ಜಾಜೀಶ 9
--------------
ಶಾಮಶರ್ಮರು