ಆವದಿದು ಜ್ಞಾನ ಪ
ಆವದಿದು ಜ್ಞಾನಾ ಬಲ್ಲವಿಕೆ ಜಾಣಾ |
ಭಾವದುಗಮ ವರಿಯದೆವೆ ಜರಿದಿ ನಿಜ ಖೂನಾ 1
ಅರಹು ಆಗಲೆಂದು ಕುರುಹ ದೋರಿದೊಂದು |
ಕುರುಹವಿಡದ ಕೊಡ ತಿರುಗಿ ಅರಹು ಮರದಿಂದ 2
ಕಲಿತು_ವಾಡುದು ಸೊಲ್ಲಾ ಗುಣಕ ಬಾಹುದಲ್ಲಾ |
ಕಳೆದು ಅನುಮಾನ ಶಾಂತಿ ಸುಖವ ಪಡೆಯಲಿಲ್ಲಾ 3
ಅರಿಯದಿದ್ದರ ಕೀಲು ಸಾಧು ಸಂತರು ಕೇಳು |
ಗರುವತನವ ನೀಗಿ ಯಲ್ಲರ ಕಿರಿಯನಾಗಿ ಬಾಳು 4
ಸಾರಥಿ |
ಹೊಂದಿದವರ ನೋಡಿ ಕೊಡುವ ಮತಿ ಸ್ಫೂರ್ಥಿ 5