ಒಟ್ಟು 12 ಕಡೆಗಳಲ್ಲಿ , 10 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವದಿದು ಜ್ಞಾನ ಪ ಆವದಿದು ಜ್ಞಾನಾ ಬಲ್ಲವಿಕೆ ಜಾಣಾ | ಭಾವದುಗಮ ವರಿಯದೆವೆ ಜರಿದಿ ನಿಜ ಖೂನಾ 1 ಅರಹು ಆಗಲೆಂದು ಕುರುಹ ದೋರಿದೊಂದು | ಕುರುಹವಿಡದ ಕೊಡ ತಿರುಗಿ ಅರಹು ಮರದಿಂದ 2 ಕಲಿತು_ವಾಡುದು ಸೊಲ್ಲಾ ಗುಣಕ ಬಾಹುದಲ್ಲಾ | ಕಳೆದು ಅನುಮಾನ ಶಾಂತಿ ಸುಖವ ಪಡೆಯಲಿಲ್ಲಾ 3 ಅರಿಯದಿದ್ದರ ಕೀಲು ಸಾಧು ಸಂತರು ಕೇಳು | ಗರುವತನವ ನೀಗಿ ಯಲ್ಲರ ಕಿರಿಯನಾಗಿ ಬಾಳು 4 ಸಾರಥಿ | ಹೊಂದಿದವರ ನೋಡಿ ಕೊಡುವ ಮತಿ ಸ್ಫೂರ್ಥಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎದ್ದುನಿಂತ ಬಂದು ನಿಂತ ಮುಂದೆ ನಿಂದಂಥಮಾರಾಂತರ್ಗೆ ಕೃತಾಂತ ನಿಶ್ಚಿಂತ ಹನುಮಂತಬಲವಂತ ಯೆದೆಗೊಂತ ತನಪಂಥ ಸಲಲೆನುತಸÀಂತರಿಗೆ ಸಂತತ ಶಾಂತ ನಿಂತ ಮಾರಾಂತ ಕೃತಾಂತ ಪ. ದುರುಳ ರಾವಣನ ವನದ ತರುವಿನ ಕೊನೆಯೇರಿದಕರಚರಣಗಳ ಘಾಯದಿ ಮರಂಗಳ ಮುರಿದಅರಿಗಜ ಗಂಡಭೇರುಂಡನೆಂಬ ತನ್ನ ಬಲುಬಿರುದಮೆರೆದು ಮಾರುತಿ ಪ್ರತಿಭಟರ ಶಿರಂಗಳ ತರಿದ 1 ಸೀತೆಗೆ ಉಂಗುರವನ್ನಿತ್ತು ಮತ್ತೆ ಕೈಗಳ ಮುಗಿದಪ್ರೀತಿಯಿಂ ಪೊನ್ನಕಚ್ಚುಟಕ್ಕಿಟ್ಟ ಗಂಟನು ಬಿಗಿದಖ್ಯಾತ ಮಂಡೋದರಿಕುವರನ ಬಸುರನು ಬಗಿದವಾತಸುತನು ವೈರಿಪುರವ ಸುಡಲು ತೊಡಗಿದ 2 ನಲಿದು ಲಂಘಿಸಿ ನಳನಳಿಸುವ ಬಾಲವನೆತ್ತಿಖಳರೆದೆ ಶೂಲ ಹುಬ್ಬುಗಳ ಗಂಟಿಕ್ಕಿ ನೋಡುವ ಅರ್ಥಿಆಳುತಲಿಹ ಅಬಲೆಯರ ಭಯಂಕರಮೂರ್ತಿಸುಳಿದನು ಕೇರಿಕೇರಿಯಲಸುರರ ನುಗ್ಗೊತ್ತಿ 3 ಲಂಕಾನಗರಿಯ ಪುಚ್ಚದ ಕಿಚ್ಚಿಂದ ಸುಟ್ಟಹುಂಕರಿಸುತ ಅಹಿತರ ಬೇಗ ತೆಗೆದೊಗದಿಟ್ಟಕಂಕಣ ಮಕುಟ ಹಾರಂಗಳಿಂದೊಪ್ಪುವ ಬಲುದಿಟ್ಟಶಂಕೆಯಿಲ್ಲದನಿಲಜ ಶತ್ರುಗಳಿಗಿಂತರ್ಥಿಯ ಕೊಟ್ಟ 4 ಹೋಗೆಲೊ ಕಪಿಯೆನೆ ಹೊಕ್ಕು ರಕ್ಕಸರನು ಬಿಗಿದಕಾಗೆಯ ಬಳಗಕೆ ಕಲ್ಲನಿಟ್ಟಂದದಿ ಮಾಡಿದಆಗಲೆ ಕಂಡ ದಶಮುಖನೆಂಬ ಕಳ್ಳನ ನೋಡಿದಬೇಗ ಜಾನಕಿಯನ್ನು ಬಿಡು ಬಿಡುಯೆನಲು ತೊಡಗಿದ 5 ಮೂರರದೊಂದು ಪಾಲು ಖಳರ ಜನಂಗಳ ಕೊಂದಮೀರಿದ ಸೇನೆ ನಮ್ಮ ರಘುಪತಿಗಿರಲೆಂದು ನಿಂದನೂರುಯೋಜನದ ವಾರಾಶಿಯ ತೀರಕೆ ಬಂದಹಾರಿದನು ಗಗನಕೆ ಹನುಮನು ಭರವಸದಿಂದ ನಿಂದ 6 ಕುಂಭಿನೀ ಸುತೆಯ ಕುರುಹಿನ ಸನ್ಮಣಿಯ ತಕ್ಕೊಂಡಅಂಬುಧಿಯನು ಬೇಗ ದಾಟಿ ಶ್ರೀರಾಮರ ಕಂಡತ್ರ್ಯಂಬಕ ಮೊದಲಾದ ಸುರರ ತಂಡದಲಿ ಪ್ರಚಂಡಕಂಬುಕಂಧರ ಹಯವದನನ ಭಕ್ತಿರಸಾಯನ ಉಂಡ 7
--------------
ವಾದಿರಾಜ
ತುಂಬಿತು ಬೆಳೆದಿಂಗಳು-ಈ ವನದೊಳುತುಂಬಿತು ಬೆಳೆದಿಂಗಳು ಪ ತುಂಬಿತು ಬೆಳೆದಿಂಗಳೀವನದೊಳಗೆಲ್ಲಅಂಬುಜನಾಥನು ಬಾರ ಕಾಣಕ್ಕ ಅ.ಪ. ಮಾಗಿ ಹೋಗಿ ವಸಂತವು ಬರುತಿದೆಕೋಗಿಲೆ ತುಂಬಿಲ್ಲಿ ಕೂಗುತಿದೆಆಗಲೆ ಎಳೆಮಾವು ತಳಿರೇಳುತಲಿದೆನಾಗಶಯನ ಕೃಷ್ಣ ಬಾರ ಕಾಣಕ್ಕ1 ಕಟ್ಟಿದ್ದ ಬಿಳಿಯೆಲೆ ತೊಟ್ಟಾರುತಲಿದೆಪಟ್ಲ ಜಾಜಿಯ ಮೊಗ್ಗು ಅರಳುತಿದೆಬಟ್ಟೆ ಬಟ್ಟೆಲಿ ನೋಡಿ ಕಣ್ಣು ಝುಮ್ಮಿಟ್ಟಿತುಧಿಟ್ಟತನದ ರಂಗ ಬಾರ ಕಾಣಕ್ಕ 2 ಕಾದ ನೀರು ಎಲ್ಲ ಆರಿ ಹೋಗುತಲಿದೆಕಾಯ್ದ ಮಲ್ಲಿಗೆ ಹೂವು ಬಾಡುತಿದೆಮದನನ ಬಾಧೆಯು ಬಹಳವಾಗಿದೆ ಈಗಮದನನೈಯನು ಕೃಷ್ಣ ಬಾರ ಕಾಣಕ್ಕ3 ಅಡವಿಲಿ ಕೆರೆಕಟ್ಟೆ ಕುಡಿವೋರಿಲ್ಲದೆ ಬತ್ತಿನಡೆವೋರಿಲ್ಲದೆ ದಾರಿ ಹಸಗೆಟ್ಟಿತುಕಾಡಮಲ್ಲಿಗೆ ಹೂವ ಕುಯ್ದು ಮುಡಿವರಿಲ್ಲನೋಡದೆ ಎನ್ನ ಜೀವ ಹಸಗೆಟ್ಟಿತಮ್ಮ 4 ಹಾಸಿದ್ಹಾಸಿಗೆ ಮಂಚ ಹಸಗೆಟ್ಹೋಗುತಿದೆಪೂಸಿದ ಶ್ರೀಗಂಧ ಬೆವರುತಿದೆಲೇಸಾದ ನಮ್ಮೆದೆ ಮಿಂಚೇರುತಲಿದೆವಾಸುದೇವನು ಕೃಷ್ಣ ಬಾರಕಾಣಕ್ಕ 5 ಕಾಯ ಹೊಳವು ಮಾಡಿ ಕುಚವ ಸೋರೆಯಮಾಡಿಮನವೆಂಬ ತಂತಿಯ ಹೂಡಿಕೊಂಡುಎರಡು ಕಂಗಳನ್ನು ಎರಡು ತಾಳವÀ ಮಾಡಿಮೇಳಕೊಪ್ಪುವೆ ರಂಗ ಬಾರ ಕಾಣಕ್ಕ6 ಒಳದೊಡೆ ನಡುಗಿತೆ, ನೆರಿಯು ಹಾರುತಲಿವೆಕಳಕಳಿಸುತಲಿದೆ ಕಳವಳವುಪುಳಕವಾಗುತಲಿದೆ ಕಳೆಯುಗುಂದುತಲಿದೆನಳಿನಾಭನು ಕೃಷ್ಣ ಬಾರ ಕಾಣಕ್ಕ7
--------------
ವ್ಯಾಸರಾಯರು
ದಾಸರ ನರಸಿಂಹ | ಶ್ರೀಹರಿ ದಾಸರ ನರಸಿಂಹ ಪ. ಯೊಗಾ ನರಸಿಂಹ | ಕರಿಗಿರಿ ಭೋಗಾ ನರಸಿಂಹ ಆಗಲೆ ಸುರಿಯುವ ಮಳೆಯನು ನಿಲ್ಲಿಸಿ ಬೇಗನೆ ಕೈಕೊಂಡ ಉತ್ಸವ ನರಸಿಂಹ 1 ಶಾಂತಾ ನರಸಿಂಹ | ಪ್ರಹ್ಲಾ- ದಾಂತರ ನರಸಿಂಹ ನಿಂತು ಹೆಜ್ಜೆ ಹೆಜ್ಜೆಗೆ ಆರತಿ ಕೊಂಡು ಸಂತಸಪಡಿಸಿದ ಗುರುಗಳ ನರಸಿಂಹ 2 ಕಾಮಿತ ನರಸಿಂಹ | ಪರಮ ಪ್ರೇಮದ ನರಸಿಂಹ ಸ್ವಾಮಿ ತಂದೆ ಮುದ್ದು ಮೋಹನದಾಸರ ಧಾಮದಿ ನೆಲಸಿಹ ಸ್ವಾಮಿ ಶ್ರೀ ನರಸಿಂಹ 3 ಭಕ್ತರ ನರಸಿಂಹ | ಭವಭಯ ಒತ್ತುವ ನರಸಿಂಹ ಭಕ್ತಿ ಭಾವದಿಂದ ಭಜನೆಯ ಮಾಳ್ಪರÀ ಮುಕ್ತಿ ಮಾರ್ಗ ತೋರಿ ಸಲಹುವ ನರಸಿಂಹ 4 ಸುಲಭ ನರಸಿಂಹ | ನೀ ಬಹು ದುರ್ಲಭ ನರಸಿಂಹ ಒಲಿಯುವ ಗೋಪಾಲಕೃಷ್ಣವಿಠ್ಠಲ ಹರಿ ನೆಲಸಿ ಹೃದಯ ಮಂದಿರದಲಿ ನರಸಿಂಹ 5
--------------
ಅಂಬಾಬಾಯಿ
ನಗುಮೊಗ ಚಂದಿರ ಸೊಗಸುಗಳಿಗೆ ಬಲು ಮುಗಿ ಬೀಳುತಲಿಹರೊ ನೀ ಸಿಗದಿರೊ ಪ ಹಗರಣದಲ್ಲಿ ಪನ್ನಗವೇಣಿಯರು ಸಿಗಲು ಆಗಲೆ ಬಲು ರಗಳೆ ಮಾಡುವುದು ಅ.ಪ ಬಲ ಪೂತನಿಯೊಮ್ಮೆ ಲಲನೆಯ ವೇಷದಿ ಬಲು ಮೋಸದಿ ವಿಷ ಮೊಲೆಯನ್ನು ಉಣಿಸಿದ್ದು ಲಲನೆಯರಿಗೆ ನಿನ್ನ ಸುಳುವನು ಕೊಡದಿರೊ 1 ಪತಿಗಳ ತ್ಯಜಿಸುವ ಸತಿಜನರಿರುವರು ಅತಿಮೋಸದಿ ನಿನ್ನ ಹಿತವ ಬಯಸುವರು ಮತಿಗೊಟ್ಟರೆ ಇವರು ಅತಿ ಸುಲಭದಿ ನಿನ್ನ ರತಿಯಲಿ ಸಂಸಾರ ಚ್ಯುತಿಯ ಪೊಂದುವರು 2 ರೆನ್ನುತ ಕರೆವರು ಕನ್ಯೆಯರುಗಳು ಸಣ್ಣ ಲೋಭಕೆ ಇವರನು ಸೇರಿದರೆ ಪ್ರ ಸನ್ನನಾಗದಿರೆ ನಿನ್ನನು ಬಿಡರೋ 3
--------------
ವಿದ್ಯಾಪ್ರಸನ್ನತೀರ್ಥರು
ನಾಗವೇಣಿಯೆಂದರೆ ಹೀಗೇಕೆ ಮಾಳ್ಪಿರಿ ಬಾಗಿಲು ಕುಟ್ಟುವುದೇಕೆ ನೀವ್ ಪ ಬಾಗಿಲು ಬಿಡುವೊಡೆ ಹೇಗದು ಸಾಧ್ಯವೊ ಬೇಗ ಹೇಳು ನೀನಾರು ಇನ್ನು ಅ.ಪ. ಆಗಮ ಕದ್ದೊಯ್ದ ಅಸುರನ ಕೊಂದು ನಾ ನಾನಾಗಲೆ ನಾಲ್ಮೊಗಗಿತ್ತೆ ಕೇಳಿ ಆಗಲೆ ಆಗಮದಲಿ ನಿನಗರ್ತಿಯಷ್ಟಿದ್ದರೆ ಮೂಗನ್ಹಿಡಿದು ಕೂಡೋ ಬೇಗ 1 ಮೂಗನ್ಹಿಡಿವ ಒಣಯೋಗಿಯು ನಾನಲ್ಲ ಆ ಗಿರಿಯನು ನಾ ಪೊತ್ತೆ ಕೇಳಿ ಈಗ ನಾವರಿದೆವು ನೀ ಗಿರಿ ಹೊರವಡೆ ಇಂದು 2 ಕಳ್ಳನಲ್ಲ ಭೂಮಿ ಕಳ್ಳನ ಕೊಂದೆನೆ ಸೂಕರ ನಾನಾಗಿ ಕೇಳಿ ಘೊಳ್ಳನೆ ನಗುವರು ಕೇಳಿದವರು ಇದ ಮೆಲ್ಲು ಹೋಗಿ ನೀ ಮಣ್ಣ 3 ಮಣ್ಣು ಮಾತೇಕೆ ಹಿರಣ್ಯಕನನು ಕೊಂದೆ ಚಿಣ್ಣನ ಕಾಯ್ದೆನು ಕೇಳಿ ಚಿಣ್ಣರ ಸಾಕ್ಷಿಯ ಬಿಟ್ಟರೆ ನಿನಗಿಲ್ಲ ಚಿಣ್ಣನಾಗು ನೀ ಹೋಗÉೂ 4 ಸಣ್ಣವನಾದರೂ ಘನ್ನನು ನಾನಾದೆ ಪುಣ್ಯನದಿಯ ನಾ ಪೆತ್ತೆ ಕೇಳಿ ಬಿನ್ನಾಣ ಮಾತಿಗೆ ಸೋಲುವರಲ್ಲವೊ ಬೆನ್ನು ತಿರುಗಿಸಿ ನೀ ಪೋಗೊ5 ತಿರುಗಿಸಿದವನಲ್ಲ ಬೆನ್ನನೊಬ್ಬರಿಗೂ ನಾ ಪರಶುಧರನು ನಾ ಕೇಳಿ ಅರಸರಲ್ಲ ನಾವ್ ಸರಸಿಜನೇತ್ರೆಯರು ಕರುಣರಹಿತ ನೀ ಪೋಗೊ 6 ಚರಣರಜದಿ ನಾ ಶಿಲೆಯನುದ್ಧರಿಸಿದೆ ಕರುಣರಹಿತನೆ ಪೇಳಿ ನೀವು ಸರಸ ಮಾತುಗಳನು ಮನ್ನಿಸಿ ಎಮ್ಮನು ಕರಿಗಿರೀಶ ನೀ ಕಾಯೋ ಸ್ವಾಮಿ 7
--------------
ವರಾವಾಣಿರಾಮರಾಯದಾಸರು
ಶ್ರೀ ವಿಜಯದಾಸರು ಆಲಿಸೀ ಸಜ್ಜನರೆಲ್ಲ | ಆಲಿಸಿಅಲಿಸಿ ಶಿಷ್ಯ ಸಂಪತ್ತಿ | ಬಹುಮೇಳವಿಸಿತು ದಾಸ ವೃತ್ತಿ | ಆಹಲೀಲೇಲಿ ಚರಿಸುತ ಪಾಲಿಸಿ ಸುಜನರಮಾಲೋಲ ಧ್ಯಾನದಿ ಕಾಲವ ಕಳೆವಂಥ ಅ.ಪ. ಸತ್ರಯಾಗದ ನೆವದಿಂದ | ಒಬ್ಬಪುತ್ರನಿರೆ ಮುದದಿಂದ | ಕಾಳತ್ರ ಮಡಲಿಘಾರೆ ನಿಂದ ಪುತ್ರಗೆ ಮೋಹನನೆಂದಾ | ಆಹಹಸ್ತವ ಶಿರದೊಳಿಡುತ್ತಲಿ ಹರಸೀದವಿಸ್ತಾರ ತವ ಕೀರ್ತಿ ಆಗಲೆಂದೆನುತಲಿ 1 ಸುಜನ | ಶಿಷ್ಯತಾ ಪೊಂದುತಂಕಿತಗಳನ | ಕೊಟ್ಟುಗೋಪಾಲ ವಿಠಲಾಂಕದವನ | ಗೈದುಆ ಪಂಗನಾಮ ತಿಮ್ಮಯ್ಯನ | ಆಹಆ ಪರಿಯಲಿ ವೇಣುಗೋಪಾಲ ವಿಠಲನಶ್ರೀಪಾದದಾಸನ್ನ ಮಾಡುತ್ತ ಪೊರೆದಂಥ 2 ಸೂತ್ರ | ಆಹಅಪ್ಪನಾದ ಗುರು ಗೋವಿಂದ ವಿಠಲಗೆಕಪ್ಪ ತೆರದಿ ದೇಹ ನರ್ಪಿಸಿ ಮೆರೆದನ 3
--------------
ಗುರುಗೋವಿಂದವಿಠಲರು
ಸುಲಭದ ಮಾತಿದು ತಿಳಿದು ಪೇಳಿ ಹೊಲಬುದಪ್ಪಲು ಬೇಡ ಸುಲಿಗೆಯಾಹುದು ಮುಂದೆ ಪ ಅಂತರಿಕ್ಷದಲೊಂದು ನಿಂತಿಹ ವೃಕ್ಷವಾ- ನಂತಾನಂತವಾದೆಲೆಗಳುಂಟು ನಿಂತಿಹ ಎಲೆಗಳು ಬೀಳುವುದನು ನೋಡಿ ಮಂತ್ರಿಯೊಬ್ಬನು ಕುಳಿತು ಎಣಿಸುವನಯ್ಯ 1 ಭೂಮಿಯ ಮೇಲೊಂದು ಭೂಮಿಯು ಜನಿಸಲು ತಾ ಮನಸೋತನು ದೊರೆಯೊಬ್ಬನು ಪ್ರೇಮದಿ ರಾಜ್ಯವನಾಳುವ ಸಮಯಕ್ಕೆ ಸೀಮೆಯ ಮೇಲೆಲ್ಲ ಗುಡಿಗಟ್ಟಿತಯ್ಯ 2 ಕಡಗೋಲು ಮಿಡುಕಿತು ಒಡೆಯಿತು ಪಾತ್ರವು ಪಿಡಿದ ಬೆಣ್ಣೆಯೊಳೊಂದು ಗಿಡ ಹುಟ್ಟಿತು ಅಡವಿಯ ಮಧ್ಯದಿ ಹುಟ್ಟಿದ ಗಿಡವಿನ ಎಡೆಯೊಳು ಗಿಣಿ ಬಂದು ಮರಿಯಿಕ್ಕಿತಯ್ಯ 3 ಬಿಲ್ಲುಗಾರನು ಬಂದು ಬಲ್ಲಿದ ಪಕ್ಷಿಯ ಮೆಲ್ಲನೆ ಕೆಡೆಯಲು ಬೇಕೆನುತ ನೆಲ್ಲಿಯ ಎಲೆಯನ್ನು ಎಣಿಸಿ ಬೀಸಾಡುವ ನಲ್ಲನೊಬ್ಬನು ಕಂಡು ಹೊರಗಿಟ್ಟನಯ್ಯ 4 ಗುಡಿಯ ಬಾಗಿಲ ಮುಂದೆ ವೃಕ್ಷದ ಗಿಣಿಯನ್ನು ಮಡದಿಯೋರ್ವಳು ಕಂಡು ಒಳಗಿಟ್ಟಳು ಗಿಡುಗನ ಹಾವಸೆ ಒಡೆಯನು ಕಾಣುತ್ತ ಒಡಲಾಳು ಸುರಭಿಯ ಕಟ್ಟಿದನಯ್ಯ 5 ಮೂಗನು ಕಾಣುತ್ತ ಕೂಗ್ಯಾಡಿ ಕರೆಯಲು ಆಗಲೇ ಕಿವುಡನು ಧ್ವನಿಯ ಕೇಳಿ ಬೇಗದಿ ಕುರುಡನು ಬಂದು ಹಾಲೆರೆಯಲು ಆಗಲೆ ಪಕ್ಷಿಯು ಉಂಡು ಹಾರಿತಯ್ಯ6 ಬುದ್ದಿಹೀನನು ಕಂಡು ಶುದ್ಧ ಸ್ವಾಮಿಯೊಳು ತಿದ್ದಿದ ಗುಡಿಗಳು ಬಿದ್ದಮೇಲೆ ಎದ್ದು ಪಕ್ಷಿಯು ಹೋಗಿ ವರಾಹತಿಮ್ಮಪ್ಪನು ಇದ್ದಲ್ಲಿಗಾಗಿಯೆ ಹಾರಿಹೋಯಿತಯ್ಯ 7
--------------
ವರಹತಿಮ್ಮಪ್ಪ
ಆಗಲೆ ಕಾಯಬೇಕು ಅಂಬುಜಾಕ್ಷನೆ ಎನ್ನ |ಈಗ ನೀ ಕಾಯ್ದರೇನು ಕಾಯದಿದ್ದರೇನು ಪಹೊನ್ನು ಹಣ ಎನಗುಂಟು ಹೆಸರಾದ ಮನೆಯುಂಟು |ಚಿನ್ನ-ಚೀನಾಂಬರವುಂಟು ಚೆಲುವುಪ್ಪರಿಗೆಯುಂಟು ||ಮೊನ್ನೆ ಹುಟ್ಟಿದ ಗಂಡು ಮಗು ಒಂದು ಎನಗುಂಟು |ಸನ್ನೆ ಶಕ್ತಿಗುಂದಿದಾಗ ಸಂಗಡಲೊಬ್ಬರ ಕಾಣೆ 1ನಂಟರಿಷ್ಟರು ಉಂಟು ನೆರೆ-ಹೊರೆ ಎನಗುಂಟು |ಎಂಟು ಭಾಗ್ಯಗಳುಂಟು ಬಂದು ಹೋಗುವರುಂಟು ||ಕಂಠಕೆ ಹೊದ್ದಿದ ಕಾಂತೆಯರೆನಗುಂಟು |ಒಂಟಿಯಾಗಿ ಹೋಗುವಾಗ ಸಂಗಡೊಬ್ಬರನು ಕಾಣೆ 2ಒಂದು ಕ್ಷಣ ಮೊದಲಾದವಾತಘಾತಗಳಿಂದ |ಅಂದಿನ ವ್ಯಾಧಿಗಳು ಬಾಧಿಸುತಿರಲು ||ಇಂದಿರೇಶನೆ ನಿನ್ನ ಸಂಗವೆಲ್ಲವೆ ಬಿಟ್ಟೆ |ಬಂದಿನ್ನು ಕಾಯಬೇಕೊ ಪುರಂದರವಿಠಲ 3
--------------
ಪುರಂದರದಾಸರು
ನೋಡುವ ಬನ್ನಿರಯ್ಯ ಪಕಾವೇರಿಯ ಭವಹಾರಿಯ |ಮುಕ್ತಿಕಾರಿಯ ನೋಡುವ ಬನ್ನಿರಯ್ಯ ಅ.ಪಮಾತೆಯ ನುತಜನಜಾತೆಯ ಹರಿಮನಃ |ಪ್ರೀತೆಯ ಭುವನವಿಖ್ಯಾತೆಯ ||ನೀತಿಯುನ್ನತಕರದಾತೆಯ ಶಿವನ ಸಂ-|ಭೂತೆಯ ನೋಡುವ ಬನ್ನಿರಯ್ಯ 1ಬಂದು ಸಕಲ ಮುನಿವೃಂದ ನೆರರೆಯೆ ವಿೂಯ-|ಲಂದು ನಾರದಮುನಿ ಪೊಗಳುತಿರೆ ||ಸಂದೇಹವಿಲ್ಲ ನೋಡಿದಡೆ ಮುಕುತಿಯಹು-|ದೆಂದರೆ ಮುಳುಗಲದೇತಕಯ್ಯ? 2ಅರ್ಕಚಂದ್ರವಹ್ನಿಪುಷ್ಕರದೊಳು ಮಿಂದು |ಚಕ್ರತೀರ್ಥದೊಳಗೋಲಾಡಿ ||ಗಕ್ಕನೆ ಸದ್ಗತಿಯಹುದೆಂದು ಮನೆಗಳ |ಕಕ್ಕುಲತೆಯ ಬಿಟ್ಟು ನಡೆಯಿರಯ್ಯ 3ಕಂಡರೆ ಸಕಲಪಾತಕಪರಿಹಾರ, ಪಡೆ-|ದುಂಡರೆ ದುರಿತ-ದುರ್ಜನ ದೂರವು ||ಕೊಂಡಾಡಿದವರಿಗನಂತ ಫಲವು ನೀ-|ರುಂಡರೆ ಭವಬಂಧ ಮೋಕ್ಷವಯ್ಯ 4ಗಂಗೆ-ಯಮುನೆಗೆ ಹೋದಡೆ ಮೂರೈದುದಿ-|ನಂಗಳಿಗಹುದು ಮುಕುತಿಯೆಂದಡೆ ||ಹಿಂಗದೆ ಕಾವೇರಿಯ ನೋಡಿದಾಕ್ಷಣ ಪಾ-|ಪಂಗಳಿರದೋಡಿ ಪೋಪುವಯ್ಯ 5ಯಾಗಾದಿ ಸ್ವರ್ಗಯೋಗದಿ ಪೊಕ್ಕು ಕಾಶಿಯೊಳು |ಆಗಲೆ ತನುವ ಬಿಡಲು ಮುಕುತಿ |ಭೋಗಿಶಯನನ ದಿನದಲಿ ಕಾವೇರಿಗೆ |ಹೋಗಿ ಮಿಂದವರಿಗಿದೇ ಗತಿಯಯ್ಯ 6ಕಾವೇರಿಯ ಗಾಳಿ ಸೋಕಿದ ದೇಶದೊ-ಳಾವಾವ ಮನುಜರು ಸುಕೃತಿಗಳೇ ||ಕಾವೇರಿಯ ತೀರವಾಸಿಗಳಿಗೆ ಮಕ್ತಿಆಹೋದು ಸಂದೇಃವಿಲ್ಲವಯ್ಯ 7ಆವಾವ ಜನ್ಮಕರ್ಮಂಗಳು ಸವೆವರೆಕಾವೇರಿಯ ಕಾಡು ಸುಖಬಾಳಿರೈ ||ಶ್ರೀವರ ಸ್ವಾಮಿ ಶ್ರೀಪುರಂದರವಿಠಲನಸೇವೆಯೊಳನುದಿನವಿಪ್ಪುದಯ್ಯ 8
--------------
ಪುರಂದರದಾಸರು
ಯೋಗಿಯ ನಡತೆ ಲೋಕಕ್ಕೆ ವಿರುದ್ಧಆಗಲೆಂದೇ ಮೂಡುತಿರಲವನೇ ಗೆದ್ದಪಸ್ನಾನವೆಂಬುದು ಇಲ್ಲ ಸಂಧ್ಯಾದಿ ಮೊದಲಿಲ್ಲಹೀನ ಶೀಲತ್ವವದು ಇರುತಿಹುದುಏನೇನು ಶುಚಿಯಿಲ್ಲ ಜಾತಿ ಸಂಕರವೆಲ್ಲತಾನು ಪಿಶಾಚಿಯಂತಿಹನುಯೋಗಿ1ಕಂಡಲ್ಲಿಯೆ ಉಂಬ ಕಂಡ ಕಡೆಯೆತ್ತಿಂಬಹೆಂಟೆ ಹುಡಿಯನ್ನದಲೆ ಮಲಗಿಕೊಂಬಭಂಡ ನಡತೆಯ ನಡೆದು ಭ್ರಷ್ಟನಾಗಿ ಕಾಣಿಸುತಉಂಡ ಬಾಯಿಯ ತಾನು ತೊಳೆಯದಿಹಯೋಗಿ2ದೇಹಸ್ಥಿತಿಯನು ನೋಡೆ ಮಣ್ಣಿಹುದು ಗೇಣುದ್ದಊಹಿಸಲು ತಲೆಯಲ್ಲ ಜಡೆಗಟ್ಟಿ ಬಿದ್ದಿಹುದುದೇಹಪರವಶನಾಗಿಉನ್ಮತ್ತಸ್ಥಿತಿಯಾಗಿದೇಹಿ ಚಿದಾನಂದಗುರುತಾನಾದಯೋಗಿ3
--------------
ಚಿದಾನಂದ ಅವಧೂತರು
ಹಿಂದಿನ ಬವಣೆಗಳೆಲ್ಲ ಆಗಲೆ ಮರೆದೆಯೇನೊ |ಇಂದುಬಂದ ಭಾಗ್ಯವು ನಿಜವೆ ವೆಂಕಟತಂದೆ?ಪತಲೆಗೆ ಹುಲಗಲ ಹೂವಕಟ್ಟಿತುರುಗಳ ಕಾಯುತಲಿದ್ದೆ |ಹಲವು ರತ್ನದ ಮುಕುಟ ಈಗ ಇಟ್ಟಿಹೆನೆಂದು 1ಒಪ್ಪಿಡಿಅವಲಕ್ಕಿಯನು ಒಪ್ಪದಿಂದ ಸವಿದೇ ಸವಿದೆ |ತಪ್ಪದೆ ಪಂಚಾಮೃತ ಉಂಡು ಸೊಕ್ಕಿದೆನೆಂದು 2ಭಾಗ್ಯವು ಬಂದರೆ ಭಕ್ತರನು ಮರೆವರೆ ಸೌ-|ಭಾಗ್ಯವಂತ ನೀನುಪುರಂದರವಿಠಲ3
--------------
ಪುರಂದರದಾಸರು