ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೂತ ರಾಜನುತ ವಿಠಲ | ಕಾಪಾಡೊ ಇವನಾ ಪ ದಾತ ನೀನಲ್ಲದಲೆ | ಕಾವರಾರಿಹರೋ ಅ.ಪ. ಗುರು ರೂಪಿ ತೈಜಸನು | ನೆರವಾಗಿ ಸ್ವಾಪದಲಿವರಸು ಉಪದೇಶವನು | ಇತ್ತು ಪೊರೆದಿಹನೋ |ಮರಳಿ ಇವ ಲಾತವ್ಯ | ಗುರುರಾಜ ಭಕ್ತನಿಹಪೊರೆಯ ಬೇಕಿವನೆನುತ | ಪ್ರಾರ್ಥಿಸುವೆ ಹರಿಯೇ 1 ನಿಷ್ಕಾಮ ಭಕ್ತನನ | ಮಾಡಿ ನೀ ಸಲಹಯ್ಯಸತ್ಕಾಮಗಳ ಗರೆದು | ಸಾಧನೆಯ ಗೈಸೀದುಷ್ಕಾಮಗಳಿಗೆಡೆಯ | ನೀ ಕೊಡದೆ ಪೊರೆಯಯ್ಯಸತ್ಕರ್ಮ ಸತ್ಸಂಗ | ಸರ್ವದಾ ಕೊಡುತಾ 2 ಸತಿಸುತರು ಹಿತರಲ್ಲಿ | ದುರ್ಮಮತೆ ಕಳೆಯುತ್ತಮತಿಮತಾಂ ವರರಂಘ್ರಿ | ಶತ ಪತ್ರರತನಾಹಿತದಿಂದ ನೀ ಸಲಹಿ | ಗತಿ ಪ್ರದನು ಆಗಯ್ಯಕೃತಿ ರಮಣ ಪ್ರದ್ಯುಮ್ನ | ಪ್ರತಿ ರಹಿತ ದೇವಾ 3 ಮಧ್ವಮತ ಪದ್ಧತ್ಯಭಿ | ವೃದ್ಧಿಗೈಸುತಲಿವಗೆಸಿದ್ಧಾಂತ ಜ್ಞಾನದಲಿ | ಸಿದ್ಧ ನೆನಿಸಯ್ಯಾವೃದ್ಧಿಯಾಗಲಿ ಜ್ಞಾನ | ವೈರಾಗ್ಯ ಭಕ್ತಿಗಳುಮಧ್ವರಮಣನೆ ದೇವ | ಬುದ್ಧಿ ಬೋದಕನೇ 4 ಬದಿಗ ನೀನಾಗಿದ್ದು | ಹೃದಯದವಕಾಶದಲಿಮುದದಿಂದ ತವರೂಪ | ತೋರಿ ಸಲಹಯ್ಯಾ |ಇದಕನ್ಯ ನಾ ಬೇಡೆ | ಯದು ವರೇಣ್ಯನೆ ಕೃಷ್ಣಸದಯ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 5
--------------
ಗುರುಗೋವಿಂದವಿಠಲರು