ಮಾಡಿದ್ಯಾ ಇಂದಿಗೆ ಹೀಂಗ | ಆಗದ್ಹಾಂಗ || ಕೂಡಿ ದುರ್ಜನರೆಲ್ಲ ನಗುವ ಪರಿಯಲಿ ಪ
ಏನು ಕಂಡು ಒಲಿದೀ ನೀ ಅವಗೆ | ಖಳನ ಘಾತಕಮನದವಗೆ | ತಾನು ದಾರೆಂದು ವಿಚಾರಿಸದಧಮಗೆ |ಸಾನುಕೂಲಾಗಿ ಸರ್ವ ಬಗೆಯಲಿ 1
ಸಾಧು ಸಂತರು ಎಂಬುದನರಿಯಾ | ಭೇದವಾದ ಕುಬುದ್ಧಿಯಮರೆಯಾ || ಕಾದಾಡಿ ಕರ್ಮದ ಹಾದೀ ಹಿಡಿಯದ | ವಾದಕಂಜದ ಜನ ಸಾಧಕನಿಗೆ 2
ಹಿಂದಿನ ಗುಣಗಳ ಬಿಟ್ಟ್ಯಾಕೋ | ಮಂದಿಗೆ ಪದವಿಯ ಕೊಟ್ಟ್ಯಾಕೋ ತಂದೆ ಸದ್ಗುರು | ಭವತಾರಕನಂಘ್ರಿಯ | ಹೊಂದಿದವರಿಗಭಿಮಾನವಿಲ್ಲದಂತೆ 3