ಭಕ್ತನ್ನ ಮಾಡಿಕೊ ಎನ್ನಾ ನಿಜ ಭಕ್ತನಾಗಿ ನಿನ್ನ
ಭಕ್ತನ್ನ ಮಾಡಿಕೋ ಎನ್ನಾ ಪ
ಸಾರೆ ಕೀಚಕ ಬೇಡ ಓಡಿ ಅದು [?]
ಪಾರಿ ಸಿಡಿವ ಪರಿಜಾಲದಿ ಕೂಡಿ
ಆಡು ಆಗದೆನ್ನ ಕಾಡಿ ಮತ್ತೆ
ಮೂರು ಮಡುವಿನೊಳು ನೋಳ್ಪರು ದೂಡಿ ಭಕ್ತನ್ನಾ 1
ಘೃತ ಭಾಂಡವಿರೆ ನೊಣ ನೋಡಿ ಅಲ್ಲಿ
ಪರಿ ಭರದಿ ಈಸಾಡಿ
ಸತಿಸುತಯುತ ಭವನೋಡಿ ಅಲ್ಲಿ
ಮತಿಗೆಟ್ಟು ಮೋಹಿಸಿ ಬಿದ್ದೆನೊದ್ದಾಡಿ 2
ಉರಿಯ ಕಾಣಲು ಶಿಶು ಐದಿ ತಾ
ಭರದಿಯದರ ಪರಿಯರಿವೋಲುನೊಯ್ದು
ಅರಿದೆ ವಿಷಯದುರಿ ಮೈಯ್ದು ಇನ್ನು
ನರಸಿಂಹ ವಿಠ್ಠಲ ನೀನೇ ಗತಿಯೆಂದೆ ಭಕ್ತನ್ನ 3