ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಮಾತನು ಕೇಳೋ ತಂದೆ ಎರವಾಗದಿರು ನೀನೆಂದೆನಿನ್ನ ಕುಲವನುದ್ಧರಿಸೆಂದೆ ನೀನು ಸುಪುತ್ರನಾಗೆಂದೆ ಪ ಸುಳ್ಳನು ಬಿಡುಎಂದೆ ಶರಗೊಡ್ಡಿ ಕೊಂಬೆನು ಎಂದೆಕಳ್ಳತನವು ಬೇಡವೆಂದು ಕಾಲಿಗೆ ಬೀಳುವೆ ತಂದೆ 1 ನಾಲಿಗೆ ಸಂಬಾಳಿಸೆಂದೆ ನಾರಿಯ ನೆಚ್ಚದಿರೆಂದೆಜಾಲವನೆ ತಳೆ ಎಂದೆ ಜೋಕೆಯ ಸಾಧಿಸು ಎಂದೆ 2 ವಂಚನೆ ಬೇಡವು ಎಂದೆ ಭಾಷೆಯ ತಪ್ಪದಿರೆಂದೆಕಿಂಚನು ಆಗದಿರೆಂದೆ ಕುಮಂತ್ರ ನೆನಿಸದಿರೆಂದೆ3 ಸಂಸಾರ ನಂಬದಿರೆಂದೆ ಸ್ವಪ್ನದ ತೋರಿಕೆ ಎಂದೆಧ್ವಂಸವು ಎಲ್ಲವು ಎಂದೆ ಯಾವುದು ಸತ್ಯವಲ್ಲೆಂದೆ 4 ಕನಕದ ಮಾತಲ್ಲವೆಂದೆ ಕಾಲಗೆ ತುತ್ತಾಗದಿರೆಂದೆಚಿದಾನಂದನ ಹೊಂದು ಎಂದೆ ಚಿತ್ತಾರ ಮಶಿನುಂಗಿತೆಂದೆ5
--------------
ಚಿದಾನಂದ ಅವಧೂತರು