ಒಟ್ಟು 4 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿ ನೋಡಿನೊ ರಂಗಾ ನಿನ್ನ ನೋಡಿನೊ ಆಡಲೇನಯ್ಯಾ ಪರಸತಿಯರ ಮೋಹಕ್ಕೆ ಸಿಲುಕಿ ಪ ಹೆಣ್ಣ ನಾ ಕಾಣುತ ಮನಸು ದ್ರವಿಸುವದು ದೃಢವಾಗಿ ಮುನ್ನೆ ದಾರಿದ್ರತನ ಯೆಣಿಸಿಕೊಳದೆ ಕಣ್ಣು ಹೋಗುವ ಸುದ್ದಿ ತಿಳಿಯದಲೆ ನೀಕ್ಷಿಸಿ ನಿತ್ಯ 1 ಜಲ್ಪಸಿಲ್ಪಿಗಳಿಂದ ಮಂತ್ರ ಮಾಡುವೆ ಅವಳಾ ಬಲ್ಪು ವಯ್ಯಾರ ಗುಣಗುಣಿಸಿಕೊಳುತಾ ತಲ್ಪಮಿಕ್ಕಾದ ಭೋಗದ್ರವ್ಯ ಬಯಸಿ ವಿ ಕಲ್ಪ ಸಂಕಲ್ಪದಲ್ಲಿ ಬಳುಲುವೆನುಬ್ಬಸವಳಿದು 2 ವ್ಯಾಖ್ಯಾತ ಪಂಡಿತದ್ವ್ಯಾಪಕ ಪಾಠಕ ಮಹಾ ಪ್ರಖ್ಯಾತ ವೇದವೇದಾಂತ ಪ್ರೌಢ ಸೌಖ್ಯ ಪುಸ್ತಕ ಪಾಣಿ ಜ್ಞಾನಿ ಎನಿಸಲು ಅವಳ ಆಖ್ಯಾನ ಕೇಳುತಲೆ ಕಿವಿಗೊಟ್ಟು ಲಾಲಿಸುವೆ 3 ಬೀದಿಯೊಳು ಪೋಗುವವಾಳೊಂದು ಪ್ರಯೋಜನಕೆ ಹಾದಿಯನು ಹಿಡಿದು ಸಮೀಪ ಬರಲು ಪಾದಕಾದರು ಬಿದ್ದು ಮಾತಾಡುವೆನೆಂಬೊ ಮೋದವನು ತಾಳಿ ಏಕಾಂತ ಹುಡುಕುವೆ 4 ಅಂಧಕ ಮೂಕಿ ಬಧಿರೆ ಹೀನಾಂಗ ಅವರೋತ್ತಮ ಜಾತಿ ವಿಧಿ ನಿಷೇಧವನು ಚಿಂತಿಸದೆ ತೀವರದಿಂದ ಅಧೋಗತಿಗೆ ಇಳುವೆನು ಸತ್ಕರ್ಮವನು ತೊರೆದು 5 ನೀರು ಸೀರೆವೊಗಿವಾಗ ಮೈ ತೊಳೆದು ಉಡುವಾಗ ಉರು ಕುಚ ಕಚ ನೋಳ್ಪ ಆಶೆಯಲ್ಲಿ ಮೂರು ಹತ್ತನೆ ತತ್ವ ನೆನೆನೆನೆದು ಯೋಚಿಸಿ ವಾರಿತಿಯ ಕೇಳಿ ತಲೆದೂಗುವೆನೊ ಲೇಸಾಗಿ 6 ಕಣ್ಣುಯಿದ್ದದಕೆ ಸಾರ್ಥಕವಾಗಲಿಲ್ಲ ಪ್ರ ಸನ್ನ ಮೂರುತಿ ಯೆನ್ನ ಸಾಧನವೇನೊ ಘನ್ನ ಏಲ್ಲೆಲ್ಲಿ ನಾ ನೋಡಿದರೆ ಅಲ್ಲಲ್ಲಿ ನಿನ್ನ ರೂಪವ ತೋರೊ ವಿಜಯವಿಠ್ಠಲ ಒಲಿದು 7
--------------
ವಿಜಯದಾಸ
ಪಂಚ ವೃಂದಾವನದಿ ಮೆರೆಯುತಿರುವಾ ||ಪಂಚಾಸ್ಯ ಸಂದಿಷ್ಟ ವೈಭವವ ಕೇಳಿ ಪ ವಿಪುಲ ಮತಿ ಪದಕರ್ಹ ಕಪಿಪ ರಾಮನ ಭಂಟಸ್ವಪನದಾಖ್ಯಾನವನೆ ಶಪಥ ಪೂರ್ವಕದೀ |ವಿಪ್ರಗೋಸುಗವಾಗಿ ಸುಪ್ರಕಟ ಗೈದಿಹರು ಅಪ್ರತಿಮ ಹಯಮೊಗನ ಸುಪ್ರೇಮ ಪಿಡಿದೂ 1 ಆಖ್ಯಾನ ಪೆಟ್ಟಿಗೆಯು ಅಂಧಕಾರದಲಿದ್ದುವ್ಯಾಖ್ಯಾತೃ ವೇದನಿಧಿ ಜನ್ಮತಾಳುತಲೀ |ವ್ಯಾಖ್ಯಾನ ಗೈದಾಗ್ಯು ಭಾವ ತಿಳಿಯದಲೇವೆಪ್ರಖ್ಯಾತಿ ಪಡೆಯದಲೆ ಬೀಗ ಮುದ್ರಿತದೀ 2 ಅಂಧ ಭಾವದೊಲೊಬ್ಬ ಪಂಗು ಭಾವದಲೊಬ್ಬ ಇಂದಿರೇಶನ ಮಹಿಮೆ ಪ್ರಕಟ ಗೈಯ್ಯುವಲೀ|ಅಂಧ ಪಂಗುನ್ಯಾಯ ಆಶ್ರಯಿಸಿ ಪ್ರಕಟಿಸುವಮಂದ ಜನರುದ್ಧಾರ ಕಾರ್ಯ ಗೈಸುತಲೀ 3 ಅನುಮಾನ ತೀರಥರ ಶಾಸ್ತ್ರವನೆ ಮಥಿಸುತ್ತತನುಮನ ಧನಧಾನ್ಯ ತೃಣವೆಂಬ ಕೀಲಿಯಲೀ |ಜ್ಞಾನ ಪೆಟ್ಟಿಗೆ ಬೀಗ ಮುದ್ರೆಯನೆ ತೆರೆಯುತ್ತ ಮನದ ಪಾತ್ರಿಯಲುಣ್ಣಿ ಆಖ್ಯಾನದನ್ನಾ 4 ಸಂತ ಸಂಗದಲಿಂದ ಮಂಥಿಸಲು ತತ್ವಗಳಅಂತ ರಂಗದ ಕದವು ತೆರೆದಂತರಾತ್ಮನನುಕಂತು ಪಿತನಾದ ಗುರು ಗೋವಿಂದ ವಿಠಲನ್ನಅಂತರಂಗದಿ ಕಾಂಬ ಪಂಥವಿತ್ತವರಾ 5
--------------
ಗುರುಗೋವಿಂದವಿಠಲರು
ಪವಮಾನವಿಠಲ | ಕಾಪಾಡೊ ಇವನಾ ಪ ಭುವಿ ಭವ್ಯ ಮರುತಮತ | ದೀಕ್ಷೆಯುಳ್ಳವನಾ ಅ.ಪ. ಭಾವಿಮಾರುತರ ದಿವ್ಯ | ಪಾದಗಳನಾಶ್ರಯಿಸಿದೇವ ಗುಹ್ಯವು ಎಂಬ | ಆಖ್ಯಾನ ಪಠಿಸೀಭಾವಭಕ್ತಿಯಲಿಂದ | ಪೂರಿತನು ತಾನಾಗಿಧಾವಿಸಿ ಬಂದಿಹನೊ | ಎನ್ನ ಬಳಿಗಾಗಿ1 ಗುರುವನುಗ್ರಹ ಪಡೆದು | ಗುರುದತ್ತ ಅಂಕಿತವನೆರವಿನಾ ಸಾಧನವ | ವಿರಚಿಸಲು ಮಾರ್ಗಅರಿಯದಲೆ ಪ್ರಾರ್ಥಿಸುವ | ಕರುಣಪಯೋನಿಧಿಯೇಪೊರೆಯ ಬೇಕಿವನ ಪರಿಯ | ಮರುತಾಂತರಾತ್ಮ 2 ತರತಮಜ್ಞಾನವನು | ಹರಿಗುರು ಸದ್ಭಕ್ತಿಪರಿಪರಿಯಲಿಂ ವೃದ್ಧಿ | ಗೈಸಿವಗೆ ಹರಿಯೇಗುರು ಕರುಣ ಕವಚದಿಂ | ಹರಿಯ ಸರ್ವೊತ್ತಮತೆಅರಿವಾಗಲಿವಗೆಂದು | ಪ್ರಾರ್ಥಿಸುವೆ ಹರಿಯೆ 3 ಮೂರ್ತಿ | ಕೃತಿರಮಣ ದೇವ 4 ಮಧ್ವ ರಮಣನೆ ದೇವ | ಹೃದ್ಯ ಹರಿ ನಿನಕಾಂಬಹೃದ್ಯ ಸಾಧನ ಗೈಸಿ | ಉದ್ದರಿಸೊ ಇದನಾಶುದ್ಧ ಮೂರುತಿ ಗುರು | ಗೋವಿಂದ ವಿಠಲನೆಬುದ್ಧಿಯಲಿ ನೀನಿಂತು | ಶುದ್ಧ ಮತಿ ಈಯೋ 5
--------------
ಗುರುಗೋವಿಂದವಿಠಲರು