ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಜಮುಖನೇ ನಿನ್ನ ಭಜಿಸುವೆ ನಾ ಮುನ್ನ ತ್ರಿಜಗ ವಂದಿತನೆ ಸುಜನರ ಪೊರೆವಾ ಪ. ಆಖುವಾಹನನೆ ಲೋಕÀ ಸುಪೂಜಿತ ನೀ ಕರುಣಿಸಿ ಕೊಡು ಏಕಚಿತ್ತ ಹರಿಯೊಳು 1 ಮಗುವೆಂದು ಭಾವಿಸಿ ನಗುತ ಬಂದೂ ಎನ್ನ ಅಘವ ಕಳೆದು ನಿನ್ನಾಗಮನ ವರವ ಕೊಡೆನ್ನಾ 2 ಎನ್ನಪರಾಧವ ಮನ್ನಿಸಿ ಗಣಪಾ ಚನ್ನಿಗ ಶ್ರೀ ಶ್ರೀನಿವಾಸನ್ನ ತೋರೋ ಬೇಗಾ3
--------------
ಸರಸ್ವತಿ ಬಾಯಿ
ಶರಣು ಗಜಾನನನೆ ಶರಣು ಲಂಬೋದರನೆ ಶರಣು ಪಾರ್ವತಿ ಪುತ್ರ ಶುಭಗಾತ್ರ ಪ ಆದಿಯಲಿ ನಿನ್ನ ಪಾದಭಜನೆಯ ಮಾಡೆ ಸಾದರದಿ ಸಲಹುವೆ ಮೋದವಿತ್ತು ಮೇದಿನಿಯಲಿ ನಿನ್ನಾರಾಧನೆಯ ಮಾಡದವ ನ- ರಾಧಮನೆನಿಸುವನಿದು ಪುಸಿಯಲ್ಲ 1 ಆಖುವಾಹನನೆ ನೀ ಕಳೆ ವಿಘ್ನಗಳ ಸಾಕು ಲಾಲಿಸೆನ್ನ ಏಕದಂತ ಮಣಿ ಭೂಷಣ ಕಾಕುಜನ ಕುಠಾರ ಲೋಕೈಕ ವೀರ 2 ಸಿತಿಕಂಠ ವರಪುತ್ರ ಪ್ರತಿ ವಾಸರವು ನಾ ನುತಿಸಿ ಬೇಡುವೆ ನಿನ್ನ ಸತಿರಹಿತನೇ ಸಿರಿ ರಂಗೇಶವಿಠಲನ ಅತಿಪ್ರೀತಿಯಿಂದ ಭಜಿಪ ಮತಿಯ ನೀಡೋ 3
--------------
ರಂಗೇಶವಿಠಲದಾಸರು