ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಸುದೇವಸುತನಿಗೆ ನಮೋ ನಮೋ ನಮ್ಮ ವಸುಧೆ ಪಾಲಕನಿಗೆ ನಮೋ ನಮೋ ಪ ಮಚ್ಚಾವತಾರಗೆ ಮೊದಲೆ ಮಂಗಳವೆಂದು ಸಾಕ್ಷಾತ ಕೂರ್ಮಗೆ ನಮೋ ನಮೋ ಸುತ್ತಿ ಸುರುಳಿ ಭೂಮಿ ಒಯ್ದಿ ್ಹರಣ್ಯಾಕ್ಷಕನ ವರಾಹ ನಮೋ ನಮೋ1 ಕೂಸು ಕರೆಯೆ ಕಂಬದಿಂದ ಬಂದ್ಹಿರಣ್ಯ- ಕಶ್ಯಪನ ಕೊಂದ್ಹರಿಗೆ ನಮೋ ನಮೋ ಆಕಾಶವ್ಹಿಡಿಯದೆ ಬೆಳದು ಬಲಿಯ ಭಾಗ್ಯ ಆಕ್ರಮಿಸಿದಾತಗೆ ನಮೋ ನಮೋ 2 ಪೊತ್ತು ಕೊಡಲಿ ಕ್ಷತ್ರಿಯರ ಕಡಿದ ಸ- ಮರ್ಥ ಭಾರ್ಗವ ನಮೋ ನಮೋ ಹತ್ತು ಶಿರಗಳ ಕೊಂದು ಸೀತಾಸಮೇತನಾದ ಪೃಥಿವಿ ಪಾಲಕ ರಾಮ ನಮೋ ನಮೋ 3 ಬೆರಳಲಿ ಗೋವರ್ಧನ ಎತ್ತ್ಯಾಕಳಕಾಯ್ದ ಕೊಳಲನೂದುವ ಕೃಷ್ಣ ನಮೋ ನಮೋ ತರಳರೂಪದಿ ತ್ರಿಪುರದ ದುರುಳರನೆಲ್ಲ ಮರುಳು ಮಾಡಿದ ಬೌದ್ಧ ನಮೋ ನಮೋ 4 ಮುದ್ದು ತೇಜಿಯನೇರಿ ಕಲಿಗಳ ಕಡಿದಂಥ ಕಲ್ಕ್ಯಾವತಾರಗೆ ನಮೋ ನಮೋ ಶುದ್ಧ ವೈಷ್ಣವರಿಗೆ ಸುಲಭದಿಂದೊಲಿದು ಮುಕ್ತಿ ಕೊಡುವೊ ಭೀಮೇಶ ಕೃಷ್ಣಗೆ ನಮೋ ನಮೋ 5
--------------
ಹರಪನಹಳ್ಳಿಭೀಮವ್ವ