ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಶುಭಮಂಗಳಂ ಪ ಜಗದೇಕ ವೀರನಿಗೆ ಜಗದುದರ ದೇವನಿಗೆ ಜಗವ ಬಾಯೊಳು ತೋರ್ದ ಮಹಮಹಿಮಗೆ ಜಗವ ಸೃಜಿಸಿದ ಹರಿಗೆ ಜಗವಪಾಲಿಪದೊರೆಗೆ ಜಗವ ಸಂಹರಿಸುವಗೆ ಜಯ ಮಂಗಳಂ ಅ.ಪ ವರಮುನಿಯ ತಾಡನದಿ ಹೊರಡೆ ಲಕ್ಷ್ಮಿಯು ಆಗ ಗಿರಿಗಿಳಿದು ಬಂದು ಹುತ್ತದೊಳಗಿರಲು ಪರಮೇಷ್ಠಿ ಅರಸಿಪಾಲ್ಗರಿಯೆ ಗೋಪಾಲಕನ ವರಕುಠಾರದ ಪೆಟ್ಟಿಗಂಜಿ ನಟಿಸಿದವಗೆ 1 ಗಿರಿಗಿರಿಯ ಸಂಚರಿಸಿ ಅಡವಿಮೃಗ ಬೆನ್ನಟ್ಟಿ ಪರಮಪದ್ಮಾವತಿಯ ಮನದಿ ಕಂಡು ದುರುಳ ಮಾತುಗಳಾಡಿ ಶಿಲೆಯತಾಡಿತನಾಗಿ ಕೊರವಂಜಿ ರೂಪದಿಂ ಕಣಿಯ ಹೇಳಿದಗೆ 2 ಆಕಾಶರಾಜನಿಗೆ ಅಳಿಯನೆನಸಿಕೊಂಡು ಆಕೆ ಪದ್ಮಾವತಿಯ ಕೂಡಿದವ ಬೇಕಾದ ವರಗಳನು ಕೊಡುತ ಭಕ್ತರ ಪೊರೆವಶ್ರೀಕಾಂತ ಕಮಲನಾಭವಿಠ್ಠಲಗೆ 3
--------------
ನಿಡಗುರುಕಿ ಜೀವೂಬಾಯಿ