ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟು ಹೇಳಲಿ ವೆಂಕಟಗಿರಿಯ ದೃಷ್ಟಿಗೆ ಬಹು ಸಿರಿಯ ಬೆಟ್ಟವನೆ ಮನಸಿಟ್ಟೇರಲು ಬೇಡಿದ ಇಷ್ಟಾರ್ಥಗಳ ಈಡಾಡುವ ದೊರೆಯ ಪ ಚಿತ್ರ ವಿಚಿತ್ರದ ಮಹಾದ್ವಾರ ಚಿನ್ನದ ಗೋಪುರ ಸ್ವಚ್ಛವಾದ ಸ್ವಾಮಿ ಪುಷ್ಕರಣಿ ತೀರ ಸುತ್ತಲು ಪ್ರಾಕಾರ ಹೆಚ್ಚಿನ ತೀವ್ರತವೆ ಮನೋಹರ ಮಾರುವ ವಿಸ್ತಾರ ಚಿತ್ತಜನಯ್ಯನ ಶೈಲವೆ ದೂರದಿಂ- ದ್ಹತ್ತಿ ಬರುವುದೀತನ ಪರಿವಾರ 1 ಕಟ್ಟಿದ ಉಡಿದಾರ ಉಟ್ಟಿದ್ದ ನಿರಿಜರಪೀತಾಂಬರ ಕೌಂಸ್ತುಭ ಮಣಿಹಾರ ಗಟ್ಟಿ ಕರಕಂಕಣ ಕುಂಡಲಧರ ಚತುರ್ಭುಜದಲಂಕಾರ ವಕ್ಷಸ್ಥಳದಲ್ಲಿ ಹೊಂದಿದ ಶ್ರೀ ಮಹಾ- ಲಕ್ಷ್ಮಿದೇವಿಯರಿಂದೊಲಿವ ಶೃಂಗಾರ 2 ಆಕಾಶರಾಜನ ಕಿರೀಟ ಚಿತ್ರವು ಬಹುಮಾಟ ಹಾಕಿದ್ದ ಹರಿ ಕಡೆಗಣ್ಣಿನ ನೋಟ ಭಕ್ತರ ಕುಣಿದಾಟ ಭವ ಪಡಿಪಾಟ ಬಿಡಿಸುವ ಯಮಕಾಟ ಕೋಟಿ ಜನರ ಓಡ್ಯಾಟವೆ ನಮ್ಮ ಕಿ- ರೀಟಿಯ ಸಖ ಕೇಶವನ ಮಂದಿರದೊಳ್ 3 ತಪ್ಪುಗಾಣಿಕೆಯ ಬೇಡುವ ಸರ್ಪ ಶೈಲದ ತಿಮ್ಮಪ್ಪ ಕಪ್ಪವ ಕಾಸು ಕವಡೆ ಮುಡುಪು ಹಾಕದೆ ತಾನೊಪ್ಪ ಜಪ್ಪಿಸಿ ನೋಡುವ ಜನರ ತಪ್ಪ ಹುಡಿಕ್ಯಾಡುತಲಿಪ್ಪ ಅಪ್ಪ ಮಹಿಮಾನಂತ ಮೂರುತಿ ತಾ- ನೊಪ್ಪಿದರೊಲಿದು ಕೊಡುವ ಸಾರೂಪ್ಯ 4 ದೇಶದೇಶದೊಳು ಈತನ ವಾರುತೆಯು ತುಂಬಿದ ಕೀರುತಿಯು ಆಸೆಯ ದೈವ ಈ ಮೂರುತಿಯು ಫಲ್ಗುಣ ಸಾರಥಿಯು ಲೇಸಾಗಿ ಜನರ ನೋಡುವ ರತಿಯು ಕರ್ಪುರದಾರತಿಯು ವಾಸವಾಗಿರುವ ಈ ಶೇಷಾದ್ರಿಯಲಿ ಭೀ- ಮೇಶ ಕೃಷ್ಣ ಶ್ರೀನಿವಾಸ ಕೃಪಾಳು 5
--------------
ಹರಪನಹಳ್ಳಿಭೀಮವ್ವ
ನಿತ್ಯ ಶುಭಮಂಗಳಂ ಪ ಜಗದೇಕ ವೀರನಿಗೆ ಜಗದುದರ ದೇವನಿಗೆ ಜಗವ ಬಾಯೊಳು ತೋರ್ದ ಮಹಮಹಿಮಗೆ ಜಗವ ಸೃಜಿಸಿದ ಹರಿಗೆ ಜಗವಪಾಲಿಪದೊರೆಗೆ ಜಗವ ಸಂಹರಿಸುವಗೆ ಜಯ ಮಂಗಳಂ ಅ.ಪ ವರಮುನಿಯ ತಾಡನದಿ ಹೊರಡೆ ಲಕ್ಷ್ಮಿಯು ಆಗ ಗಿರಿಗಿಳಿದು ಬಂದು ಹುತ್ತದೊಳಗಿರಲು ಪರಮೇಷ್ಠಿ ಅರಸಿಪಾಲ್ಗರಿಯೆ ಗೋಪಾಲಕನ ವರಕುಠಾರದ ಪೆಟ್ಟಿಗಂಜಿ ನಟಿಸಿದವಗೆ 1 ಗಿರಿಗಿರಿಯ ಸಂಚರಿಸಿ ಅಡವಿಮೃಗ ಬೆನ್ನಟ್ಟಿ ಪರಮಪದ್ಮಾವತಿಯ ಮನದಿ ಕಂಡು ದುರುಳ ಮಾತುಗಳಾಡಿ ಶಿಲೆಯತಾಡಿತನಾಗಿ ಕೊರವಂಜಿ ರೂಪದಿಂ ಕಣಿಯ ಹೇಳಿದಗೆ 2 ಆಕಾಶರಾಜನಿಗೆ ಅಳಿಯನೆನಸಿಕೊಂಡು ಆಕೆ ಪದ್ಮಾವತಿಯ ಕೂಡಿದವ ಬೇಕಾದ ವರಗಳನು ಕೊಡುತ ಭಕ್ತರ ಪೊರೆವಶ್ರೀಕಾಂತ ಕಮಲನಾಭವಿಠ್ಠಲಗೆ 3
--------------
ನಿಡಗುರುಕಿ ಜೀವೂಬಾಯಿ
ಸಾರಿದೆನೋ ನಿನ್ನ ವೆಂಕಟರಮಣ ಪ ನಾರಪ್ಪಯ್ಯನಿಗೊಲಿದು ಗೋರೂಪದಲಿ ಬಂದಿಯೊ ಅ.ಪ ಸುಂದರ ಶುಭಕಾಯಾ ಆಕಾಶರಾಜನ ನಂದಿನಿಯಳ ಪ್ರೀಯ ವಂದಿಸುವೆನು ಭವಬಂಧನ ಬಿಡಿಸಯ್ಯ 1 ಕುರಕಿಹಳ್ಳಿಯ ಗ್ರಾಮದಿ ಶಿಲೆಯೊಳಗೆನಿಂದು ವರಕೃಷ್ಣಾನದಿ ಜಲದೀ ಅರುಣನುದಯದಲ್ಲಿ ನಿರುತ ಪೂಜೆಯಕೊಳುವಿ 2 ನೀರದ ನಿಭಕಾಯಾ ಧರೆಯೊಳುಕೃಷ್ಣಾ ತೀರ ಕಾರ್ಪರನಿಲಯಾ ಘೋರ ಪಾತಕಹರ ನಾರಸಿಂಹಾತ್ಮಕನೆ 3
--------------
ಕಾರ್ಪರ ನರಹರಿದಾಸರು
ಶ್ರೀ ಪ್ರಸನ್ನ ಶ್ರೀನಿವಾಸ ಕಲ್ಯಾಣ (ಅಣು)34ಮೇರು ಸುತ ಗಿರಿವಾಸ |ಶರಣಾದೆ ನಿನ್ನಲಿ ವಿಶ್ವಜನ್ಮಾದಿಕರ್ತನಿರ್ದೋಷ|||ಶ್ರೀ ಶ್ರೀನಿವಾಸ ||ವಿಷ್ಣು ಸರ್ವೋತ್ತಮ ಸಾಕ್ಷಾತ್ |ರಮಾದೇವಿ ತದಂತರಾ |ತದಧೌವಿಧಿವಾಣ್ಯೌಚ ತತ್ವವನು ಪ್ರತ್ಯಕ್ಷ ಭೃಗುಗೆ |ತಿಳಿಸಿ ಲಕ್ಷ್ಮಿಯ ಇಳೆಯ ಜನರಿಗೆ ಒಲಿಯೆ ಕಳುಹಿಸಿ |ವ್ಯಾಳಗಿರಿವಲ್ಮೀಕಪೊಕ್ಕಿ ಶ್ರೀವತ್ಸಶರಣು |ಶರಣು ಹೇ ಸರ್ವ ಹೃದ್ಗುಹಾಂತಸ್ಥವಿಶ್ವ ಪವೃಷಭಅಂಜನಶೇಷ|ವೇಂಕಟಾದ್ರಿಯ ನೆನೆಯೆ ಪಾಪವಿನಾಶ |ಶ್ರೀಸ್ವಾಮಿತೀರ್ಥದ ದಕ್ಷಪಾಶ್ರ್ವಪರೇಶ ||| ಶ್ರೀ ಶೇಷಾಚಲೇಶ ||ಅರ್ಚಿಪರ ಸಂರಕ್ಷಿಪುದು ನಿನ್ನಪಣವು ಆದುದರಿಂದ ಗೋಪಾನ |ಆಸಿಯತಲೆಯಲಿ ತಡೆದು ಗೋವನು ಕಾಯ್ದ _ಕರುಣಿಯೆ ಭಕ್ತವತ್ಸಲ |ತುಚ್ಛಗೋಪನು ಭಯದಿ ಅಸುಬಿಡೆಚೋಳರಾಯಗೆ ಶಾಪವಿತ್ತು |ಅಚ್ಚುತನೆ ನೀದೇವ ಗುರುವಿನ ಸೇವೆಕೊಂಡು ನಿನ್ನರೂಪ |ಸ್ವಚ್ಛಚಿನ್ಮಯ ಭೂವರಾಹನ ಸಹವಿನೋದ ಲೀಲೆಮಾಡಿ |ಪ್ರೋಚ್ಚನಂದದಿ ಕ್ಷೇತ್ರ ಸಹಬಕುಳಾ ಯಶೋದೆಯ -ಪಾಕಕಾಗಿ ಸ್ವೀಕರಿಸಿ ಹೇ ದಯಾನಿಧೇ ನಿತ್ಯತೃಪ್ತ 1ಅಸಮ ಸತ್ಯವಾಗೀಶ |ಜಗನ್ಮಾತೆಯೆಂದು ಪೇಳಿದಂತೆ ಆಕಾಶ |ಕಂಡಪದ್ಮದಿ ಪದುಮ ಸುಮುಖವಿಲಾಸ |ಶಿಶುವಕೊಂಡಳು ಧರಣಿ ಬಹು ಸಂತೋಷ ||| ದಿಂದ ವಿಹಿತ ಆಶ ||ಧರಣಿದೇವಿ ಆಕಾಶರಾಜನ ಸುತೆಪದ್ಮಾವತಿಯೆಂಬ ನಾಮದಿ |ಪುರಿಯ ಹೊರಗೆ ಪುಷ್ಪವನದಲಿ ಸಖಿಯರೊಡನೆ ಆಡುವಾಗ |ನಾರದನು ಬಹು ವೃದ್ಧರೂಪದಿ ಬಂದು -ಹಸ್ತರೇಖೆ ನೋಡುತ |ಶ್ರೀರಮಾಲಕ್ಷಣವ ಕಾಣುತ ಬ್ರಹ್ಮದೇವನ ತಾಯಿ ಅಂಗಿಯು |ಮಾರಜನಕನೆ ಪತಿಯು ಎಂದು ಪೇಳಿತೆರಳೆ ಶಿರಿಯ ಸ್ಮರಿಸುತ |ಏರಿ ಕುದುರೆಯ ವನದಿ ಪದ್ಮಾವತಿ ಸಂಗಡ -ಆಟವಾಡಿದಿ ಹೇ ದಯಾನಿಧೇ ಶ್ರೀಶಸ್ವರಮಣ 2ಧರಣಿಯೊಡನೆ ಸಂವಾದ |ಮಾಡೆ ಬಕುಳಾ ಪೋಗೆ ನೀನು ಪುಳಿಂದ |ವಿಧಿವತ್ಸರುದ್ರನು ದಂಡ ಗುಲ್ಮಬ್ರಹ್ಮಾಂಡ |ಹಾರ ಗುಂಜಾಕಂಬುವೇಷದಿ ಪೋದಿಯೋ ಮುದದಿಂದ ||| ಕಣಿಪೇಳ್ವ ಚೆಂದ ||ಧರಣಿಪದ್ಮಗೆ ಕಣಿಯಪೇಳಿ ಮದುವೆ ನಿಶ್ಚಯಮಾಡಿ ಬಂದೆಯೋ |ಭರದಿಶುಕಆಕಾಶರಾಜ ಲಗ್ನಪತ್ರವಕೊಡಲು ಬ್ರಹ್ಮ-ಗರುಡಶೇಷಶಿವಾದಿಸುರ ಮುನಿಜನರ ಬಕುಳಾ ಲಕ್ಷ್ಮೀಸಹ ನೀ |ಪೊರಟುಮಾರ್ಗದಿ ಶುಕಮುನಿಯ ನೈವೇದ್ಯ ಉಂಡು ಜನರತೃಪ್ತಿಸಿ |ಸೇರಿಪುರಿಯ ಅಜರ ಮಂದಿರ ಪೋಲ್ವ -ಮನೆಯಲಿ ಪದ್ಮಾವತಿಗೆ ಮಾಂಗಲ್ಯ ಧರಿಸಿದಿ |ಸರಸಿಜಾಸನತಾತಪ್ರಸನ್ನ ಶ್ರೀನಿವಾಸನೆವಿಶ್ವಪಾಲಕ ಹೇ ದಯಾನಿಧೇ ಶರಣು -ಶರಣು ಹೇ ಸೌಭಾಗ್ಯದಾತಾ ಪ. 3||ಶ್ರೀ ಪ್ರಸನ್ನ ಅಣು ಶ್ರೀನಿವಾಸ ಕಲ್ಯಾಣ ಸಂಪೂರ್ಣ||
--------------
ಪ್ರಸನ್ನ ಶ್ರೀನಿವಾಸದಾಸರು